ಪ್ರಾಣನಾಥ ನಮಾಮಿ ಸಾಷ್ಟಾಂಗ
ಪಾತುಮಾಂ ಪವಮಾನಿ ಕೃಪಾಂಗ ಪ.
ದಾತಾರ ರಘುನಾಥದೂತ ವಿಖ್ಯಾತ
ಸೀತಾಮಾತಾಪದಾಬ್ಜ ಪ್ರಣೀತಾ-
ನೇಕವಾನರಯೂಥ ಸುಶೀಲ
ಭೂತಳ ಭೂರಿಜೀವನಪಾಲ 1
ಆಂಜನೇಯ ಸುರಂಜನ ಮೂರ್ತಿ
ಕಂಜನಾಭದಾಶ್ರಯವರ್ತಿ
ಭಂಜನಾಸುರನಿಕರ ನಿರ್ಲೇಪ
ರಂಜನಾತ್ಮ ನಿರಂಜನರೂಪ 2
ಕರಕೃತಾಂಜಲಿಮನೋಹರ ಶುಭಕಾಯ
ವರ ಲಕ್ಷ್ಮೀನಾರಾಯಣ ಪ್ರೀಯ
ಪರಮ ಪಾವನ ನೇತ್ರಾವತಿ ನದೀತೀರ
ವರ ಮಣಿಪುರಮುಖ್ಯ ಪ್ರಾಣ ಸಾಕಾರ 3