ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ ಪ.
ರಂಗನ ಶ್ರೀಪಾದಂಗಳ ನೋಡದ ಅ.ಪ
ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆ-ನಂದದಿಂದಲಿ ರಂಗನ ನೋಡದ 1
ಹರಿ ಪಾದೋದಕ ಸಮ ಕಾವೇರಿವಿರಜಾನದಿಯ ಸ್ನಾನವ ಮಾಡಿಪರಮ ವೈಕುಂಠ ರಂಗಮಂದಿರಪರವಾಸುದೇವನ ನೋಡದ 2
ಹಾರ ಹೀರ ವೈಜಯಂತಿತೋರ ಮುತ್ತಿನ ಹಾರ ಧರಿಸಿತೇರನೇರಿ ಬೀದಿಲಿಮೆರೆವ ರಂಗವಿಠಲನ್ನ ನೋಡದ 3