ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದನಿಂದು ರಾಘವೇಂದ್ರನು ಆನಂದದಿಂದಲಿ ಬಂದನಿಂದು ರಾಘವೇಂದ್ರನು ಪ. ಕಂದರಾದ ಭಕ್ತ ಜನರ ಚಂದದಿಂದ ಪೊರೆವೆನೆಂದು ಅ.ಪ. ಪರಿಪರಿಯ ವೈಭವವನು ಪಡಲಿಬೇಕೆಂದು ಕರದು ತರಲು ಕರಕರಿಯ ಕರದು ಮನವ ನೋಡಬೇಕೆಂದು 1 ಕರುಣಾನಿಧಿ ಎಂದೆನಿಸಿ ನಿನಗೆ ಥರವೆ ಇದು ಎಂದು ಪರಿಪರಿಯಲಿ ಸ್ತುತಿಸುತಿರಲು ಸ್ಥಿರವಾರದಿ ಹರುಷ ತೋರಲು 2 ಬಂದ ಬುಧರಿಂದ ಪೂಜೆನಂದಗೈಸ ಬೇ ಕೆಂದು ತುಂಗಜಲವ ತರುತಿರÉ ಬಂದ ಮಾಯದಿಂದ ಹರಿಯು 3 ದ್ವಿಜರ ಹಸ್ತಜಲವ ಶ್ರೀನಿವಾಸ ಬೇಡಲು ದ್ವಿಜರು ಕೊಡಲು ಗುರುಗಳನ್ನು ಪೂಜೆಗೈದೆನೆಂದು ನುಡಿದ 4 ಈ ತೆರದ ಕೌತುಕವ ಶ್ರೀನಾಥ ತೋರುತ ಆ ತಕ್ಷಣದಿ ಮಾಯವಾಗೆ ರೀತಿಯಿಂದ ಪೂಜೆಗೈಯ್ಯಲು 5 ಮಂತ್ರಾಲಯದ ಮಂದಿರನಿಗೆ ಪಂಚಾ ಮೃತದಿಂದ ಸಂತೋಷದಲಿ ಪೂಜೆ ಗೈದು ಪಂಚಮೃಷ್ಟಾನ್ನ ಬಡಿಸೆ6 ಶ್ರೀನಿವಾಸ ಸಹಿತ ಶ್ರೀ ರಾಘವೇಂದ್ರರು ಸಾನುರಾಗದಿ ಸೇವೆಕೊಂಡು ನಾನಾ ವಿಧದ ಹರುಷಪಡಿಸೆ 7 ಎನ್ನ ಮನಕೆ ಹರುಷಕೊಡಲು ನಿನ್ನ ಭಜಿಸುವೆ ನಿನ್ನ ಮನಕೆ ಬಾರದಿರ್ದೊಡೆ ಮುನ್ನೆ ಪೋಗಿ ಬಾರೆಂದೆನಲು 8 ತುಂಗಮಹಿಮ ರಾಘವೇಂದ್ರರ ಮಂಗಳದ ಪುತ್ರ ಕಂಗಳೀಗೆ ತೋರಿ ಅಂತ ರಂಗದಲ್ಲಿ ಹರುಷವಿತ್ತು 9 ಶ್ರೀ ಗುರುಗಳ ಕರುಣದಿಂದ ರಾಘವೇಂದ್ರನು ಭಾಗವತರ ಪೊರೆವೆನೆಂದು ಯೋಗಿ ಶೇಷಾಂಶ ಸಹಿತ 10 ಇಂತು ರಾಘವೇಂದ್ರ ಗುರು ತಾ ಶಾಂತನಾಗುತ ಶಾಂತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ತೋರ್ವೆನೆಂದು 11
--------------
ಅಂಬಾಬಾಯಿ