ರಂಗ ಬಾರ ಕುರಂಗನಯನೆ ಮಂಗಳಾಂಗನ ಕರೆದುತಾರೆ ಪ
ಅಂಗ ಸಂಗ ಸುಖವನಿತ್ತು ತಂಗೀ ಮನವ ಸೆಳೆದುಕೊಂಡ ಅ.ಪ
ಸಂಚಿನಿಂದ ಒಳಗೆಬಂದು ಮಂಚಕೆನ್ನ ಗಂಡನ ಕಟ್ಟಿ
ಮಿಂಚಿನಂತೆ ತೋರಿಪೋದ 1
ಕಂಚುಕದೊಳಿರುವ ಪಣ್ಗಳ ವಂಚಿಸದೆ ಕೊಡುಯೆಂದೆಂಬ
ಸಂಚಿತಾರ್ಥದ ಪುಣ್ಯವೆಂದು ವಿರಿಂಚಿಪಿತನು ರೋಜಪಿಡಿದ 2
ಉಲ್ಲಸದೊಳಗಾಲಿಂಗಿಸುತ ಫುಲ್ಲಲೋಚನ ಪರವಶಗೈದ 3
ಮುನಿದುನಾನು ನಿಂದಿರಲು ಕನಿಕರದಿಂದ ಕುಣಿದು ಹಾಡಿ
ಮನವನುಬ್ಬಿಸಿ ತನುವಮರೆಯಿಸಿ ಇವನತೆರದೊಳೆನ್ನನಾಳ್ದ 4
ಮೊಸರ ಕಡೆದು ಬೆಣ್ಣೆತೆಗೆಯೆ ಮೆಲ್ಲನೆ ಬೆನ್ನಹಿಂದೆ ಬಂದು
ಅಸಮರೂಪ ತೋರುತಾಗ ಒಸೆಯುತದನು ಕದ್ದು ಮೆದ್ದ 5
ಹೋರಿಯೆನ್ನೊಡೆ ದಾರಿಬಿಡದೆ ಓರಿಗೆಯರ ಕಂಡು ಜಾರಿದ 6
ಕೊಳಲನೂದಿ ಒಳಗೆ ಬಂದು ಲಲನೆಯೇಳೆ ಎಂದವನ 7
ನೀರಮುಳಗಿ ಭಾರಹೊತ್ತು ಕೋರೆ ಮಸೆದ ನಾರಸಿಂಹ
ಬುದ್ಧ ಕಲ್ಕಿ 8
ಪಕ್ಷಿವಾಹನ ಹೆಜ್ಜಾಜಿ ಯಧ್ಯಕ್ಷ ಚನ್ನಕೇಶವದೊರೆಯೆ
ರಕ್ಷಿಸೆಂದು ನಂಬಿದವರ ಪಕ್ಷನಾಗಿ ಪಾಲನೆಗೈವ 9