ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಿತಾರ್ಥದಾಯಿನೇ | ತುಳಸಿ ಕಲ್ಯಾಣಿ ಶ್ಯಾಮಾ ವಿಶಾಲನಯನೇ ಪ ಹಸುರು ಕಂಚುಕಧರೆ ಆನಂದ ರಸಿಕೇ ಶಶಿ ಬಿಂಬಸಮ ಸುಂದರಮುಖೇ ಉಸಿರುಬಿಡದೆ ನಿನ್ನ ಕೊಸರುವೆ ವರಗಳ ಹಸನಾಗಿ ಕೊಡುವೆನೀ ಅತಿಶಯದಿಂದಲಿ 1 ಬಣ್ಣಾದ ಸರಪಳಿ ಹಾಕಿದ ಕೊರಳೇ ಬಟ್ಟ ಮುತ್ತಿನ ಹರಳೇ ಹುಣ್ಣಿಮೆ ಚಂದ್ರನಂತೆ ಸುಂದರಮುಖದವಳೇ ಪನ್ನಂಗ ಶಯನಗೆ ಮಾಡಿದೆ ಮರುಳೇ 2 ಬಡನಡುವಿಗೆ ಒಡ್ಯಾಣಾ | ರುಳಿ ಪೈಜಣ ಕಡಗಾ ಕಂಕಣ ಹೊಳಿಯುವ ಜಾಣೆ | ನಡೆದು ಬಾರೆ ಶ್ರೀ ನರಸಿಂಹವಿಠಲನ ಪಾದ ಬಿಡದೆ ಭಜಿಪೆನಮ್ಮ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಮಾನಿನಿ ಆ ಮಹಾಭಕುತಿಗಭಿಮಾನಿ ಪ ಸುತ್ರಾಮ ಕಾಮ ರವಿ ಸೋಮವಿನುತೆ ಮದಸಾಮಜ ಗಮನೆ ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ ಬಾಲಾರ್ಕ ತಿಲಕರನ್ನೆ ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ ಮೂರ್ಲೋಕದೊಳು ಪಾವನ್ನೆ ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು- ನಾಸಿಕ ನೀಲೋ ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ 1 ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ ಬೆಳಕು ತುಂಬಿರಲು ಮಿಗೆ ಥಳಕು ವೈಯಾರದ ಬಗೆ ಮೂಗುತಿಸರಿಗೆ ಸಲೆ ಭುಜಕೀರ್ತಿ ಪೆಟ್ಟಿಗೆ ಥಳಥಳಿಸುವ ಕೊರಳೊಳು ತ್ರಿವಳಿ ನ್ಯಾ ವಳಿ ತಾಯಿತು ಸರಪಳಿಯ ಪದಕ ಪ್ರ ವಳ ಮುತ್ತಿನ ಸರಪಳಿಗಳು ತೊಗಲು ಎಳೆ ಅರುಣನ ಪೋಲುವ ಕರತಳವ 2 ಕಡಗ ಕಂಕಣ ಮಣಿದೋರೆ-ದೋಷ ವಿದೂರೆ ಝಡಿತದುಂಗುರ ಶೃಂಗಾರೆ ಮುಡಿದ ಮಲ್ಲಿಗೆ ವಿಸ್ತಾರೆ-ಕಂಚುಕಧರೆ ಉಡಿಗೆ ಶ್ವೇತಾಂಬರ ನೀರೆ ಬಡ ನಡು ಕಿಂಕಿಣಿ ನಿಡುತೋಳ್ಕದಳಿಯ ಪೊಡವಿಗೊಡೆಯ ನಮ್ಮ ವಿಜಯವಿಠ್ಠಲನ್ನ ಅಡಿಗಳರ್ಚಿಪುದಕೆ ದೃಢಮನ ಕೊಡುವಳ 3
--------------
ವಿಜಯದಾಸ