ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದನೆ ಗೈವೆನು ಗುರುವೆ ಚರಣಾರವಿಂದದ್ವಯಕೆ ಮಣಿವೆ ನೀನೇ ಕಾಯೋ ಎನ್ನ ಸದ್ಗುರುವೆ ಪ ಬಂದು ಸೇರಿದೆ ನಾನು ಕರುಣ ಸಿಂಧುವೆ ಪಾಲಿಸುನೀನು ಮಂದಮತಿಯು ಜಡಜೀವನು ನಾನು ವಸುಂ ಧರೆಯೊಳಗೆ ಸುಜ್ಞಾನಿಯು ನೀನು 1 ಕಾರಗತ್ತಲೆಯೊಳಗೆ ಏನೆಂದು ತೋರದೆ ತೊಳಲಿದ ಹಾಗೆ ದಾರಿ ಕಾಣದೆ ಕಂಗಾಣದವಗೆ ಕೃಪೆ ದೋರಿ ಸುಜ್ಞಾನ ದೀಪವ ತೋರೋ ಗುರುವೆ 2 ಸೊಕ್ಕಿನ ಮದದಿಂದ ಕಾಲವ ಪುಕ್ಕಟೆಕಳೆದೆ ಯೋಗೀಂದ್ರ ದುಃಖವೆನಿಪ ಸಂಸಾರ ಶರಧಿಯೊಳು ಸಿಕ್ಕಿದೆ ಕಾಯೋ ಸದ್ಗುರು ದಿಗಂಬರನೇ 3
--------------
ಕವಿ ಪರಮದೇವದಾಸರು