ಬೆಳಗುವಿರಿ ನೋಡೆ ದೇವಕುವರರಂತಿಹಿರಿ
ಧೀರ ಗಂಭೀರತರ ಭಾವ ತೋರ್ಪುದು ಮುಖದಿ
ನಾರು ವಸ್ತ್ರವ ಧರಿಸಿ ತಿರುಗುವಿರಿ ವನದಿ 1
ಕಂದರ್ಪನನು ಪೋಲ್ವ ಕಮನೀಯ ವಿಗ್ರಹರು
ವೈರಿ ನಿಗ್ರಹರು |
ಪುಟಕ್ಕಿಟ್ಟ ಚಿನ್ನದಂತೆ ಕಾಂತಿರಂಜಿತರು
ಪಟುತರಂಗರು ಗಹನವಿಟದಿ ಪರಿವ್ರಾಜಕರು 2
ಆಜಾನುಬಾಹುಗಳು ಆಜಾನು ಜಂಘಗಳು
ಆ ಜಟ ಮಂಡಲವು ರಾಜಿಸುತಲಿಹವು
ದೃಢವಾದ ನಿಮ್ಮಡಿಗಳಿಡುವ ಧ್ವನಿಗಳ ಕೇಳಿ
ಅಡವಿಯೊಡತನ ಪಡೆದ ಸಿಂಹಗಳು ನಡುಗುವುವು 3
ಧರೆಗಿಳಿದು ಬಂದಿರ್ಪ ರವಿ ಚಂದ್ರರಂದದಲಿ
ನೆರೆ ಪ್ರಕಾಶಿಕರಾಗಿ ಕಂಗೊಳಿಸುತಿಹಿರಿ
ಗುರುತರದ ಕಾರ್ಯತತ್ಪರರಾಗಿ ಬಂದಿರುವ
ನರೆÉಭಾವ ತೋರುವುದು ಕರಿಗಿರೀಶನ ದಯದಿ 4