ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಡದೆ ಬೇಡದೆ ಕಂಗೆಡದೆ ಕೋ ಮನವೆ ನಿಜ ಸುಭಿಕ್ಷ ಗುರು ಸಂರಕ್ಷ ಧ್ರುವ ಅಳುಕದೆ ಬಳುಕದೆ ತುಳುಕದೆ ನಿಂದು ತಿಳಕೊ ನಿಜಸುಭಿಕ್ಷೆ ಕೊಳಕ ಹುಳಕ ಮೊಳಕನೆಂದು ಮಾಡದಿರುಪೇಕ್ಷ ನಾಳೆ ನಾಡದಿಂದ್ಯಾಗೆಂದು ಕಲ್ಪಿಸಿಕೊಬ್ಯಾಡಪೇಕ್ಷ 1 ಲಜ್ಜೆ ಅಳಿದು ಗುರು ಶರಣವ ಹೊಕ್ಕು ಸರಕ್ಕನೆ ಕೋ ಸುಭಿಕ್ಷೆ ಹೆಜ್ಜೆಜ್ಜಿಗೆ ಸುರಿಮಳೆಗರೆವುತಲದೆ ಗುರುಕರುಣದಕಟಾಕ್ಷ ಫಜ್ಜಿಗೆ ಬಂದುವರಿತ ಮ್ಯಾಲೆ ಕಂಜನಾಭನೆ ಸುಪಕ್ಷ 2 ಬೇಡಿಸಿಕೊಳ್ಳದೆ ನೀಡುತಲಾನೆ ಭಾಸ್ಕರ ಗುರು ಸಮರ್ಥ ನೀಡಿ ನಿಜನಿಧಾನವ ಕೊಟ್ಟು ಮಾಡುತಲಾನೆ ಹಿತಾರ್ಥ ಬಡವರಾಧಾರೆನ್ನೊಡೆಯನೆ ಜಗತ್ರಯಕ್ಕೊಬ್ಬನೆ ಕರ್ತ ಮೂಢ ಮಹಿಪತಿಗನುದಿನ ಬಿಡದೆ ನೀಡುತಾನೆ ಸಕಲಾರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಕೂಗಿಡುವ ಧ್ವನಿಯು ಕೇಳುವುದಿಲ್ಲವೇ ನಿನಗೆ ಪ ಪರಮಪದದೊಳಗೆ ವಿಷಧರನ ತಲ್ಪದೊಳು ಇಂ ದಿರೆಯರಸಿ ಹರುಷವಾರಿಧಿಯೊಳಿರಲೂ ಕರಿ ಗುಪ್ತಕಂಠಧ್ವನಿಯಿಂದಾದಿಮೂಲವೆಂದೊದರೆ ಆಕ್ಷಣ ಕರಿಯ ಕಾಯ್ದೆ ಜಗವರಿಯೆ 1 ಕಡುಮುನಿಸಿನಿಂ ಖಳನು ಖಡ್ಗವನು ಪಿಡಿದು ನಿ ನ್ನೊಡೆಯರಾರೆಂದು ತೋರೆನುತ ಬಡಿಯೆ ದೃಢಭಕುತ ಶಿಶುವು ಕಂಗೆಡದೆ ನಿನ್ನನು ಕರೆಯೆ ಘುಡಿಘುಡಿಸಿಕಂಬದಿಂದೊಡೆದು ಮೂಡಿದೆ ಹರಿಯೆ 2 ಯಮಸುತನರಾಣಿಗಕ್ಷಯ ವಸ್ತ್ರವನಿತ್ತು ಕ್ರಮದಿಂದ ಅಜಮಿಳನ ಪೊರದೆ ಅಂದೂ ಸಮಯಾಸಮಯ ಉಂಟೆ ಭಕುತವತ್ಸಲ ನಿನಗೆ ಕಮಲಾಕ್ಷ ವೈಕುಂಠಚನ್ನಕೇಶವ ಬೇಗ 3
--------------
ಬೇಲೂರು ವೈಕುಂಠದಾಸರು
ಲೋಕನೀತಿ ಏನು ಮಾಡಿದರೇನು ಹಾನಿಯಾಗದು ಪಾಪ ಶ್ರೀನಿಕೇತನನ ದಿವ್ಯನಾಮ ನೆನೆಮನವೆ ಪ ಕ್ಷಣ ಪದಕಮಲಗಳ ಸ್ಮರಿಸಿ ಮನದೊಳಗೆ ಪ್ರತಿ ಕ್ಷಣಕ್ಷಣದಿ ಹರಿ ಮಹಿಮೆ ಭಜಿಸಿ ಭಕ್ತಿಯಲಿ ತೃಣ ಘನದೊಳಿಹನು ಹರಿ ಎನುತ ಚಿಂತಿಸಿ ಮನದಿ ಪ್ರಣವ ಪ್ರತಿಪಾದ್ಯನಂಘ್ರಿಯ ಭಜಿಸದನಕ 1 ಕಪಟನಾಟಕ ಸೂತ್ರಧಾರಿ ಶ್ರೀ ಹರಿಯ ಗುಣ ಅಪರಿಮಿತ ಮಹಿಮೆಗಳ ಭಜಿಸಿ ಹಿಗ್ಗುತಲಿ ಚಪಲ ಬುದ್ಧಿಗಳಿಂದ ತಪಿಸಿ ಕಂಗೆಡದೆ ಮನ ಅಪರೂಪ ಹರಿನಾಮ ಜಪ ಮಾಡದನಕ 2 ದಾನಧರ್ಮಗಳಿಂದ ಧನ್ಯನಾದೆನು ಎನಲು ಹಾನಿಯಾಗೋದು ಆಯು ಪ್ರತಿ ನಿಮಿಷದಿ ಸ್ನಾನ ಜಪತಪದೊಳಗೆ ಯಾರೆನಗೆ ಸರಿ ಎನದÉ ಮೌನದಿಂದ್ಹರಿ ನಾಮ ಧ್ಯಾನಿಸುವತನಕ 3 ಕ್ಲೇಶ ಆನಂದಗಳು ಈಶನಾಜ್ಞೆ ಇದೆಂದು ವಾಸುದೇವನೆ ಜಗತ್ಪ್ರೇರಕನು ಎಂದು ಶ್ವಾಸ ಬಿಡುವ ಶಕ್ತಿ ಲೇಸು ತನಗಿಲ್ಲ ಸ- ರ್ವೇಶ ನಿನ್ನಧೀನವೆಂದರಿವ ತನಕ4 ಗಾತ್ರ ಶೋಷಣೆಯಾಕೆ ಪಾರ್ಥಸಖನಂಘ್ರಿಗಳ ಕೀರ್ತಿಸುತ ಮನದಿ ರಾತ್ರಿ ಹಗಲು ಕಮಲನಾಭ ವಿಠ್ಠಲನ ಶ್ರೀಮೂರ್ತಿಯನೆ ನೆನೆನೆನೆದು ಸುಖಿಯಾಗೊ ಮನವೆ5
--------------
ನಿಡಗುರುಕಿ ಜೀವೂಬಾಯಿ