ಏಳುತಲಿ ಎದ್ದು ಎಚ್ಚರಿಸುತ ನೀ ನೆನೆಯೊ |
ಪಾಲಿಸುವ ಮೂಲೋಕ ಪರಮಾತ್ಮನಾ ಪ
ಮೂರೊಂದು ಪದರದ ಚೀಲದೊಳು ಥಳಥಳಸಿ
ದೋರುತಿಹ ರತ್ನ ಪರಿಚಿದ್ರೂಪನಾ |
ಅರಿಗಳ ವಡೆದ ಘನ ತ್ರಿವೇಣಿ ತೀರದಲಿಹ |
ಧೀರಯೋಗಿಯ ಕಂಗಳಾನಂದನ 1
ಬೇರು ಮೇಲಾಗಿ ಕೊಂಬುಗಳು ಕೆಳಗಾದ ಸಂ |
ಸಾರ ವೃಕ್ಷವ ತ್ರಿಗುಣಮಯದಿಂದಲಿ ||
ವಾರಿಜಭವಾಂಡ ಪಿಂಡಾಂಡಗಳ ಪರಿಪರಿಯ |
ತೋರಿ ತೋರದಲಿಪ್ಪ ನಿರ್ಲಿಪ್ತನಾ2
ನೋಡಿಸುವ ಕೇಳಿಸುವ ವಾಸಿಸುವ ಪರಿಮಳವ |
ಆಡಿಸುವ ಕರಚರಣ ನುಡಿನುಡಿಸುವ |
ರೂಢಿಯೊಳು ಸೂತ್ರಧಾರಕನಾಗಿ ಅಷ್ಟದಳದ |
ಲಾಡುತಿಹ ಮಹೀಪತಿ ಸುತಪ್ರಭು ಭಕುತಿಯಲಿ3