ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆ ಎಷ್ಟು ಪ್ರೇಮಿಯೋ ಗುರುವು ಎಷ್ಟು ಪ್ರೇಮಿಯೋ ಪ ಎಷ್ಟು ಪ್ರೇಮಿ ಎನ್ನ ಬಿಡದೆ | ಸೃಷ್ಟಿಯಲ್ಲಿ ಕೈಯಪಿಡಿದ ಅ.ಪ ಭಾನುಕೋಟಿ ತೇಜ ವರದ ಸಾನುರಾಗದಿಂದ ಕರೆದು ಜ್ಞಾನ ಶಾಸ್ತ್ರ ಬೋಧಿಸುತ್ತ ಹೀನ ವೃತ್ತಿ ದೂರಿ ಪೊರೆದ 1 ನೀಲವರ್ಣ ಕಂಜನಯನ ನೀಲಕಂಠಮಿತ್ರ ಭಕ್ತ ಪಾಲ ಭೂರಿದುಃಖಭವವ ಧೂಳಿಮಾಡಿ ಬಾಲಗೊಲಿದ 2 ಶ್ರೇಷ್ಠ ಸುಮಹದೇವಪುರದೊಳಿಷ್ಟರಂಗನಾಥ ಭರದಿ ಮುಟ್ಟಿ ಮುಕ್ತಿಯಿತ್ತು ಪುನಃ ಹುಟ್ಟು ಸಾವುಗಳನು ಕಳದ 3
--------------
ರಂಗದಾಸರು
ಕಂಜನಯನನ ಕಂಡೆ ಕಾಮನಯ್ಯನ ಪ. ಮಂಜುಗುಣಿಯೊಳಿಪ್ಪನ ತಿಮ್ಮಪ್ಪನಅ.ಪ ಪುಟ್ಟ ಪಾವುಗೆಯೊಳ್ಮೆಟ್ಟಿ ತೊಟ್ಟಂಬುಚಕ್ರವಕಟ್ಟಿದ ಕಠಾರಿಯಿಂದ ದುಷ್ಟರ ಹುಡಿಗುಟ್ಟುವ 1 ಚಕ್ರ ಶಂಖಧರನಾಗಿ ಕಕ್ಕಸರ ರಕ್ಕಸರಶಿಕ್ಷಿಸಿ ಶಕ್ರಮುಖ್ಯರ ಅಕ್ಕರಿಂದ ರಕ್ಷಿಸುವ 2 ಆಗಮವೈರಿಯನು ಕೊಂದಾಗ ಹಯವದನನ್ನಈಗ ಮಾನಿಸರಿಗೆ ಸೌಭಾಗ್ಯವೀವ ದೇವನ3
--------------
ವಾದಿರಾಜ
ಕಾಯಬೇಕು ಶ್ರೀ ತ್ರಿವಿಕ್ರಮÁಯಜನಯ್ಯ ಕಂಜನಯನ ಪ . ಆರು ನಿನ್ನ ಬಣ್ಣಿಪರು ಅಮರಗುಣನಿಲಯಸಾರಿದ ದೇವೇಂದ್ರನಿಗೆ ಸಕಲಸಂಪದವಿತ್ತೆ 1 ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ 2 ಪಾವನ್ನ ಗಂಗಾಜಲವು ಪಾದವೆಂಬ ಪದುಮವÀ ತೊ-ಳೆವ ನೀರುಗಡವಿನ್ನು ತೋರೊಮ್ಮೆ ಹಯವದನ 3
--------------
ವಾದಿರಾಜ
ನಂಬಿರೋ ಮನವನುದಿನಾ ಪ ನಂಬಿರೋ ಮನವನುದಿನಾ | ನಂಬಿದರಿಂಬಾಗುವನಾ 1 ಸುರಮುನಿರಂಜನು ಸುರರಿಪು ಭಂಜನಾ | ನಿರುಪಮ ಕಂಜನಯನ ವದನಾ 2 ಈರೆರಡಾಸ್ಯನ ಪಿತ ಪದ್ಮಾಸ್ಯನೆ | ಈ ರೈದಾಸ್ಯನ ಕೊಂದವನಾ 3 ಅಸುರನ ಕಂದನ ನುಳಹಿದಾ ನಂದನ | ವಸುದೇವ ಬಂಧನ ಹರಿಸಿದನಾ 4 ಇಹಪರ ವಂದ್ಯನ ದೇವಕಿ ಕಂದನ | ಮಹಿಪತಿ ನಂದನ ಜೀವನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಜುಳನಾದವು ರಂಜಿಸಿತು ಕಂಜನಯನಕೃಷ್ಣ ಕೊಳಲನು ಊದಲು ಪ ಅಂಜಲಿಯಲಿ ಪುಷ್ಪಹಾರವ ಪಿಡಿಯುತ ಸಂಜೆಯ ತಿಂಗಳು ಬೆಳಗಿರಲು ಅ.ಪ ಕೈಯಲಿ ವೀಣೆಯ ನುಡಿಪ ಕನ್ನೆಯರು ಮೈಯಿನ ಗಂಧವ ಚೆಲ್ಲುತಲಿರಲು ಸುಯ್ಯಿ ಸುಯ್ ಸುಯ್ ಎಂದು ಚಲಿಸಲು ಎಲರು ಗೋಪಿ ವೃಂದವು ನಲಿಯಲು1 ಸರಿಗಮಪದನಿ ಸ್ವರಗಳ ರವದಲಿ ಸರಸ ಸಾಹಿತ್ಯವು ಉರುಳುತಲಿರಲು ಮುರಳಿಯ ಇಂಚರ ಸರಿಸಮ ತೂಗಲು ವರದ ಮಾಂಗಿರಿರಂಗ ನಸುನಗೆ ಬೀರಲು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುರವೈರಿಯೇ ಮೊರೆ ಹೊಕ್ಕೆ ನಿನ್ನಕರಿಯ ಕಾಯ್ದಹಲೈಯ | ವರದನೆಂದರಿತು ಪ ಸರಸಿ ಜಾಂಡದೋಳು | ಅರಸಿ ಅನ್ಯ ಕಾಣೆಕರುಣಿ ಕಂಜನಯನ | ಪರಿಪೋಷಿಸೆನ್ನ ಅ.ಪ. ಭಕ್ತಾಭೀಷ್ಟದಾ | ಮುಕ್ತಿದಾಯಕಾಶಕ್ತನಾಗಿ ಇರಲು | ವ್ಯಕ್ತನಾಗದಿರೆ |ಸೂಕ್ತವೇನೊ ನಿನಗೆ | ಯುಕ್ತಿ ಪೂರ್ಣ ಪುರುಷಸೂಕ್ತ ಮೇಯ ನೀನು | ವ್ಯಕ್ತನಾಗೊ ಮನದಿ 1 ಕಣ್ಣು ಬಿಟ್ಟು ಗಿರಿಯ | ಬೆನ್ನಿಲ್ಹೊತ್ತರೇನುಮಣ್ಣ ಹಲ್ಲಿಲಗಿದು | ಚಿಣ್ಣನನ್ನೆ ಪೊರೆದುಸಣ್ಣ ವಟುವೆ ಪಿಡಿದೆ | ಚೆನ್ನ ಪರಶುವನ್ನಘನ್ನ ಧನುವ ಮುರಿದ | ಕನ್ಯೆ ಸೀತೆ ಪತಿಯ 2 ಗೊಲ್ಲರೋಳು ಪುಟ್ಟಿ | ಮಲ್ಲರನು ಕುಟ್ಟಿಚೆಲ್ವ ಕನ್ಯೆ ಕೂಡಿ | ಕೊಲ್ಲಿಸಿ ತ್ರಿಪುರರಚೆಲ್ವ ಹಯವನೇರಿ | ಕೈಲಿ ಖಡ್ಗ ಪಿಡಿದುಚೆಲ್ವ ಕಲ್ಕಿ ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಯಾಕೆಲೋ ರಂಗಾ | ನಿನ್ನರಸಿಯೊಳುಮುನಿದಿರುವೆ | ಲೋಕವೀರೇಳು ರಕ್ಷಿಪ ಮುದ್ದು ರಂಗಾ ಪ ನಾಲ್ಕನೆಯ ಅವತಾರದಲಿ ಉಗ್ರವಾಗಿರೆ | ಆ ಕಮಲಜ ಮುಖ್ಯ ಬೆದರುತಿರಲು | ಲಕುಮಿ ತಾಕಂಡು ತೊಡೆಮೇಲೆ ಕುಳ್ಳಿರಲು | ಈ ಲೋಕದೊಳು ಶಾಂತನೆನಿಸಿದಳೊ ನಿನ್ನರಿಸಿ 1 ಗುಂಜೆಯಮಾಲೆ ಕೊರಳಿಗೆ ಹಾಕಿ ಗೋವಳರ | ಎಂಜಲ ತಿನುತ ಗೋಗಳ ಕಾಯುತಿರಲು | ಕಂಜನಯನೆಯು ಬಂದು ಸಕಲ ಶಿರಿಯಿಂದಲಿ | ರಂಜಿಸಿದಳೊ ಜಗದೊಳಗೆ ನಿನ್ನ ಅರಿಸಿ 2 ಇಂತರಿದು ನಾನಾಪರಿಯಿಂದ ನಿನ್ನ ಮೇಲೇ | ಸಂತತ ಉಪಕಾರ ಮಾಡಿರೆ ನೀನು | ಕಂತುಮಾತೆಯ ತಪ್ಪು ನೋಡುವರೇನೋ | ಆ- ನಂತನೇ ಏಳು ಮಹೀಪತಿನಂದನೊಡೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೆನೀನು ಒಲಿದಮೇಲೆ ಪರರ ಭಯವುಂಟೇ ಪ ಪÀರುಷವೇದಿ ಸೋಂಕಿದ ಕಬ್ಬಿಣ ಹೊನ್ನಲ್ಲವೇ ಸುರನದಿ ಭಾಗೀರಥಿಯೊಳು ಮಿಂದೂ ಪಾಪಿಯೇ1 ಗರುಡದೇವನಿದಿರೊಳು ಉರಗಬಾಧೆಯಿರುವುದೇ ಧರೆಯೊಳ್ ರವಿಯು ಉದಯನಾಗೆ ರಾತ್ರಿ ನಿಲ್ವುದೇ2 ಗುರುವಿನ ದಯೆಯಿರುವರೇ ಕುಲದವರೇಂ ಗಯ್ಯುವರು ಉರಿವ ಕಿಚ್ಚಿನಿದಿರೊಳಗೆ ಚಳಿಯ ಭೀತಿಯೇ 3 ಸಂಜೀವನ ಪಿಡಿದವಂ ಮರಣಕೆ ತಾನಂಜುವನೇ ಕಂಜನಯನ ಕಾಯ್ವನಿರಲು ಶನಿಯು ಹಿಂಸಿಪನೇ 4 ರಾಜತನ್ನವನಾಗಿರಲ್ ವಿರಾಜಿಸುತ್ತಲಿರುವನೈ ಜಾಜೀಶ ಕೇಶವನೇ ನಾನು ನಿನ್ನವನೈ 5
--------------
ಶಾಮಶರ್ಮರು
ಶ್ರೀಪತಿಪರಾಕುಮಹೀಪತಿಪರಾಕುಪ.ಅಂಜನಗಿರಿತಟನಿಲಯಪರಾಕುಕಂಜನಯನ ಖಳಪ್ರಳಯಪರಾಕುಅಂಜನೆತನಯ ಸುಸೇವ್ಯಪರಾಕುಮಂಜುಳಗಾತ್ರ ಮುಕುಂದಪರಾಕು1ಕನಕೋದರನ ಪಡೆದನೆಪರಾಕುಸನಕಾಧಿಕಋಷಿಪ್ರಿಯಪರಾಕುಮಣಿಖಚಿತಾಭರಣತನುಪರಾಕುವಿನಿರ್ಜಿತ ಮಾಯಕೋಟಿಪರಾಕು2ಅನಸೂಯ ತನುರತ್ನಪರಾಕುಅನಪೇಕ್ಷಿತ ನಿರ್ಯತ್ನಪರಾಕುಮನುಕನ್ಯಾತ್ಮಜ ಕಪಿಲಪರಾಕುಚಿನ್ಮಯ ಚಿದ್ಗುಣವಿಪುಲಪರಾಕು3ಗುಹ್ಯಾತ್ಗುಹ್ಯ ಸ್ವರೂಪಪರಾಕುಅಸಹ್ಯ ನಿರ್ಲೇಪ ಸುರೇಶಪರಾಕುಸಿಂಹನರರೂಪ ಹರಿಯೆಪರಾಕುದಹ್ಯದನುಜಕುಲವೈರಿಪರಾಕು4ಭಕ್ತಾಭೀಷ್ಟ ಪ್ರದಾತಪರಾಕುಮುಕ್ತಾಮುಕ್ತರಿಂಸೇವ್ಯಪರಾಕುನಕ್ತಂಚರಕುಲನಾಶಪರಾಕುಭೋಕ್ತø ಪ್ರಸನ್ವೆಂಕಟೇಶಪರಾಕು5
--------------
ಪ್ರಸನ್ನವೆಂಕಟದಾಸರು