ಪೂಜಿಪೆ ಜಗದಂಬಿಕೆಯಾ ಅಂಬಿಕೆಯ
ಮಾನಸ ಮಂದಿರದಲಿ ಭಕ್ತಿಯಿಂದ
ಮಾ ಪತಿಸೇವಾ ನೀ ನಿರುತದಿ ನೀಡೆ ಪ.
ವರ ಗಂಗಾಜಲದಿಂದಭಿಷೇಕ
ಜರಿ ಪೀತಾಂಬರ ಕಂಚುಕದಿಂದ
ಪರಿಮಳ ಪುಷ್ಪ ಸುರೋಜದಿಂದ
ಅಲಂಕರಿಸುವೆನೀಗಾ ನಾ ಅಲಂಕರಿಸುವೆ 1
ಪರಿಪರಿ ಪತ್ರಹೂಗಳಿಂದ ಅರ್ಚಿಪೆ ಮುದದಿಂದ2
ಕದಳಿ ಖರ್ಜೂರ ದ್ರಾಕ್ಷಾದಿಗಳ
ಬದರಿ ದಾಳಿಂಬ ನೈವೇದ್ಯಗಳಿಂ
ಅರ್ಪಿಪೆ ಅಂಬಿಕೆಗೆ ನಾ ಅರ್ಪಿಪೆ ಅಂಬಿಕೆಗೆ3
ಆ ರಜತಾದ್ರಿನಿವಾಸಿಗೀಗಾ
ಶ್ರೀ ಶ್ರೀನಿವಾಸನ ಸೋದರಿಗೀಗಾ
ಆರುತಿ ಬೆಳಗುವೆ 4