ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಿಸಬೇಕೋ ಎನ್ನಾ|ಯಾದವ ರನ್ನಾ ಪ ತಾರಿಸಬೇಕೋ ಎನ್ನಾ | ಯಾದವ ರನ್ನಾ| ಸಾರಿದೆ ನಾನು ನಿನ್ನಾ|ಘೋರ ಭವಾಂಬುಧಿಯಾ| ಪಾರಗಾಣೆನೋ ಜೀಯಾ | ವಾರೆ ಕಂಗಳೆನ್ನಾ ನೋಡಿ| ದಯಮಾಡಿ ಒಡಮೂಡಿ ಅಭಯವ ನೀಡಿ1 ತಾನಾರೆಂಬುದು ನೋಡದೇ ತನುವಿನೊಳು| ನಾ ನನ್ನದೆಂದು ಪಾಡಿದೇ| ಶ್ರೀನಾಥ ನಿನ್ನ ನಾಮಾ|ನೆನೆಯದೆ ಮನದೊಳೊಮ್ಮಾ| ನಾನಾ ವಿಷಯದೊಳು ಬೆರೆದು|ಮೈಮುರಿದು| ಹಿತಜರಿದು ಕೆಡುವಾದೇನರಿದು 2 ಶರಣರಾ ಸಂಗದೋರಿಸಿ|ಸ್ವರೂಪವಾ| ಮರೆದ ವಿಭ್ರಮ ಹಾರಿಸೀ| ಗುರುಮೂರ್ತಿ ಪ್ರಭು|ಅರಹು ನೀಡೋ ಭಕ್ತಿಯಾ| ಸುರಸಾ ಸಾರಾಯದ|ಸುಖನುಂಬೆ|ಬಲಗೊಂಬೆ| ನಮೋಯೆಂಬೆ ಎನ್ನಿಂಬ ಬಿಂಬವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು