ಒಟ್ಟು 9 ಕಡೆಗಳಲ್ಲಿ , 9 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಶ್ರೀಕೃಷ್ಣಲೀಲೆ ಅಂಗಜನೈಯನು ಗೋಕುಲ ಪೋಗುವಾಗಕಂಗಳ್ಹಬ್ಬದ ಉಬ್ಬಿನೇನ ಬಣ್ಣಿಪೆನಾ ಪ ಎಳೆಗರುಗಳ ಝುಂಗುಗಳನ್ನು ಮತ್ತೆಮಲೆವ ಗೂಳಿಗಳ ಗೂರಾಟವನ್ನುಒಲಿವಾವಿನ ಕೆಚ್ಚಲು ಸಂದಣಿಯಲ್ಲಿನಲಿವ ಮರಿಗರುಗಳ ನೋಡುತಲಿ 1 ಆಡಿಸುವ ಮೊಗ ಬದಿಗಳ ತುರಿಸುತ್ತಝಾಡಿಸುವಾಕಾರ ಬೆದರು ನೋಟಏಡಿಸುವ ಹುಬ್ಬಿನ ಗೋವಳರಕೋಡಂಗಿ ಆಟಕ್ಕೆ ಕುಲುಕಿ ನಗುತ 2 ಒಂದು ಹುಬ್ಬೊಂದು ಕಿವಿಯನಲಗಿಸುತಮುಂದಣ ಚಂಡಿಕೆ ತಾಳದ ಗತಿಗೆಚಂದದಿ ಕುಣಿಸುವ ಭೃಂಗಿ ಆಟಕೆ ಗೋಪಸಂದೋಹಕೆ ಮೆಚ್ಚಿ ಬಲಗೆ ತೋರಿಸುತ 3 ಕೆಲರು ಕೋಗಿಲೆಯಂತೆ ಕೆಲರು ನವಿಲಿನಂತೆಕೆಲರು ಹಂಸದಂತೆ ಸಾರಸದಂತೆಗಳರವದಿಂ ಗೋಪರು ಕೂಗೆ ಋತುಗಳುನಳಿನಾಕ್ಷನ ಸೇವೆಗೆ ಕೂಡಿದಂತಿರೆ 4 ಒಂದೊಂದು ತಾಳಕ್ಕೆ ಒಂದೊಂದು ಪದಗತಿಒಂದೊಂದು ರಸಕ್ಕೆ ಮತ್ತೊಂದು ಕೈಗತಿಒಂದೊಂದು ಭಾವಕ್ಕೆ ಒಂದೊಂದು ನೇತ್ರವಾನಂದದಿ ಗೋವರ್ಧನ ನಾಟ್ಯವಾಡೆ 5 ಕಿನ್ನರ ಗಾನ ಗೋಪರ ಗೀತ ದೇವಕನ್ಯೇರ ನಾಟ್ಯ ಗೋಪರನಾಟ್ಯಚೆನ್ನಾರ ಕುಣಿಸುವ ಚಿಣ್ಣರ ಕಣ್ಣುಸನ್ನೆ ಝೇಂಕರಿಸುವ ಗೋಪರ ನೋಡುತ6 ನಾರಂದನ ವೀಣೆ ಗೋಪರ ಕಿನ್ನರಿಗೀರ್ವಾಣದುಂದುಭಿ ಗೋಪರ ಮುರಜಆ ರಂಭೆಯರಾಟ ಗೋಪರ ತಾಂಡವಕ್ಷೀರೋದಕದಂತೆ ಕಲೆಸಿ ಬೆರೆಸಿರೆ 7 ರಸತುಂಬಿ ತುಳುಕುವ ಕೊಳಲ ರವಂಗಳುಹಸುಗಳ ಕೊರಳ ಘಂಟೆಗಳ ನಿನಾದಎಸೆವೆಳಗಂದಿಯ ಅಂಬಾರವಂಗಳು ಪಸರಿಸೆ ಗೋವಳೆಯರು ಸಡಗರಿಸಿ8 ಜಂಗುಳಿ ಗತಿಯರ ಮುಖ ಕನ್ನಡಿ ಊರೋ-ಜಂಗಳೆ ಮಂಗಳ ಪೂರ್ಣ ಕುಂಭಗಳುಕಂಗಳೆ ನೀಲೋತ್ಪಲಂಗಳು ಕರಗಳೆತುಂಗ ಪಲ್ಲವ ತೋರಣದಂತೆಸೆಯೆ 9 ಚೆಂದದ ನೋಟವು ಮಂಗಳಾರತಿಯಾಗೆಮಂದಹಾಸವು ಪೂಮಳೆಯಾಗೆ ಆನಂದ ಪುಳಕಗÀಳೆ ಕೋಡಿಯಾಗೆ ಗೋಪವೃಂದವಿದಿರುಗೊಳ್ಳ ಬಂದರೊಲವಿಲಿ 10 ಕಂಗಳ ಕುಡಿ ನೋಟಂಗಳಿÀಂ ಸೆಳೆದುರಂಗನ ತಮ್ಮಂತರಂಗದೊಳಿಟ್ಟುಹಿಂಗದಾಲಂಗಿಸಿ ಸುಖಾಂಬುಧಿಯ ತ-ರಂಗದಿ ಗೋಪಾಂಗನೆಯರು ಮುಳುಗಿ11 ಗೋಪಿಜನರು ರಂಗಗೆ ಮರುಳಾಗಿರೆನೂಪುರ ಮರಕತ ಪ್ರಭೆ ಸಾರಳೆಯಾಗೆಆ ಪದ್ಮರಾಗವೆ ಕೆಂಪು ಕಾರಳೆಯಾಗೆಶ್ರೀಪದನಖ ಕಾಂತಿ ರಂಗವಲ್ಲಿಯಾಗೆ 12 ಬೃಂದಾರಕರು ಪೂಮಳೆಗರೆಯಲು ಬೇಗಬಂದಾಳಿಗಳು ಬೃಂದಾವನದಲ್ಲಿ ಮಕರಂದವನುಂಡು ಸ್ವರ್ಗವ ಹಳಿದಿಳೆಗೆಬಂದಳಿಂದಿರೆಯೆಂಬ ಸಂಭ್ರಮದಿಂದ 13 ತುರುಗಾತಿಯರ ನೋಟದ ಬೇಟಂಗಳುಹರಿಮುಖೇಂದವಿನಲ್ಲಿ ಚಕೋರಗಳುಹರಿನಾಭಿಸರೋವರದಲ್ಲಿ ಮೀನ್ಗಳುಹರಿಪಾದಪದುಮದಿ ತುಂಬಿಗಳಾಗೆ14 ಇತ್ತ ಗೋವಳರಾಟಕೆ ತಲೆದೂಗುತಅತ್ತ ದೇವತೆಗಳ ಸ್ತುತಿ ಕೇಳುತ್ತಇತ್ತ ಗೋವಳೆಯರ ನಗಿಸುತ್ತ ನಗುತ್ತಅತ್ತಿತ್ತ ಮುನಿಗಳ ಸ್ತುತಿ ಕೇಳುತ್ತ 15 ಕಂಜಾಸನ ನಮಿಸಲು ಕೈಹಿಡಿದೆತ್ತಿ ಮೃ-ತÀ್ಯುಂಜಯ ವಂದಿಸೆ ಬಾ ಯೆನ್ನುತ್ತಅಂಜಲಿ ಪುಂಜದ ಇಂದ್ರಾದಿಗಳನ್ನುಕಂಜನೇತ್ರಗಳ ಸನ್ನೆಯಲಿ ಮನ್ನಿಸುತ16 ಸಿರಿ ವನಿತೆಗೆ ವನಮಾಲೆ ಉಯ್ಯಾಲೆಮೊರೆವಳಿಕುಲಗಳ ರವ ಸಂಗೀತ ವರ ಮುತ್ತಿನ ಹಾರ ಚಾಮರ ಶ್ರೀಕೃಷ್ಣ-ನುರಮಧ್ಯವೆ ಮಂಟಪವಾಗೆಸೆಯೆ 17
--------------
ವ್ಯಾಸರಾಯರು
17ವಾಯುದೇವರನ್ನು, ವಾಯುದೇವರ ಮಟ್ಟತಾಳ ಭಾರತೀಶ ತ್ರಾಹಿ ಉರಗ ಗರುಡಾದಿ ಪೂಜ್ಯ ಚರಣ ಭಾಸಾ ಧೂರಿಕೃತ ಭಯಾಜ್ಞಾನ ಲೇಶ ಪರಮೋತ್ತಮ ಜ್ಞಾನ ವಿಲಾಸ ಸರಸಿಜಾಂಡಾಂತ ಬಹಿರ್ವಾಸ ಹರಿ ಪೂಜಾದಿ ಗುಣಭರಿತ ಪ್ರಾಣೇಶ 1 ತಾಳ ಅಂಜನಿಗರ್ಭ ಸುಧಾಂಬುಧಿ ಸಂಜಾತ ಮಂಜುಳ ಭಾಷಣ ಕಂಜನೇತ್ರ ಶ್ರೀರಾಮದÀೂತ ವಜ್ರಮುಷ್ಟಿ ಪ್ರಹಾರೇಣ ಹತ ರಾಕ್ಷಸ ಸಂಜೀವ ಪರ್ವತ ಉಜ್ಜೀವಿತ ಕಪಿನುತ ಪುಂಗವ ಭರ್ಜಿತ ರಾವಣ ಮದ ಗರ್ವ ಹೇ ಹನುಮನ್ 2 ತಿಶ್ರಗತಿ ತಾಳ ಇಂದು ಮೌಳಿ ಪಾದದ್ವಂದಾರಾಧಕ ಜರಾ - ಸಂಧಾದಿ ಸುರ ವೈರ ವರ್ಗ ಮಾತಂಗ ವೈರಿ ಇಂದುಮುಖಿ ಯುಗ್ಮಭೈಷ್ಮೀಸತ್ಯ ಕಂದರ್ಪ ಶೃಂಗಾರ ಗುಣ ಸಿಂಧು ಶ್ರೀ ಕೃಷ್ಣದಾಸ ಭೀಮ 3 ಝಂಪೆತಾಳ ಧರ್ಮರತ ಮೌನಿಜ ನಿರ್ಮಮಾದಿ ಗುಣಪೂರ್ಣ ದುರ್ಮತಿ ವಾದಿ ವಾಗ್ಯುದ್ಧ ಕೋಲಾಹಲ ಅ- ಧರ್ಮ ರಚಿತ ದುಶ್ಯಾಸ್ತ್ರ ನಿರ್ಮೂಲೀಕೃತ ಯತಿರಾಜ ಭರ್ಮವರ್ಣ ವಿಜಯ ರಾಮಚಂದ್ರವಿಠಲ ಭಕ್ತ ಆನಂದಮುನೇ 4
--------------
ವಿಜಯ ರಾಮಚಂದ್ರವಿಠಲ
ಅಂಜದಾಕ್ಷಣ ಕಂಜನೇತ್ರನೆ ಸಂಜೀವಿನಿಯಾ ತಂದು ನೀಡಿದಾ ಪ ಪಸುಳನೈಯಾ ವಪುವೆಸೆವ ರಾಯ ಅಸುರವರ್ಗದಸುವ ಮಿಸುಕದಾಕ್ಷಣ ಹಿಸುಕಿ ಬಿಡುತಿಹ 1 ಭೀಮಸೇನಾ ಭಕ್ತಕಾಮಪೂರ್ಣಾ ಕಾಮಕೀಚಕಾ ಬಾರ ಪಾಮರರಿದಾ ನಾಕ ನಾನು ಮೆರೆದಾ 2 ಶಕ್ತಿಸಾರಾ ಭಕ್ತ ವಿರಕ್ತಿ ಪೂರಾ ಭಕ್ತವೃಂದಕೆ ಮುಕ್ತಿಪಥ ಮಹಾಪೂರಾ ಯುಕ್ತಿಯಿಂದಾ ವ್ಯಕ್ತಪಡಿಸಿದಾ ಅವ್ಯಕ್ತರೂಪಾ 3 ಕ್ಲೇಶದೂರಾ ಪ್ರಾಣೇಶ ವಾರಾ ಗಂಭೀರಾ ದಾಸಜನ ನುಡಿಯಾ ಗುಣದೋಷ ಹರಣಾ ಅಣಿಮಾ ವಾಸನ ರಹಿತಾ ಗುಣಗಣಗಡಣಾ ಗರಿಮಾ 4 ದಿಟ್ಟ ರಾಮಾದಕಾ ಹೃದಯ ಪ್ರೇಮ ಮಧುರಾ ವಿಠಲನರಸಿಂಹಾ ಎದೆಯಾರವಿಂದ ನಯನಾ ದಿಟ್ಟನಿಟ್ಟಿಗೇ ಸಾಧನೆಯ ಸಾರುವಂಥಾ ಧೀರಾ 5
--------------
ನರಸಿಂಹವಿಠಲರು
ಅಂದವ ಜರೆವರಾರು ರಂಗ ನಿನ್ನ ಅಂಗವ ಹಳಿವರಾರು ಪ ಅಂದವ ಜರೆವರಾರೋ ಇಂದೀವರಾಕ್ಷ ಗೋವಿಂದ ನಿ ನ್ನಂದಕೇಣಿ ಬಂದವರಿಲ್ಲವಯ್ಯ ಅ.ಪ ನೀರಮೀನು ಎಂಬರೇನೋ ರಂಗಯ್ಯ ಭಾರಿ ಕೂರ್ಮನೆಂಬರೇ ಭಾರಿ ರೋಮ್ಯನು ಎನೆ ಭೂರಿಸಂತಸವಿತ್ತೇ 1 ಕೋರೇ ಹಲ್ಲವನೆಂಬರೇ ರಂಗಯ್ಯ ಕೇಸರಿ ಎಂಬರೇ ಕೋರೆ ಹಲ್ಲಿಗೆ ಶೃಂಗಾರ ಧರಣಿದೇವಿ ಘೋರ ಕೇಸರಿಗೆ ಹತ್ತಾರು ಕೈಗಳು ಚಂದ 2 ಕೊಡಲಿ ಹಿಡಿದನೆಂಬರೇ ಕೊಡೆಯ ಹಿಡಿದಡೇನು ಬಲಿಯ ಬಾಗಿಲ ಕಾಯ್ದೆ ಕೊಡಲಿ ಹಿಡಿದು ಕಾರ್ತವೀರ್ಯಾರ್ಜುನನ ಕೊಂದೆ 3 ಎಂಜಲ ತಿಂದರೇ ರಂಗಯ್ಯ ಗುಂಜುಗದಾತನೆಂಬರೇ ಎಂಜಲ ತಿಂದಾ ಬಲದಿ ಮಾರೀಚನ ಕೊಂದೇ ಗುಂಜುಗ ವೇಗದಿಂದ ಸತಿಯ [ಬಿಡಿಸಿ ಕಂದೆ] ಕಂಜನೇತ್ರೆಯಳ ಕೈ [ಹಿಡಿದು ಬಂದೆ] 4 ದುರುಳ ಚೋರನು ಎಂಬರೇ ರಂಗಯ್ಯ ತುರಗವನೇರಿದನೆಂಬರೇ ದುರುಳ ಕೌರವರೆದೆ ಬಿರಿವಂತೆ ಮಾಡಿದೆ ದುರಿತಾರಿ ನೀ ಮಾಂಗಿರಿಯ ರಂಗಯ್ಯ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನಿದು ಚಿತ್ರ ಎಲೋ ಕಂಜನೇತ್ರ ಪ ದೀನನು ನಾನೆಂದು ದಿನ ದಿನ ಮೊರೆಯಿಡೆ ನೀನು ಮಾಡಿದ ಕರ್ಮವೆಂದು ತಪ್ಪಿಸಿಕೊಂಬ ಅ.ಪ ಮಾನಸದಲಿ ಸಾಕ್ಷಿಯಾಗಿ ನೀನಿಲ್ಲವೇ 1 ಯುಕುತಿ ಮಾತು ಇದಲ್ಲ ವೇದಶಾಸ್ತ್ರ ಪ್ರಮಾಣ2 ಸತ್ಯ ಸಂಕಲ್ಪನೆಂದು ಪೇಳುವರೆಲ್ಲರು ಭೃತ್ಯರ ಸಲಹದ ಪ್ರಭುತ್ವವೇತಕೆ ನಿನಗೆ 3 ದೇವ ನಿನ್ನ ಚಿತ್ತವೋ ಎನ್ನ ಪುರಾಕೃತವೋ 4 ಕರಣಾಭಿಮಾನಿಗಳಿಗೊಡೆಯ ನೀನಲ್ಲವೇ 5 ಭಾವ ಕೊಡುವುದಕೆ ಬಡತನವೆ ನಿನಗೆ 6 ನೀನೆ ಸರ್ವ ಸ್ವತಂತ್ರ ಗುರುರಾಮ ವಿಠಲ 7
--------------
ಗುರುರಾಮವಿಠಲ
ಧುರ ಧೀರಾ ಉದಾರಾ ಗಂಭೀರ ಕುಮಾರ ಪ ಕಂದರ್ಪ ರೂಪಾರ್ಧ ಚಂದ್ರಫಾಲಾ ಗುಣಮಾಲಾ ಜನಲೋಲಾ ಉಮೆ ಬಾಲಾ ಸುಶೀಲ 1 ನಿಗಮಾಳಿ ಪೊಗಳುವ ಖಗಧ್ವಜ ಮಿತ್ರಾ | ಜಗಪಾವನ ಶಶಿಮೊಗ ಕಂಜನೇತ್ರಾ ತ್ರಿನೇತ್ರಾ ಪ್ರಿಯಮಿತ್ರಾ ಸುಚರಿತ್ರಾ ಪವಿತ್ರಾ 2 ಪಾವನ ಮೂರುತಿ ಪಾವಂಜೆ ವಾಸಾ | ಕೋವಿದರೊಡೆಯ ರಕ್ಷಕ ದಾಸಾ ಗುಹೇಶಾ ಸರ್ವೇಶಾ ಸೇನೇಶಾ ಜಗದೀಶಾ 3
--------------
ಬೆಳ್ಳೆ ದಾಸಪ್ಪಯ್ಯ
ಪಾದವ ತೊಳೆದು ಪಾವನರಾಗಿಹರುಷದಿ ತಲೆದೂಗಿಪಾದವ ತೊಳೆದು ಪಾವನರಾಗಿಭಾವೆ ವಿನೋದದಿ ಕೃಷ್ಣನಗುತಲಿ ಪ. ಗುಜ್ಜೆಯರ ಕಾಲಿಗೆ ತಕ್ಕ ವಜ್ರಕಲ್ಲನೆಪಿಡಿದುಅರ್ಜುನನÀ ಮಡದಿ ಸುಭದ್ರಾಅರ್ಜುನನÀ ಮಡದಿ ಸುಭದ್ರಾ ಹರುಷದಿಕಂಜನೇತ್ರಿಯರ ಉಪಚರಿಸಿ 1 ಪಾದ ಕಾಲ ತೊಳೆದಳು2 ಮಂದಗಮನೆಯರಿಗೆಲ್ಲ ಗಂಧ ಕಸ್ತೂರಿಯಿಟ್ಟುಅಂದವಾಗಿದ್ದ ಅರಿಷಿಣಅಂದವಾಗಿದ್ದ ಅರಿಷಿಣ ಕುಂಕುಮದಿಂದ ಇಂದುವದನೆಯರ ಉಪಚರಿಸಿ3 ಶ್ರೀದೇವಿಯರಿಗೆ ದಿವ್ಯ ಕ್ಯಾದಿಗೆ ಮಲ್ಲಿಗೆ ಮುಡಿಸಿ ಸುಗಂಧಿ ಕೇಶರ ವೀಳ್ಯವ ಸುಗಂಧಿಕೇಶರ ವೀಳ್ಯ ಅಡಿಕೆ ಕೊಟ್ಟುಮಾಧವನ ಮಡದಿಯರ ಉಪಚರಿಸಿ4 ಪಾದ ತೊಳೆದು ಪಾವನರಾಗಿ5
--------------
ಗಲಗಲಿಅವ್ವನವರು
ಬಾರಯ್ಯ ಕೃಷ್ಣ ಬಾರೈ ಬಾಹದಿದ್ದಡೆಕಾರುಣ್ಯನಿಧಿಯೆಂಬ ಕಥೆಯ ಅ-ದಾರು ಬಣ್ಣಿಪರು ವೇದಾಂತದೇವಿಯರೆಮ್ಮದೂರುವರೀಗೆ ಪ. ಕುಂಜರವರದ ನೀಲಾಂಜನವರ್ಣ ನೀಕಂಜನೇತ್ರನೆ ಕಾಮನಯ್ಯಮಂಜುಳಮೂರ್ತಿ ಮನೋಹರಕೀರ್ತಿ ಪ್ರ-ಭಂಜನನೊಡೆಯ ಬಾರೊ 1 ಮಂದರಗಂಧದ ಮಂದಮಾರುತ ಬಂದಚಂದಿರಮುಡಿದ ಚದುರಬಂದಕಂದರ್ಪನರವಿಂದನೆಂಬ ಕಣೆಯ ತೊಟ್ಟ ಮಂದರಧರನೆ ಬಾರೊ2 ನೋಡುವೆ ನುಡಿಸುವೆ ಪಾಡುವೆ ಬಯಕೆಯಬೇಡುವೆ ಹಯವದನನಮಾಡುವೆ ಪೂಜೆಯ ಕೂಡುವೆ ನಿನ್ನೊಡ-ನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ 3
--------------
ವಾದಿರಾಜ
ರಾಮಸ್ಮರಣೆಯಿಂದ ಸಕಲ ಪಾಪಹರ ರಾಮ ರಾಮ ಎನ್ನಿರೊವ್ಯೊಮಕೇಶನ ದಿವ್ಯತಾರಕ ಮಂತ್ರವು ಪ.ಶತಕೋಟಿ ರಾಮಾಯಣದ ಬೀಜಾಕ್ಷರ ರಾಮ ರಾಮ ಎನ್ನಿರೊಕ್ಷಿತಿಜೆಯ ಪ್ರಾಣದ್ವಲ್ಲಭ ಶ್ರೀದಶರಥರಾಮ ರಾಮ ಎನ್ನಿರೊ 1ಪಾಮರರೆಲ್ಲರು ಪಂಡಿತರಾದರು ರಾಮ ರಾಮ ಎನ್ನಿರೊಆ ಮೋಕ್ಷ ಕರತಳವಾಹುದು ಕೊಂಡಾಡೆ ರಾಮ ರಾಮ ಎನ್ನಿರೊ 2ಮಖಕೋಟಿಗಧಿಕ ಮಹಾಪುಣ್ಯದಾಯಕ ರಾಮ ರಾಮ ಎನ್ನಿರೊಮುಕ್ತಾಮುಕ್ತಾರ್ಚಿತ ಕರುಣವಾರಿನಿಧಿ ರಾಮ ರಾಮ ಎನ್ನಿರೊ 3ಭಕ್ತವತ್ಸಲ ಭಾಗ್ಯಭೂಷಿತಭವಹರರಾಮ ರಾಮ ಎನ್ನಿರೊನಿಖಿಲ ಭುವನಪತಿ ಬ್ರಹ್ಮಾದಿಸುರವಂದ್ಯ ರಾಮ ರಾಮ ಎನ್ನಿರೊ 4ಅಂಜನೆಜಾತಪೂಜಿತ ಪಾದವಾರಿಜ ರಾಮ ರಾಮ ಎನ್ನಿರೊಕಂಜನೇತ್ರಕಂಜಸಖಅನಂತಪ್ರಭ ರಾಮ ರಾಮ ಎನ್ನಿರೊ5ದಶಶಿರಮರ್ದನ ವಿಭೀಷಣ ವರಪ್ರದ ರಾಮ ರಾಮ ಎನ್ನಿರೊಸುಶರಧಿ ಬಂಧನ ಸುಗ್ರೀವ ಸಂಸೇವ್ಯ ರಾಮ ರಾಮ ಎನ್ನಿರೊ 6ಲಕ್ಷ್ಮಣ ಭರತ ಶತ್ರುಘ್ನಾರಾಧಿತ ರಾಮ ರಾಮ ಎನ್ನಿರೊಋಕ್ಷವರಪ್ರದ ರಘುಕುಲಾಂಬುಧಿಚಂದ್ರ ರಾಮ ರಾಮ ಎನ್ನಿರೊ 7ಜ್ಞಾನಾನಂದ ಬಲಾತ್ಮ ಪರಬ್ರಹ್ಮ ರಾಮ ರಾಮ ಎನ್ನಿರೊಮೌನಿನಿಕರಧ್ಯೇಯಪುಣ್ಯಪುರುಷಗೇಹ ರಾಮ ರಾಮ ಎನ್ನಿರೊ8ಪ್ರಸನ್ನಮೂರುತಿ ಪ್ರಸನ್ನಾನನ ಪರಮಾತ್ಮ ರಾಮ ರಾಮ ಎನ್ನಿರೊಪ್ರಸನ್ನನಿಲಯ ನಿತ್ಯಪ್ರಸನ್ನವೆಂಕಟ ರಾಮ ರಾಮ ರಾಮ ಎನ್ನಿರೊ 9
--------------
ಪ್ರಸನ್ನವೆಂಕಟದಾಸರು