ವೃಂದಾವನದಿ ನಿಂದಾಡುತಿಹ ಸುಂದರ ಮೂರುತಿ ಇವನಾರೆ ಪ.
ಇವ ನೋಡೆ ಅ.ಪ.
ಕಡಗಕಂಕಣ ಬೆಡಗಿಲಿ ಹೊಳೆಯುತ
ಸಡಗರದಿಂದಿಹ ಇವನ್ಯಾರೆ, ಸಖಿ
ಮೃಡಸಖ ಎಮ್ಮಯ ಒಡೆಯನೆಂದಿಸುವ
ಜಡಜಮುಖಿ ಇವನೋಡೆ 1
ಹರವಿದ ಕೇಶದಿ ಶಿರದÀ ಕಿರೀಟವು
ವರಗೋವುಗಳ ಕಾಯ್ವ ಇವನ್ಯಾರೆ, ಸಖಿ
ವರ ಕಾಳಿಂಗನ ಭಂಗವ ಮಾಡಿದ
ಶರಧಿ ಗಂಭೀರ ಇವನೋಡೆ 2
ಪೊಂಗೊಳಲೂದುತ ಕಂಗೊಳಿಸುತಿಹ
ಮಂಗಳಮೂರುತಿ ಇವನಾರೆ, ಸಖಿ
ಪರಿ ಭಕುತರ ಸಲಹುವ
ರಂಗ ಶ್ರೀ ಶ್ರೀನಿವಾಸ ಇವ ನೋಡೆ 3