ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹ- ನುಮನೆಂಬುವ ಹರಿಭಜಕನೀತ 1 ರಮ್ಮೆರಮಣನಾದ ರಾಮಸೇವಕನಂಘ್ರಿ ಒಮ್ಮೆ ನೋಡಲು ದೋಷದೂರವಾಗ 2 ಕರ ಜೋಡಿಸಿ ಮುಗಿದು ಕೊಂ- ಡಾಡುತೀತ ನಗುವ ಮಹಿಮೆಯನು 3 ಆಡಿದ್ವಚನ ಸತ್ಯಮಾಡುವ ಭಕುತರು ಬೇಡಿದ್ವರಗಳ ಚೆಲ್ಲಾಡುವನು 4 ಹರುಷದಿಂದಲಿ ತಾ ಕಿಂಪುರುಷಖಂಡದಿ ತಪಾ- ಚರಿಸುತಿದ್ದನು ಮಹಾಪುರುಷನೀತ 5 ಅರಸರಂತಕನಾದ ಪರಶುರಾಮನ ಗೆದ್ದ ಅರಸನಂಘ್ರಿಗಳನು ಸ್ಮರಿಸಿಕೊಂಡು 6 ಸುಗ್ರೀವನಲ್ಲಿ ಪರಮನುಗ್ರ(ಹ) ಮಾಡುತಲಿ ದ- ಶಗ್ರೀವನಲ್ಲಿ ಬಂದನಾಗ್ರ(ಹ)ದಿಂದ 7 ನಖ ಶಿರದಿಂದುದ್ದವ ಮಾಡಿ ಉರಿವೀಲಂಕೆಗೆ ತಾನಂಕುರವನಿಟ್ಟ(?) 8 ಮರನಕಿತ್ತಕ್ಷಕುಮಾರನ ಮುರಿದು ತಾರ ಮರನ ಕರೆದು(?) ತಂದಮರನಾದನು 9 ವರದಿ ಬೆಳದ ಕುಂಭಕರಣನ ಕೊಂದು ಕಟ್ಟಿ ಸ್ಥಿರಪಟ್ಟವನು ವಿಭೀಷಣರಿಗಿಟ್ಟ 10 ಮಾತೆಕೊಟ್ಟಂಥ ರತ್ನರಾಕಟೆಯನ್ನು ತಂದು ಭೂತಳದೊಡೆಯಗಿಟ್ಟ ಪ್ರೀತಿಯಿಂದ 11 ಜೊತೆಮುತ್ತಿನ ಹಾರ ಕೊಡಲು ಜಾನಕಿ ರಘು- ನಾಥಗ್ವೊಲಿದು ಅಜಪದವಿನಿಟ್ಟ 12 ಸೀತಾಚೋರನ ಪ್ರಾಣಘಾತಕನು 13 ಅಂಜನಾತ್ಮಜ ದೊಡ್ಡ ಸಂಜೀವನವ ತಂದು ಕೊಂದಕಪಿಗಳ ಪ್ರಾಣ ಪಡೆದನೀತ 14 ಕಂಜಾಕ್ಷಿಯಳ ಕರೆತಂದು ಕೂಡಿಸಿ ರಾಮ- ಗಂಜದೆ ಎಡೆಯ ಕದ್ದೊಯ್ದೆಂಜಲುಂಡ 15 ರೋಮ ರೋಮಕೆ ಕೋಟಿ ಲಿಂಗ ಧರಿಸಿದ ಸು- ಜ್ಞಾನಿಗಳೊಡೆಯ ಮುಖ್ಯಪ್ರಾಣದೇವ 16 ರಾಮ ಲಕ್ಷ್ಮಣ ಸೀತಾದೇವೇರಿಂದ್ವೊಡಗೂಡಿ ಈ ಮಹಾಸ್ಥಳದಿ ನಿಂತ ಮಹಾತ್ಮನು 17 ಭೀತಿ ಇಲ್ಲದಲೆ ಭೀಮೇಶ ಕೃಷ್ಣ(ನ) ನಿಜ ದೂತನೆನಿಸಿದ ಪ್ರಖ್ಯಾತನೀತ 18
--------------
ಹರಪನಹಳ್ಳಿಭೀಮವ್ವ
ಎನ್ನ ಪಾಲಿಸು ಪರಮಕಾಯ ರಘುರನ್ನ ರಾಮನ ಪ್ರಿಯ ಗುರುಮಧ್ವರಾಯ ಪ.ಅಂಜನಿ ಆತ್ಮದಲಿ ಬಂದು ರಾಮನಪಾದಕಂಜವಿಡಿದೆ ಕಡಲ ಲಂಘಿಸಿದೆ ಗೋಷ್ಪದದಿಪಂಜು ಬೆಳಗಿದೆ ನಿಶಾಚರನ ಪಟ್ಟಣವಳಿದೆಕಂಜಾಕ್ಷಿಯಳ ತುಷ್ಟಿಗೈದೆ ಗಡಾಸಂಜೀವ ತಂದು ಕಪಿಬಲವ ರಕ್ಷಿಸಿದೆ 1ಕುರುಕುಲಾಧಮನು ಬಲುಸೊಕ್ಕಿ ಸಂಗರಭಟರನೆರಹಿ ಪಾರ್ಥರ ಬಲವ ಗೆಲುವೆನೆಂದವನ ಭರಮುರಿದೆ ಮಹರಥಿಕರೆದೆ ಹರಿದೆ ಅಸಹಾಯ ಶೂರಸರಿಯಾರು ನಿನಗಸಮಧೀರ ಭಾಪುಕರುಣಾಸಾಗರ ಉದಾರ ಅಜಪದದಧಿಕಾರ 2ಏಕವಿಂಶತಿಮಾಯಿ ರಚಿತ ಭಾಷ್ಯವ ಜರಿದೆಶ್ರೀಕಾಂತನ ನಾಮಾಮೃತವ ಭಕ್ತರಿಗೆರೆದೆಭೂಕನಕ ವಧು ವಿಷಯಕಾಂಕ್ಷೆಗಳ ಮೇಲೊದೆದೆಲೋಕಕೊಬ್ಬನೆ ಗುರುವೆ ಮೆರೆದೆ ವಿಶ್ವೇಶ ಪ್ರಸನ್ನವೆಂಕಟೇಶನಂಘ್ರಿವಿಡಿದೆ 3
--------------
ಪ್ರಸನ್ನವೆಂಕಟದಾಸರು