ಆಲಿಸು ರಂಗನ ಮುರಳಿಯಾ ಕರೆ
ವನುತೆಯರೆ ಬೇಗ ತ್ವರೆ ತ್ವರೆ ಪ.
ಪಕ್ಕದ ನೆರೆಹೊರೆ ಅಕ್ಕ ತಂಗಿಯರೆ
ರಿಂಧಾವನಕೆ ತ್ವರೆ ತ್ವರೆ ಅ.ಪ.
ರಂಗನ ಮುರಳಿಯ ಧ್ವನಿಯಿದು ನೋಡಿ
ಕಂಗಳಿಗ್ಹÀ್ಹಬ್ಬವು ತ್ವರೆ ತ್ವರೆ ನಮ್ಮ 1
ಮಿಕ್ಕ ಕೆಲಸವೆಲ್ಲ ಲೆಕ್ಕದೊಳಿಡದೆ
ಲಕ್ಕುಮಿ ಪತಿಯೆಡೆ ತ್ವರೆ ತ್ವರೆ2
ಪರಮ ಪುರುಷ ಎಮ್ಮ ಕರೆದನು ನೋಡಿ
ಮುರಳಿಯ ಸ್ವರದೊಳು ತ್ವರೆ ತ್ವರೆ3
ಶ್ರೀ ಶ್ರೀನಿವಾಸನು ಪೋಷಿಪನೆಮ್ಮ
ದೋಷವೇನಿದ್ದರು ತ್ವರೆ ತ್ವರೆ ತಂಗಿ4