ಕರುಣಿಸೋ ಸ್ವಾಮಿ ನೀಪೂರ್ಣ
ಸಾರಸದ್ಗತಿ ಭೂಷಣಾ
ತಾರಿಸೋ ಯನ್ನ ನೀ ಪ್ರಾಣಾ ಶ್ರೀ
ಹರಿ ಕಂಜಲೋಚನಾ 1
ಸ್ವಾಮಿ ನೀ ಸರ್ವ ಸಾಕ್ಷಾತಾ
ಬ್ರಹ್ಮಾದಿದೇವ ವಂದಿತಾ
ಮನೋಹರ ಪ್ರಖ್ಯಾತಾ
ನೇಮ ನೀ ಕಾಮ ಪೂರಿತಾ 2
ಹಸ್ತಿಗೊಲಿದ ಸುದಾತಾ
ವಸ್ತು ಶ್ರೀದೇವ ನಿಶ್ಚಿತಾ
ನಿಸ್ತರಿಸುವಾ ಶ್ರೀನಾಥಾ
ಕಸ್ತೂರಿರೇಖಾ ಶೋಭಿತಾ 3
ನೀನೆ ನಮಸ್ತ ಕಾಧಾರಾ
ಶ್ರೀನಿಧಿ ಜ್ಞಾನ ಸಾಗರಾ
ದೀನ ಜನರ ಮಂದಾರಾ
ಪೂರ್ಣಾನಂದದಾಗರಾ 4
ಮಹಿಪತಿ ಸ್ವಾಮಿ ಶ್ರೀಪತಿ
ಕಾಯೋ ನೀ ಲಕ್ಷ್ಮೀಪತಿ
ಶ್ರೀ ಹರಿ ದಿವ್ಯಸುಮೂರ್ತಿ
ದೋರೋ ನೀ ದಿವ್ಯಸಂಗತಿ 5