ಬದುಕಿಸೀ ಪಶುಗಳನೂ ಭಗವಂತ ನೀನು ಪ
ಕದಲಿಸೀರೋಗವ-ಕರುಣಿಗಳರಸನೆ ಅ.ಪ.
ಗೋವುಗಳೆಲ್ಲಾ ಹೊಟ್ಟೆ-ನೊವಿನಿಂ ಕಂಗೆಟ್ಟು
ಮೇವನುಬಿಟ್ಟ ವಿದಾವರೊಗವೋ ಕಾಣೆ 1
ಹೊಟ್ಟೆ ಕಳೆದು ಕಂಗೆಟ್ಟುಧಾತುಗಳೆಲ್ಲಾ
ಕೆಟ್ಟು ಜೀವಂಗಳ ಬಿಟ್ಟುಬಿಡದಮುನ್ನ 2
ನಾಲಿಗೆ ನೀಡವು ಕಾಲು ಕೆಟ್ಟವು ಕಂ
ಣಾಲಿ ಕೆಂಣಾಲಿ ಕೆಂಪಾದವು ಮೂಲವೆ ತಿಳಿಯದು3
ಗೋವುಗಳಿಗೆ ಭೂದೇವರುಗಳಿಗೆಲ್ಲ
ದೇವ ನೀನಲ್ಲವೆ-ದೇವಕೀ ತನಯನೆ 4
ಸತ್ತವರಿಗೆ ಜೀವವಿತ್ತು ಬದುಕಿಸಿದೆ
ಮೃತ್ಯುದೇವತೆ ನಿನ್ನ ತೊತ್ತಹಳಲ್ಲವೆ 5
ದಾಸನು ನಾನೆಂಬ ವಾಸಿಯುಳ್ಳರೆ ಬೇಗ
ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6
ಇಷ್ಟದಿನೆನೆವರ ಕಷ್ಟವ ಕಳೆವ ಪುಲಿ
ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7