ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರದ ಮುನಿವರರೆ | ಸದ್ಗುರುವರ ನಾರಾಯಣ ಪ್ರಿಯಶ್ರೀ ಪ ನಾರದ ಮುನಿವರರೆ ನಿಮ್ಮಯ ಚಾರುಚರಣಕೆ ನಮಿಪೆನು ಆ ದ್ವಾರಕಾಪುರನಿಲಯ ಕೃಷ್ಣನ- ಸಾರ ಪೇಳ್ದಿರಿ ಅ.ಪ. ಪರಮ ಸುಂದರ ರೂಪನು | ಆ ಕೃಷ್ಣನು ಪರತರ ಪರಮಾತ್ಮನು ಶರಣಜನ ಮಂದಾರನಾತನು ಕರುಣಶರಧಿಯು ಕಾಮಜನಕನು ಸರಸಿಜೋದ್ಭವ ಸುರರಿಗಧಿಕನು ಹರಿಯು ಇವನೆಂದರುಹಿದಿರಿ ಗುರು 1 ಲೋಕಮೋಹಕನಯ್ಯನು | ಶ್ರೀಕೃಷ್ಣನು ಲೋಕ ವಿಲಕ್ಷಣನು ಲೋಕ ಕಂಟಕರನ್ನು ಶಿಕ್ಷಿಸಿ ನಾಕ ನಿಲಯರ ಭರದಿ ರಕ್ಷಿಸಿ ಲೋಕ ಕಲ್ಯಾಣವನ್ನು ಗೈದ ತ್ರಿ ಲೋಕದೊಡೆಯನೆಂದರುಹಿದಿರಿ ಗುರು 2 ವಿಧಿ ಶುಭರೂಪನ | ಶ್ರೀಕೃಷ್ಣನ ದೇವಾದಿದೇವೇಶನ ಪಾವನಾಂಘ್ರಿಗಳನ್ನು ಪೂಜಿಸಿ ಸೇವಿಸುವ ಸೌಭಾಗ್ಯವೆಂದಿಗೆ ದೇವ ಕರಿಗಿರಿನಿಲಯ ನರಹರಿ ಯಿವನೆಂಬುದನೆನಗೆ ತಿಳುಹಿರಿ 3
--------------
ವರಾವಾಣಿರಾಮರಾಯದಾಸರು
ಶ್ರೀ ಕೃಷ್ಣ ಚರಿತ್ರೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸ್ವರ ಋಷಭ ಶ್ರೀ ರಮಣ ಚರಣಾರವಿಂದವ ಆರಡಿ ಪರಿಯಾಗಿ ಸೇವಿಸಿ ಶ್ರೀ ರಮಾ ಬ್ರಹ್ವಾದಿ ಗುರುಪದ ಸೇರಿ ಸೇವಿಸುವೆ| ನಾರಿಮಣಿ ಶಿರಿದೇವಿ ಅಪಾರ ಮಹಿಮೆಯ ತಿಳಿವುದಕೆ ಪೂರ ಮನಗಂಡಿಲ್ಲ ಮತ್ತಿನ್ನಾರು ಬಲ್ಲವರು 1 ಆರಗೊಡವಿನ್ನೇನು ಮತ್ತಿನ್ನಾರು ದೂರಿದರೇನುಸರ್ವವು ಪೂರಮಾಡುವ ನಮ್ಮ ಗುರುಗಳ ಪೂರದಯವಿರಲು| ಮನದಲಿ ಘೋರತರ ಅಭಿಲಾಷೆ ಯೋಗ್ಯತೆ ಮೀರಿ ಇರುವುದು 2 ಮನಸಿನಲಿ ಮಾತ್ಸರ್ಯವಿಲ್ಲದೆ ಘನಕವೀಶ್ವರಗಳಿಗೆವಂದಿಸಿ ಅನುಸರಿಸಿ ಭಾಗವತವನು ಬಹುವಿನುತ ದಶಮ ಸ್ಕಂದದರ್ಥವ ಕನ್ನಡಿ ತೋರಿಸಿದಂತೆ ಸ್ಪಷ್ದದಿ ಕನ್ನಡಿಲ್ಹೇಳುವೆನು 3 ಪದ್ಯ ಭಾರ ಆಘೋರದುಃಖವನು ಶ್ರೀ ರಮೇಶನ ಸ್ತುತಿಸುತಿರುವ ಕಾಲದಲಿ| ಸಾರ ಸಾರಿ ಹೇಳಿದನು ವೃಂದಾರ ಕರುಗಳಿಗೆ 1 ಪದ, ರಾಗ:ಯರಕಲಕಾಂಬೋದಿ ಅಟತಾಳ ಸ್ವರಧೈವತ ಕೇಳಿರೋ ಭೋ ದೇವತೆಗಳಿರಾ ಹೇಳುವೆ ಹರಿಭಾವವ ಹೇಳಿರೋ ನಿಮ್ಮವರಿಗೆಲ್ಲಾ ಭಾಳ ಸಂತೋಷದಿಂದಲೇ ಪ ಇಷ್ಟುದಿವಸ ಭೂದೇವಿ ಕಷ್ಟವ ಬಟ್ಟಳು ಬಹಳ ಸ್ಪಷ್ಟವಾಗಿ ಆಕೆಯಾ ಕಷ್ಟವು ದೂರಾಗುವುದಿನ್ನು || ವಿಷ್ಣುನಾಜ್ಞೆಯಲಿ ನೀವು ವೃಷ್ಣಿ ಕುಲದಲ್ಹುಟ್ಟಿರೋ|| ವಿಷ್ಣುತಾ ದೇವಕಿಯಲ್ಲಿ ಕೃಷ್ಣನಾಗಿ ಹುಟ್ಟುವಾ1 ಪದ ಈ ವಚನವ ಕೇಳಿ ದೇವತಿಗಳಾಗ ಹರಿಸೇವೆ ಆಗಲಿಯೆಂಬೋ ಭಾವದಲಿ ಜನಿಸಿದರು| ಈ ವಸುಧಿಯೊಳಗವರು ಭಾವಕನು ಕಶ್ಯಪ ವಿಭಾವಸುವನ ಪೋಲ್ವ ವಸು ದೇವನಾದನು ಅದಿತಿದೇವಿ ತಾ ಜನಿಸಿದಳು ದೇವಕಿಯು ಆಗಿ| ದೇವ ಪೂಜಕನು ವಸುದೇವ ತಾ ಪ್ರೀತಿಯಲಿ ದೇವಕಿಗೆ ಕೊಟ್ಟ ಸದ್ಭಾವದಲಿ ಬೇಕಾದ್ದು ದೇವಕಿಯಲಿ ವಸುದೇವ ರಥವೇರಿದನು ಆವಾಗ ಕಂಸ ತಾ ತೀವ್ರ ನÀಡಿಸಲಾವತ್ತಿಗಾಯಿತಲ್ಲೆ ವಿಯದ್ವಾಣಿ ಪದ, ರಾಗ(ದೇಸಿ) ಅಟತಾಳ, ಸ್ವರಷಡ್ಜ ಕೇಳು ಕಂಸನೆ ನಿನಗೇಳುವೆ ನಾ ಬಂದು| ಕೇಳು ಕಂಸಾ|| ಬಹಳ ದಿವಸ ಬಾಳಿ ಇರುವವನಲ್ಲ ಕೇಳು ಕಂಸ ಪ ಮಂಗಳಾಂಗಿಯು ಈಕೆ ತಂಗಿ ಎಂದೆನಬೇಡ ಕೇಳು ಕಂಸಾ| ತಂಗಿಯ ಮಗನೇ ನಿನ್ನಂಗಕ್ಕೆ ವೈರಿಯು ಕೇಳು ಕಂಸಾ|| 1 ಭಂಡ ನಾನೆಂದು ಉತ್ಕಂಠಿದಿಂದರ ಬೇಡ ಕೇಳು ಕಂಸಾ| ಎಂಟನೆಯವ ನಿನ್ನ ಘಂಟಸಿ ಕೊಲ್ಲುವನು ಕೇಳು ಕಂಸಾ|| 2 ವೈರಿ ದಾವಾತಿದ್ದಾನೆಂದೆನ ಬೇಡ ಕೇಳು ಕಂಸಾ| ಶುದ್ಧ ಅನಂತಾದ್ರೀಶ ಅವತಿಳಿ ಕೇಳು ಕಂಸಾ|| 3 ಪದ್ಯ ನುಡಿದಿರುವ ಆ ಸತ್ಯವಾಣಿಯ ಕೇಳಿ ಮೃತ್ಯುಗಂಜಿಕೀನ್ನ ಹೊತ್ತುಗಳೆಯದಲೆ ಆ ಹೊತ್ತು ಕೊಲಬೇಕೆಂದು ಸತ್ವರದಿ ಕೇಶದಲಿ ಒತ್ತಿ ಹಿಡಿದು ಕತ್ತಿ ಹಿರಿದೆತ್ತಿದನು ಕÀಂಸಾ| ಆ ವೃತ್ತಿಯನು ತಿಳಯುತಲೆ ಅತ್ಯಂತವಾಗಿ ತನ್ನ ಚಿತ್ತದಲಿ ಮಿಡುಕಿ ಮದಮತ್ತ ಕಂಸಗೆ ನುಡಿದ ಒತ್ತಿ ಈ ಪರಿಯಾ || 1 ಪದ, ರಾಗ:ಆನಂದಭೈರವಿ ಆದಿತಾಳ ಬೇಡಲೊ ನೋಡಿ ಈಕೆಯಲಿ ಮಾಡು ಮಮತೆಯನು ಮಾಡಬೇಡ ಹಿಂಸಾ|| ಪ ಯಾಕೆಕೊಲ್ಲುವಿಯೋ ನೀ ಕರುಣಿಸು ಸಣ್ಣಾಕಿ ನಿರ್ಮಲಾಂಗಿ|| 1 ಕೊಂದರೆ ಎನಗೆ ಕೇಡು | ಮತ್ತದರಿಂದ ನಿನಗೆ ಕೇಡು ತಿಳಿದು ನೋಡು|| 2 ಏಸು ದಿವಸ ನೀನು ಬದುಕುವಿ ನಾಶವಿಲ್ಲವೇನು| ಮೋಸವಾಗದಿರು ಶ್ರೀಶ ಅನಂತಾದ್ರೀ ಕೋಪಿಸುವನು 3 ಆರ್ಯಾ ಬಹಳ ರೀತಿಯಲಿ ಹೇಳಿಕೊಂಡರೂ ಕೇಳಲಿಲ್ಲ ಕಂಸನು ಶೌರಿಯು ಹೀಗೆ || 1 ಪದ, ರಾಗ:ಅನಂದ ಭೈರವಿ ತಾಳ:ಆದಿ ಬೇಡಿದ್ದು ಕೊಡುವೆನು ನಾನು| ಪ ಜೇವ ಹತ್ಯವೇ ಮುಂಚೆ ಕೇವಲ ನಿಂದ್ಯದು ಸ್ತ್ರೀ ವಧಕಂತು ಇನ್ನು ದಾವುದು ಸರಿಯದು || 1 ಹುಟ್ಟುದರೀಕೆಯ ಹೊಟ್ಟೆ | ಮಕ್ಕಳು ಘಟ್ಟಿ ಮನಸು ಮಾಡಿ ಕೊಟ್ಟುಬಿಡುವೆನು ಕೇಳು || 2 ಬಲ್ಲಿದಾನಂತಾದ್ರಿವಲ್ಲಭನ ಆಣಿ|| 3 ಪದ, ರಾಗ:ಯರಕಲಕಾಂಬೋಧಿ ಶೌರಿಯ ವಚನವ ಕೇಳಿ ವೈರಿಯ ಕಂಸನು ಆಗ ಮೋರೆಯ ತೆಗ್ಗಿಬಿಟ್ಟನು ನಾರಿಯ ಕೊಲ್ಲುವದು | ವೈರಿಯ ಭಯ ಕಳೆವುತ ನಾರಿಯ ಕರಕೊಂಡು ||1 ಮುಂದಾ ದೇವಕಿಯಲಿ ಕಂದನು ಆದಾಕ್ಷಣಕೆ ತಂದೊಪ್ಪಿಸಿದನು ಕಂಸಗೆ ನೊಂದ ವಸುದೇವ| ಮುಂದಾ ಕಂಸನ ನೋಡಿ| ಮನನ ಹಾಸ್ಯದಿ ಮತ್ತ ಕಂದನ ತಿರಿಗಿ ಒಪ್ಪಿಸಿ ಆಗಂದನು ಈ ಪರಿಯು || 2 ಶಿಷ್ಟನೆ ನೀಕೇಳೈ ಬಂದಿಷ್ಟಿಲ್ಲಿವನಿಂದೆನಗೆ| ಸ್ಪಷ್ಟದಿ ನಿನಗ್ಹೇಳುವೆ ಎನಗಷ್ಟಮನೇ ವೈರಿ| ದುಷ್ಟನ ಮಾತಿಗೆ ಶೌರಿಯು ತುಷ್ಟನು ಇದು ಎಂದು || 3 ಪದ, ರಾಗ:ಕನ್ನಡ ಕಾಂಬೋದಿ ತಾಳ:ಬಿಲಂದಿ ಮುಂದ ಶೌರಿಯು ತನ್ನ ಮಂದಿರಕ್ಕೆ ಪೋಗಲು ಬಂದ ನಾರದನು ಆಗಲ್ಲೆ ಕಂಸ ಇದ್ದಲ್ಲೆ || 1 ಮಾಡಿದಾ | ಮಾತನಾಡಿದಾ|| 2 ಸುದ್ದಿಯಂಬೋದ್ಹುಟ್ಟಿತು | ಕೆಲಸ ಕೆಟ್ಟಿತು|| 3 ದಾವ ಮೊತೇನ್ಹೇಳಲಿ ದೇವದೇವ ಶ್ರೀಹರಿ ದೇವಕಿಯಲ್ಲಿ ಪುಟ್ಟುವಾ| ನಿನ್ನ ಕೊಲ್ಲುವಾ|| 4 ಅಸುರರಾದವರುಗಳಾ ಅಸುಗಳನ್ನೆ ಹೀರುವಾ ವಸುಧಿ ಭಾರವನಿಳಿಸುವಾ ಕೀರ್ತಿ ಬೆಳಿಸುಮವಾ|| 5 ನಂದಗೋಪಾದಿUಳೆÀಲ್ಲ ನಂದ ಬಾಂದವರು ಮತ್ತು ಮುಂದ ವಸುದೇವಾದಿಗಳು | ದೇವತಿಗಳು|| 6 ಇನ್ನಕೇಳು ಇವರ ಹೊರ್ತು ಅನ್ನರಾದವರು ಎಲ್ಲಾನಿನ್ನ ಅನುಸರಿಸೆ ಇರುವುವರು | ಅಸುರರೇ ಅವರು|| 7 ಮೂಲದಲ್ಲೇ ಮುಂಚೆ ನೀ ಕಾಲನೇಮಿಯೆನಿಸಿ ಈ ಕಾಲಕ್ಕೆ ಕಂಸನಾಗಿರುವಿ | ಮೈಮರ್ತು ಇರುವಿ || 8 ನಿನ್ನ ಪೂರ್ವ ವೈರಿಯು ಚನ್ನಿಗಾನಂತಾದ್ರೀಶಾ ನಿನ್ನ ಕೊಲ್ಲುವನೆಂಬುದದು |ನಿನಗೆ ತಿಳಿಯದು || 9 ಧಿಟ್ಟ ನಾರದನು ಮುನಿಮುಟ್ಟಿ ಬಂದ್ಹೀಂಗನಲು ಥಟ್ಟನೆ ಕಂಸ ಭಯಬಟ್ಟು ಅವರಿಬ್ಬರಿಗೆ ಘಟ್ವ ಬೇಡಿಯ ಬಿಗಿದು ಹುಟ್ಹುಟ್ಟದವರನ್ನ ಬಿಟ್ಟು ಬಿಡುದಲೆÀ ಕೊಂದ ಹುಟ್ಟಿದಾಕ್ಷಣಕೆ|| ಹುಟ್ಟುಗ್ರ ಸೇನನಲಿ ಹುಟ್ಟಿದಾರಭ್ಯ ಬಹು ದಿಟ್ಟಾದ ಸ್ನೇಹವನು ಬಿಟ್ಟ ಆ ಕಂಸ ಕಂಗೆಟ್ಟು ಬಹುಕಾಸೋಸಿ ಬಟ್ಟವನ ಬಂದಿಯ ಲ್ಲಿಟ್ಟುತಾನೆ ಆದ ಪಟ್ಟಕಾಧಿಪತಿಯು|| 1 ಪದ:ರಾಗ:ಶಂಕರಾಭರಣ ಸ್ವರ:ಷಡ್ಜ, ತಾಳ:ಆದಿ ಯೂದವರನ್ನು ಬಹುಪೀಡಾ ಬಡಿಸೀದಾ || 1 ದುಷ್ಟನ ಕೈಯೊಳು ಸಿಕ್ಕು ಶಷ್ಟ ಬಡಲಾರೆವು ಎಂದು ಅಷ್ಟೂರು ನಿಲ್ಲದೆ ದೇಶಭ್ರಷ್ಟರಾಸರು|| 2 ಅನುಬಂಧಿಗಳೆಂಬುವರು ಅನುರಾಗದಿಂದಲ್ಲೆ| ಅವನ ಅನುಸರಿಸಿಕೊಂಡಿರುತಿಹರು ಅನುದಿನದಲ್ಲಿ||3 ಕ್ರೂರಾಗಿ ಇರುವೊನು ಕಂಸಾ ನಾರಿ ದೇವಕ್ಕಿ ದೇವಿಯು ಆರು ಮಹಾಕಾಳಿಯ ಹರೊ ಆಜ್ಞೆಯಿಂದ ಕೀಳುತು ರೋಹಿಣಿ ಗರ್ಭದೊಳಿಟ್ಟಳು|| 4 ದೇವಕಿದೇವಿಯು ವಸುದೇವಾದಿಗಳೆಲ್ಲ ಗರ್ಭ ಸ್ರಾವವಾಯಿತೆಂದೊದರಿದರು ಆ ವ್ಯಾಳ್ಯದಲ್ಲಿ|| 5 ಎಂಟನೆ ಗರ್ಭಾಗಿ ಶ್ರೀ ವೈಕುಂಠೇಶ | ನಿಂತಾನು ಸಾಧು ಕಂಟಕರನ್ನು ಕೊಲ್ಲುವೆ ನೆಂದುತ್ಕಂಠದಿಂದಲಿ || 6 ಶಂಜಾಕ್ಷಿ ದೇವಕಿ ದೇವಿ ಶಂಜನಾಭನುದರವೆಂಬೋ ಪಂಜರದೊಳಿರಲು ತೇಜಃ ಪುಂಜಳಾದಳು7 ಇಂಥಾಕಿಯ ಕಂಡು ಕಂಸಾನಂತಾದ್ರೀಶ ಗರ್ಭದಲ್ಲಿ ನಿಂತಾನೆಂದು ತಿಳದೀಪರಿ ಚಿಂತಿ ಮಾಡಿದಾ|| 8 ಪದ:ರಾಗ:ಶಂಕರಾಭರಣ ಏನು ಮಾಡಲಿ | ನಾ ಇನ್ನೇನು ಮಾಡಲಿ | ಏನು ಮಾಡಲೇನು ವಿಷ್ಟು ತಾನೆ ಬಂದಿನ್ನೇನು ಗತಿ ಇನ್ನೇನು|| ಪ ವೀರರೊಳಗೆ ಸೇರಿ ಎನ್ನ ಮಾರಿ ಹ್ಯಾಂಗ ತೋರಲಿನ್ನೇನು ||1 ತಂಗಿ ವಧ ಜಗಂಗಳೊಳಗೆ ಅಮಂಗಳಿದು ಸು
--------------
ಅನಂತಾದ್ರೀಶ - ಕಥನಕಾವ್ಯಗಳು
ನಿನ್ನ ಸಮಾನ ದೇವರುಂಟೇನೋ ಎನ್ನಯ್ಯ ರಂಗ ಪನಿನ್ನ ಸಮಾನ ದೇವರುಂಟೇ ಇನ್ನೀ ಭುವನಭವಾಂಡದೊಳಗೆಬನ್ನಬಡಿಸದೆ ದಾಸಜನರ ನಿನ್ನ ಪ್ರಾಣಸಮಮಾಡಿ ಪೊರೆಯುವಿ ಅ.ಪಸೋಮಕಾಸುರ ದೈತ್ಯನ್ನ ವಧಿಸಿ ವೇದವನು ತಂದುನೇಮದಿಂ ಮತ್ತೀ ಸೃಷ್ಟಿ ನಿಲ್ಲಿಸಿ ಸಾಗರವ ಮಥಿಸಿಪ್ರೇಮದಮೃತ ಸುರರಿಗುಣಬಡಿಸಿ ನಿಸ್ಸೀಮನೆನಿಸಿಸೋಮಶೇಖರನಮಿತ ಕಷ್ಟವ ಪ್ರೇಮ ದೃಷ್ಟಿಯಿಂ ದೂರ ಮಾಡಿಭೂಮಿತ್ರಯಕೆ ಕ್ಷೇಮ ನೀಡಿದಿ ಕಾಮಿತ ಭಕ್ತರ್ವರಪ್ರದಾತ 1ಎರಡೆ ಅಡಿಗಿಡಿಭುವನವನು ತುಳಿದಿ ಅಮಿತಮಹಿಮಪರಮಉಗ್ರರೂಪ ಧರಿಸಿದಿ ಭಕುತಗಾಗಿಅರಮನೆಯ ಸ್ತಂಭೊಡೆದು (ಮೂ) ಡಿದಿ ಪರಮದಯಾನಿಧಿಚರಣದಾಸರ ಪೊರೆಯುಲೋಸುಗ ನರನ ರೂಪದಿನಿರುತ ವಿಪಿನಕೆ ತೆರಳಿ ದಕ್ಷಿಣಶರಧಿ ಹೂಳಿಸಿದುರಳರ್ಹಾವಳಿ ದೂರ ಮಾಡಿದಿ 2ದ್ವಾರಕೆಂಬ ಪುರವ ನಿರ್ಮಿಸಿ ಅದಕೊಡೆಯನೆನಿಸಿಸಾರಭಕುತರ ಇಷ್ಟಪೂರೈಸಿ ಮಹಲೀಲೆ ನಡೆಸಿಪರಮಕಂಟಕರನ್ನು ನಾಶಿಸಿ ಧರೆಭಾರಮಿಳಿಸಿಪರಮಸುರಗಣಕ್ಹರುಷವಿತ್ತು ಧಾರುಣಿಯನು ಪರಿಶುದ್ಧಮಾಡಿಕರುಣದಾಳುವಿ ಭುವನತ್ರಯವನು ಶರಣಜನಪ್ರಿಯವರದ ಶ್ರೀರಾಮ 3
--------------
ರಾಮದಾಸರು