ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳಯ್ಯಾ ಏಳು ಕಂದಾ | ಏಳು ಪರಮಾನಂದಾ | ಏಳು ಈರೇಳು ಜಗದೊಡೆಯ ಶ್ರೀಮುಕುಂದಾ ಪ ಮೊರೆವದೊಂದೇಗಾಲಿ | ಪರಿವಹರಿವೇಗಮಂ | ಜರಿದು ಯೇಳು ಕುದುರೆಂಗಳದರಾ | ಪೋರವರುಣನಿಂದ ಭೋರ್ಗರೆವ ಸ್ಯಂದನದೊಳಗ | ಮೆರೆವ ದಿನಕರ ಉದಯವಾದ ಪೂರ್ವಾದ್ರಿಯಲಿ 1 ಬಿರಿಯೆ ಕಮಲದ ಮೋಗ್ಗೆ ಕರಿಯೆ ಗೋವತ್ಸಗಳು | ಪರಿಯೆ ನಕ್ಷತ್ರಗಳು ಗಗನದೊಳಗ || ಸರಿಯೆ ಚೋರ್ವಿರಹಿಗಳು ವರಿಯದಂತಾಲಯಕೆ | ದೆರಿಯ ಕಣ್ಣೆವಿಯಗಳು ನಿದ್ರೆಗೈದಿದ ಜನರು 2 ಓಡುತಿದೆ ಕತ್ತಲೆಯು ಬಾಡುತಿದೆ ಕುಮುದ ಮುಖ | ಕೂಡುತಿವೆ ಚಕ್ರವಾಕಂಗಳೀಗ | ಆಡುತೆಳೆದುಂಬಿ ಚಲ್ಯಾಡುತಿದೆ ಮಧುರನವ | ಪಾಡುತಿದೆ ಮಹೀಪತಿ ಸುತನಾಮ ಕೀರ್ತಿಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡು ಧನ್ಯನಾದೆ ನಂದತನಯನ ಕಣ್ಣಾರ ಕಂಡು ಧನ್ಯನಾದೆ ನಂದ ತನಯನ ಕಂಡು ಧನ್ಯನಾದೆ ದಣಿಯವೆನ್ನವೆರಡು ಕಂಗಳೀಗ ತಿರುಗಿ ಪೋಗಲಾರೆ ತಿಮ್ಮಲಾಪುರೀಶ ದೊರೆಯ ಬಿಟ್ಟು ಪ ಸಾಲುದೀವಿಗೆ ಸಣ್ಣನಾಮ ಸರದ ಮಧ್ಯೆ ವೈಜಯಂತಿ ಸೂರ್ಯನಂತೆ ಹೊಳೆವ ಮುದ್ದು ಮುಖವು ಮಹಾದ್ವಾರದಲ್ಲೆ 1 ಶಂಚಕ್ರ ಶ್ಯಾಮವರ್ಣ ಅಂಕಿತವುಳ್ಳ ನಾಮಗಳಿಂದ ಪಂಕಜಾಕ್ಷ ಪರಮಪುರುಷ ವೆಂಕಟನೆಂಬೊ ನಾಮಾಂಕಿತದವನ 2 ಆ ಮಹಾ ವೈಕುಂಠದಲ್ಲಾವಾಸವಾದ ನಮ್ಮ ಕುಲ- ಸ್ವಾಮಿ ಎನಿಸಿಕೊಂಡ ಭೀಮೇಶ ಕೃಷ್ಣನ ದಯದಿಂದೀಗ 3
--------------
ಹರಪನಹಳ್ಳಿಭೀಮವ್ವ
ಬಂದನಿಂದು ರಾಘವೇಂದ್ರನು ಆನಂದದಿಂದಲಿ ಬಂದನಿಂದು ರಾಘವೇಂದ್ರನು ಪ. ಕಂದರಾದ ಭಕ್ತ ಜನರ ಚಂದದಿಂದ ಪೊರೆವೆನೆಂದು ಅ.ಪ. ಪರಿಪರಿಯ ವೈಭವವನು ಪಡಲಿಬೇಕೆಂದು ಕರದು ತರಲು ಕರಕರಿಯ ಕರದು ಮನವ ನೋಡಬೇಕೆಂದು 1 ಕರುಣಾನಿಧಿ ಎಂದೆನಿಸಿ ನಿನಗೆ ಥರವೆ ಇದು ಎಂದು ಪರಿಪರಿಯಲಿ ಸ್ತುತಿಸುತಿರಲು ಸ್ಥಿರವಾರದಿ ಹರುಷ ತೋರಲು 2 ಬಂದ ಬುಧರಿಂದ ಪೂಜೆನಂದಗೈಸ ಬೇ ಕೆಂದು ತುಂಗಜಲವ ತರುತಿರÉ ಬಂದ ಮಾಯದಿಂದ ಹರಿಯು 3 ದ್ವಿಜರ ಹಸ್ತಜಲವ ಶ್ರೀನಿವಾಸ ಬೇಡಲು ದ್ವಿಜರು ಕೊಡಲು ಗುರುಗಳನ್ನು ಪೂಜೆಗೈದೆನೆಂದು ನುಡಿದ 4 ಈ ತೆರದ ಕೌತುಕವ ಶ್ರೀನಾಥ ತೋರುತ ಆ ತಕ್ಷಣದಿ ಮಾಯವಾಗೆ ರೀತಿಯಿಂದ ಪೂಜೆಗೈಯ್ಯಲು 5 ಮಂತ್ರಾಲಯದ ಮಂದಿರನಿಗೆ ಪಂಚಾ ಮೃತದಿಂದ ಸಂತೋಷದಲಿ ಪೂಜೆ ಗೈದು ಪಂಚಮೃಷ್ಟಾನ್ನ ಬಡಿಸೆ6 ಶ್ರೀನಿವಾಸ ಸಹಿತ ಶ್ರೀ ರಾಘವೇಂದ್ರರು ಸಾನುರಾಗದಿ ಸೇವೆಕೊಂಡು ನಾನಾ ವಿಧದ ಹರುಷಪಡಿಸೆ 7 ಎನ್ನ ಮನಕೆ ಹರುಷಕೊಡಲು ನಿನ್ನ ಭಜಿಸುವೆ ನಿನ್ನ ಮನಕೆ ಬಾರದಿರ್ದೊಡೆ ಮುನ್ನೆ ಪೋಗಿ ಬಾರೆಂದೆನಲು 8 ತುಂಗಮಹಿಮ ರಾಘವೇಂದ್ರರ ಮಂಗಳದ ಪುತ್ರ ಕಂಗಳೀಗೆ ತೋರಿ ಅಂತ ರಂಗದಲ್ಲಿ ಹರುಷವಿತ್ತು 9 ಶ್ರೀ ಗುರುಗಳ ಕರುಣದಿಂದ ರಾಘವೇಂದ್ರನು ಭಾಗವತರ ಪೊರೆವೆನೆಂದು ಯೋಗಿ ಶೇಷಾಂಶ ಸಹಿತ 10 ಇಂತು ರಾಘವೇಂದ್ರ ಗುರು ತಾ ಶಾಂತನಾಗುತ ಶಾಂತ ಗೋಪಾಲಕೃಷ್ಣವಿಠ್ಠಲನ ಅಂತರಂಗದಿ ತೋರ್ವೆನೆಂದು 11
--------------
ಅಂಬಾಬಾಯಿ