ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಫಣಿರಾಜಶಯನ ರುಕ್ಮಿಣೀ ದೇವಿಯೊಡಗೂಡಿ ಕುಳಿತಿರ್ದು ಸತಿಯೊಡನೆ ಅಣಕವಾಡಿದನು ಇನಿತೆಂದು 1 243 ಹೇ ರಾಜಕನ್ನಿಕೆ ಭೂರಮಣ ನಾನಲ್ಲ ನಾರದನ ನುಡಿಗೆ ನಳಿನಾಕ್ಷಿ 2 244 ಶಿಶುಪಾಲ ಮೊದಲಾದ ವಸುಧೆಪಾಲರ ಬಿಟ್ಟು ಸುಕುಮಾರಿ ಎನಲು ಪರ ವಶಳಾದಳಾಗ ಮಹಲಕ್ಷ್ಮಿ 3 245 ಈ ಮಾತ ಕೇಳಿ ಕೈ ಚಾಮರವನೀಡಾಡಿ ಭುಗಿಲೆಂದು ಮಲಗಿದಾ ಕಾಮಿನಿಯ ಕಂಡ ಕಮಲಾಕ್ಷ 4 246 ಕಂಗೆಟ್ಟಳೆಂದು ತನ್ನ ಅಂಗನೆಯ ಬಿಗಿದಪ್ಪಿ ಮುಂಗುರುಳ ತಿದ್ದಿ ಮುದ್ದಿಸಿ | ಮುದ್ದಿಸಿ ಮಾತಾಡ್ಡ ಕಂಗಳಶ್ರುಗಳ ಒರೆಸುತ್ತ5 247 ಸಲಿಗೆ ಮಾತಿನ ಬಗೆಯ ತಿಳಿಯದಲೆ ಹೀಗೆ ಚಂ ಚಲವನೈದುವರೆ ಚಪಲಾಕ್ಷಿ | ಚಪಲಾಕ್ಷಿ ಏಳೆಂದು ತÀಲೆಯ ಮೇಲಿಟ್ಟ ಕರಪದ್ಮ 6 248 ಶ್ರೀ ದೇವಿ ನಿನ್ನೊಳು ವಿನೋದ ಮಾಡಲಿಷ್ಟು ವಿ ಅನುದಿನ | ಅನುದಿನದಿ ಸ್ಮರಿಸುವರ ಕಾದುಕೊಂಡಿಹೆನು ಬಳಿಯಲ್ಲಿ 7 249 ಹಿಗ್ಗಿದಳು ಮನದಿ ಸೌಭಾಗ್ಯ ಭೂಮಿನಿಯು ಅಪ ವರ್ಗದನ ನುಡಿಗೆ ಹರುಷಾದಿ | ಹರುಷದಿಂದಲಿ ಪಾದ ಯುಗ್ಮಕೆರಗಿದಳು ಇನಿತೆಂದು 8 250 ಜಗದೇಕ ಮಾತೆ ಕೈ ಮುಗಿದು ಲಜ್ಜೆಯಲಾಗ ಮಾತಾಡಿದಳು ಪತಿಯ ಮೊಗವ ನೋಡುತಲಿ ನಳಿನಾಕ್ಷಿ 9 251 ಪರಿಪೂರ್ಣಕಾಮ ನಿನ್ನರಸಿ ನಾನಹುದು ಸ್ವೀ ಕರಿಸಿದೆಯೊ ಎನ್ನ ಸತಿಯೆಂದು | ಸತಿಯೆಂದ ಕಾರಣಾ ಕ್ಷರಳೆನಿಸಿಕೊಂಡೆ ಶ್ರುತಿಯಿಂದ10 252 ಭುವನಾಧಿಪತಿ ನೀನು ಅವಿಯೋಗಿ ನಿನಗಾನು ನೃಪರ ಪತಿಯೆಂದು | ಪತಿಯೆಂದು ಬಗೆವೆನೇ ಸವಿ ಮಾತಿದಲ್ಲ ಸರ್ವಜ್ಞ 11 253 ಭಗವಂತ ನೀನು ದುರ್ಭಗ ದೇಹಗತರವರು ತ್ರಿಗುಣವರ್ಜಿತವು ತವರೂಪ | ತವರೂಪ ಗುಣಗಳನು ಪೊಗಳಲೆನ್ನಳವೆ ಪರಮಾತ್ಮ12 254 ಭಾನು ತನ್ನಯ ಕಿರಣ ಪಾಣಿಗಳ ದೆಸೆಯಿಂದ ಪಾನೀಯಜಗಳನರಳಿಸಿ | ಆರಳಿಸಿ ಗಂಧ ಆ ಘ್ರಾಣಿಸಿದಂತೆ ಗ್ರಹಿಸೀದಿ13 255 ಬೈದವನ ಕುತ್ತಿಗೆಯ ಕೊಯ್ದು ಅಂಧಂತಮಸ್ಸಿ ಪರಿಪಂಥಿ ನೃಪರನ್ನು ಐದುವೆನೆ ನಿನ್ನ ಹೊರತಾಗಿ 14 256 ನಿಮ್ಮನುಗ್ರಹದಿಂದ ಬ್ರಹ್ಮರುದ್ರಾದಿಗಳ ನಿರ್ಮಿಸಿ ಸಲಹಿ ಸಂಹಾರ | ಸಂಹಾರ ಮಾಡುವೆನು ದುರ್ಮದಾಂಧರನಾ ಬಗೆವೇನೆ 15 257 ಮಂಜುಳೋಕ್ತಿಯ ಕೇಳಿ ಅಂಜಲ್ಯಾತಕೆಂದು ನವ ಕಂಜಲೋಚನೆಯ ಬಿಗಿದಪ್ಪಿ | ಬಿಗಿದಪ್ಪಿ ಮುದ್ದಿಸಿದ ಧ ನಂಜಯ ಪ್ರಿಯನು ಸಥೆಯಿಂದ16 258 ನಿನಗೆ ಎನ್ನಲಿ ಭಕುತಿ ಎನಿತಿಹುದೊ ಕಂಡೆ ಎಂದೆಂದು ಇಹುದು ಇದ ಕನುಮಾನವಿಲ್ಲ ವನಜಾಕ್ಷಿ 17 259 ದೋಷವರ್ಜಿತ ರುಕ್ಮಿಣೀಶನ ವಿಲಾಸ ತೋಷದಲಿ ಕೇಳಿ ಪಠಿಸಿದ | ಪಠಿಸಿದಂಥವರ ಅಭಿ ಲಾಷೆ ಪೊರೈಸಿ ಸಲಹೂವ 18 260 ನೀತಜನಕ ಶ್ರೀ ಜಗನ್ನಾಥ ವಿಠ್ಠಲ ಜಗ ನ್ಮಾತೆಯೆನಿಸುವಳು ಮಹಲಕ್ಷ್ಮಿ | ಮಹಲಕ್ಷ್ಮಿ ಸುತ ಬ್ರಹ್ಮ ಪಾತ್ರನೆನಿಸುವ ಗುರು ರುದ್ರ 19
--------------
ಜಗನ್ನಾಥದಾಸರು
ಕಲಭಯಾನೆ ಕಂಜಲೋಚನೆ ಕದವತೆಗೆಯೆಲೆ ಭಾಮಿನಿ ನಾಂ ಬಳಲಿ ಬಂದೆನು ಭಾಮಿನೀ ಪ. ಬಳಲಿ ಬಂದರೆ ಒಳ್ಳಿತಾಯಿತು ತಳರ್ವುದಿಲ್ಲಿಂ ನಿಲ್ಲದೆ ನಾಂ ಕದವ ತೆಗೆಯೆನು ಸಾರೆಲೆ ಅ.ಪ. ಭಾಪುಭಾಪೆಲೆ ಕೋಪಗೈವುದು ಚಾಪಲ್ಯಾಂಬಕಿ ಯೆನ್ನೊಳು ಓವನಲ್ಲೇ ಕೋಪಸಲ್ವುದೆ ಈ ಪರಿಯೊಳ್ ಪೇಳ್ವುದು ನೀ ನೀಪರಿಯೊಳ್ ಪೇಳ್ವುದು 1 ಪರಿ ಕಪಟನಾಟ್ಯವ ಮಾಳ್ಪರೇ ಓಪೆÀನೆಂದು ಕೂಗುತಿರುವ ಭೂಪನಾವನು ಸಾರೆಲೋ ನಾನೋಪೆ ಯಾರಿಗೆ ಸಾರೆಲೊ 2 ನೀರೆ ಮುಕ್ತಾಹಾರೆ ಸ್ಮರವೈಯ್ಯಾರೆಯಿಂತು ಪೇಳ್ವರೇ ಕೇಳ್ ನೀರನಾನೆಲೆ ಶ್ರೀಕರೆ 3 ನೀಂ ಜಾರನಂದದಿ ಕಾಣುವೆ ನೀನಾರು ಪೇಳು ನೋಡುವೆ 4 ದೇವಿಕೇಳು ವಸುದೇವ ದೇವಕಿಕುಮಾರ ನಾನೆಲೆ ಭಾಮಿನೀ ಸುಕುಮಾರನಾನೆಲೆ ಭಾಮಿನೀ ಭಾವಜಾತನ ಬಾಣಕೀಯದೆ ಕಾವುದೆನ್ನನು ಕಾಮಿನೀ ದಯೆತೋರು ಮನೋಮೋಹಿನೀ5 ದೇವಕೀಸುತನಾದರೊಳ್ಳಿತು ನಾವು ಬಲ್ಲೆವು ಸಾರುನೀಂ ಮಾವನನ್ನೆ ಮಥಿಸಿ ಬಂದ ಮಹಾಮಹಿಮನೆ ಸಾರು ನೀಂ, ಆಹ ಭಾವಿಸೀ ಭಯಪಡುವೆನೇಂ 6 ಭೀಷ್ಮಕಾತ್ಮಜೆ ಭೇಷಜಾಂಬಕಿ ಹಾಸ್ಯ ಮಾಡದೆ ಬೇಗನೆ ನಾಂ ಬೇಡಿಕೊಂಬೆನು ನಿನ್ನನು 7 ದೋಷವೆಣಿಸದೆ ಪೋಷಿಸೆನ್ನ ಮದೀಶ ಹಾಸ್ಯವ ಮಾಡಿದೆ ಶೇಷಶೈಲನಿ ವಾಸ ಎನ್ನನು ಪೋಷಿಸೆಂದಳು ವಿನಯದಿ ಕೈಪಿಡಿದ ದೇವನ ಮೋದದಿ 8 ಜಯಜಗನ್ನಾಥ ಭಕ್ತಾಭಯಪ್ರದ ಶ್ರೀಕರ ಜಯದೇವ ದಯಾಸಾಗರ ಶೇಷಗಿರೀಶ ಶ್ರೀಧರ 9
--------------
ನಂಜನಗೂಡು ತಿರುಮಲಾಂಬಾ
ಬಾರೊ ಹನುಮ ಬಾರೊ ಭೀಮ ಬಾರೊ ಮಧ್ವಮುನಿಪ ಪ. ಬಾರೊ ರಾಮಕೃಷ್ಣ ವೇದವ್ಯಾಸರ ಪ್ರಿಯ ಭಕ್ತ ಅ.ಪ. ಅಂಜನೇಯ ಸುತನು ಆಗಿ ಸಂಜೀವನ ಗಿರಿಯ ತಂದೆ ಕಂಜಲೋಚನೆಯ ವಾರ್ತೆ ಮಂಜುಭಾಷಣ ರಾಮನಿಗರುಹಿದೆ 1 ಪಾಪಿ ಕೌರವ ಕುಲವ ಕೊಂದು ದ್ರೌಪದಿಯ ಕಾಯ್ದ ಮಹಿಮ ಶ್ರೀಪತಿ ಶ್ರೀ ಕೃಷ್ಣನ ಭಜಿಸಿದ ಭೂಪ ಭೀಮಸೇನ ಬೇಗ 2 ಭೂಸುರ ಜನ್ಮದಲಿ ಬಂದು ಆಸೆಯಿಂದ ಆಶ್ರಮ ಕೊಂಡು ದೋಷಿ ಅನ್ಯಮತವ ಮುರಿದು ಭೂಸುರರ ಕಾಯ್ದ ಮಧ್ವ 3 ಸಕಲ ಸುಜನರ ಸೇವೆ ಕೊಂಡು ಮುಕುತಿಮಾರ್ಗಪ್ರದ ನೀನಾಗಿ ಭಕುತಿಮಾರ್ಗವ ತೋರಿ ಎನ್ನ ಹೃತ್ಕಮಲ ಮಧ್ಯದಲಿ ನಿಲ್ಲೊ 4 ಗೋಪಾಲಕೃಷ್ಣವಿಠ್ಠಲನ ರೂಪ ನೋಡುವ ಕೃಪೆಯ ಮಾಡೊ ಶ್ರೀಪತಿ ಶ್ರೀ ಶ್ರೀನಿವಾಸಗೆ ನೀ ಪ್ರೀತಿಕರನೆಂದು ನಮಿಪೆ 5
--------------
ಅಂಬಾಬಾಯಿ
ರಾಮ ರಾಮ ಎಂಬೆರಡಕ್ಷರ | ಪ್ರೇಮದಿ ಸಲುಹಿತು ಸುಜನರನು ಪ ಹಾಲಾಹಲವನು ಪಾನವಮಾಡಿದ | ಫಾಲಲೋಚನನೆ ಬಲ್ಲವನು || ಆಲಾಪಿಸುತ್ತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು 1 ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-| ಕುಂಜರ ರಮಿಸುತÀ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ ಕೇಳೇನು 2 ಕಾಲವರಿತು ಸೇವೆಯ ಮಾಡಿದ ಲೋಲ ಲಕ್ಷ್ಮಣನೆ ಬಲ್ಲವನು || ವ್ಯಾಳಶಯನ ಶ್ರೀ ವಿಜಯವಿಠ್ಠಲನ ಲೀಲೆ ಶರಧಿಯ ಕೇಳೇನು3
--------------
ವಿಜಯದಾಸ
ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಪ ಸೈಯೆ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಅ ಸಂಜೆಯ ವೇಳೆಗೆ ಬಂದು - ಸಟೆಯಲ್ಲ - ಮನೆಯ ಒಳಗಡೆ ನಿಂದುಕುಂಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದಗಂಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು 1 ಬಿಟ್ಟ ಮಂಡೆಯಲಿ ಗಂಡ ಮೈಮರೆತು ಮಲಗಿಹುದ ಕಂಡುಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿಥಟ್ಟನೇಳಲು ಗಂಡ, ಜುಟ್ಟು ಕಿತ್ತು ಹೋಯಿತಮ್ಮ2 ಅಡವಿ ಜಟ್ಟಿಂಗನ ಮಾಡಲಿಕೆ ಒಳ್ಳೆ ಸಡಗರ ಸಂಭ್ರಮದಿಂದಹೆಡಗೆ ತುಂಬ ಹೋಳಿಗೆ ಮಾಡಿ ಕೊಡ ನೀರು ತರಲು ಹೋದೆನೆಕಡೆಗೊಂದು ಹೋಳಿಗೆ ಬಿಡದೆ ಕೊಡದುಪ್ಪ ಹಾಲ್ಮೊಸರು ಪಾಯಸಕಡು ಫಟಿಂಗ ತುಡುಗು ತಿಂದು ಮೀಸಲಳಿದು ಎಡೆಗೆಡಿಸಿ ಹೋದನೆ 3 ಊರೊಳಿಂತಾಯ್ತೆಂದು ಸಾರಿದೆವೆ ನಾರೇರುಅಡವಿಯಲಿ ಕೂಡಿದೆವೆ ಹಲವಾರು ಹೆಂಗಸರುನೂರಾರು ಗೆಳತೇರು ಉಳಿದ ಹಾಲನು ಮಾರಿದಾರಿ ಹಿಡಿದು ಬರುವಾಗೊಂದು ಕೊಳವ ಕಂಡೆವೆ ನೊಡು 4 ಓರಗೆ ಹೆಂಗಳು ನಾವು ನೀರಾಟವಾಡಲಿಕೆಸೀರೆ ಕುಬಸವ ದಡದೊಳಿಟ್ಟು ಕೊಳಕೆ ಧುಮುಕಿದೆವೆಚೋರ ನಿನ್ನ ಮಗ ಸೀರೆಕುಬಸವನೆಲ್ಲ ತಕ್ಕೊಂಡು ಹೋಗಿತೋರದುಂಚ ಕಡಹದ ಮರನೇರಿ ನೋಡುತ ಕುಂತನೆ 5 ನೆಟ್ಟನೆ ನೀರಾಟವಾಡಿ ನಾಲ್ಕೂ ದಿಕ್ಕಿನಲಿ ನಾವು ಅಡರಿದೆವೆಇಟ್ಟಲ್ಲಿ ಸೀರೆಕುಬಸಗಳಿಲ್ಲ ಕೆಟ್ಟೆವಯ್ಯಯ್ಯೋಕಿಟ್ಟನ ಕೈಚಳಕವೆಂದು ನಾವಷ್ಟದಿಕ್ಕುಗಳ ನೋಡಿದೆವೆತುಟ್ಟತುದಿ ಕೊಂಬೆಯಲಿ ಕುಂತಿರುವ ಪುಟ್ಟನ್ನ ಕಂಡೆವೆ 6 ಮುಂದೆ ಹಸ್ತದಿ ಮುಚ್ಚಿಗೊಂಡು ಕೃಷ್ಣನಿಗೆ ಗೋಗರೆದು ಕೇಳಲುವಂದನೆ ಮಾಡಿದರೆ ನಿಮಗೆ ಸೀರೆ ಕುಬಸವ ಕೊಡುವೆನೆಂದಒಂದು ಕರದಿ ಮುಗಿವೆವೆಂದರೆ ಎರಡು ಕರದಿ ಮುಗಿಯಿರೆಂದಬಂಧನಕ್ಕೊಳಗಾದೆವೆಂದು ವಿಧಿಯಿಲ್ಲದೆ ಮುಗಿದೆವೆ 7 ಪುಷ್ಪಗಂಧಿಯರೆ ಒಪ್ಪಿತವಾಗಲಿಲ್ಲ ನನ್ನ ಮನಕೆಚಪ್ಪಾಳೆ ಇಕ್ಕುತ ಮರದ ಸುತ್ತ ತಿರುಗಿರೆಂದತಪ್ಪದು ಎಷ್ಟೊತ್ತಾದರು ಬಿಡನೆಂದು ಜಯಜಯವೆನುತಚಪ್ಪಾಳೆ ಇಕ್ಕುತ ಮರದ ಸುತ್ತಲೂ ತಿರುಗಿದೆವೆ8 ಪಗಡೆಕಾಯಿ ಕುಚದ ದಗಡಿಯರೆ ಪುಗಡಿ ಹಾಕಿರಿ ಎನ್ನೆದುರುತೆಗೆದು ಕೊಡುವೆ ನಿಮ್ಮ ವಸ್ತ್ರಗಳ ಬಗೆಬಗೆಯಿಂದಜಗದೊಳು ನಗೆಗೇಡಾದೆವು ಇನ್ನು ನುಡಿದು ಫಲವಿಲ್ಲೆಂದುಪುಗಡಿ ಹಾಕಿದೆವೆ ನಾವು ಛೀ ಛೀ ಎನ್ನುತಲಿ 9 ಕಡೆಯಾಟ ಕಮಲನೇತ್ರೆಯರೆ ಎಡೆಯಾಗಿ ಹೋಗಿ ನಿಲ್ಲಿರಿಓಡಿಬಂದರೊಂಟಿಯಾಗಿ ಹಿಡಿದು ನೋಡಿ ಕೊಡುವೆ ಎಂದಕೋಡಗ ಕೊರವಂಗೆ ಸಿಕ್ಕಿ ಆಡಿದಂತೆ ನಾವಾಡಿದೆವೆಓಡಿ ಬಂದೊಬ್ಬೊಬ್ಬರಿಗೂ ಹಿಡಿದು ಸವರಿ ವಸ್ತ್ರವನಿತ್ತನೆ 10 ತಂಡತಂಡದ ನಮಗೆ ಬಣ್ಣಬಣ್ಣದ ಬಳೆಯನಿಟ್ಟುಮಂಡೆ ಬಾಚಿ ಕುರುಳ ತಿದ್ದಿ ಕುಂಕುಮವಿಟ್ಟನೆಪುಂಡ ನಿನ್ನಣುಗ ನೆಲೆಯಾದಿಕೇಶವರಾಯಬಂಡು ಮಾಡಿ ಬಳಲಿಸಿ ಕೊನೆಗೆ ರಮಿಸಿ ಕಳಿಸಿಕೊಟ್ಟನೆ 11
--------------
ಕನಕದಾಸ