ಸಂತರ ನೋಡಿರೈ ಅನಂತನ ಪಾಡಿರೈ |
ತಂತುವಿಡಿದು ನಿಶ್ಚಂತದಿ ಮುಕ್ತಿಯ |
ಪಡೆದವರಾ ನಿಂದವರಾ ಪ
ದ್ವಿತಿಯೋ ಭಾಗೀರಥಿಯೋ |
ಹರಿಪ್ರಸಾದವಕೊಂಬುವ ಸಂತರ |
ಉದರೋ ಶ್ರೀ ಕೇದಾರೋ |
ಹೃದಯೋ ವೇದದ್ಭುಧವೋ |
ಕಂಠೋ ಭೂವೈಕುಂಠೋ ಮ 1
ಕರವೋ ಕಾಶಿಪುರವೋ |
ವರವೋ ರಾಮೇಶ್ವರವೋ |
ಕಿವಿಯೋ ಶಾಸ್ತ್ರದ ಗವಿಯೋ |
ಅಮೃತ ಸದನೋ 2
ಹರಿಪದಧ್ಯಾಯಿಸಿ ನೋಡುವ ಸಂತರ |
ನಯನೋ ಸ್ವಸುಖದಯನೋ |
ಹರಿನಿರ್ಮಾಲ್ಯವನಾಘ್ರಾಣಿಪನಾ | ಶಿಕವೋ ಆವಂತಿಕವೋ |
ಧರೆಯೊಳು ಮತ್ತೊಂದನ್ಯಕ ಯರಗದ |
ಹಣಿಯೋ ಮುತ್ತಿನ ಮಣಿಯೋ |
ಶಿರವೋ ಕಂಚಿಪುರವೋ 3
ಪರರುಪಕಾರ ಬಾಳುವ ಸಂತರ | ಇರವೋ ಕಲ್ಪತರುವೋ |
ಧರೆಯೊಳು ಮಾಡುವ ಸಂತರ ವ್ಯವಹಾ |
ರಗಳೋ ಹರಿಶೇವೆಗಳೋ |
ನುಡಿಯೋಭವದಿಕ್ಕೆಡಿಯೋ |
ಹರಿಪ್ರೇಮದಿ ತುಳಕ್ಯಾಡುವ ಜಲಬಿಂ |
ದುಗಳೋ ಭಕ್ತಿಯ ಮುಗಳೋ 4
ನುಡಿಯೋ ಸದ್ಗತಿಯಡಿಯೋ |
ಭ್ರಮವಿಷಯಕ ಹಚ್ಚದೆ ಕುಂದದಲಿಹ | ಮನವೋ
ನಂದನವನವೋ |
ಕಮಲಾಕ್ಷನು ಸಂತರ ಆಜ್ಞಾ | ಧಾರಕನೋ ನೆರೆಪಾಲಕನೋ |
ಕ್ರಮವರುಹಿದ ಗುರುಮಹಿಪತಿ ನಂದನ |
ಪ್ರಿಯನೋ ಕರುಣಾಲಯನೋ 5