ಕಾಯಯ್ಯಾ ನೀ ಎನ್ನ ರನ್ನಾ |
ದಯದಲಿ ಸಂಪನ್ನಾ ಪ
ಮಂದರಧರ ದಶಕಂದರ ಹರಿ ಅತಿ- |
ಸುಂದರ ಸದ್ಗುಣ ಮಂದಿರ ಈಶಾ |
ಕುಂದರದನ ಕಂಬುಕಂದರ ಐದೊಂದು |
ಕಂದರ ಪಿತ ಸಖ ಇಂದಿರೆಯರಸಾ 1
ತುಂಗ ವಿಕ್ರಮ ದನುಜಾಂತ ಮದಗಜಕ |
ಹರಣ ರಂಗ ನಿಸ್ಸೀಮಾ |
ಇಂಗಿತಜನ ಭವಭಂಗ ಕಮಲದಳ |
ಕಂಗಳಲೊಪ್ಪುವ ಮಂಗಳ ಮಹಿಮಾ 2
ಅಂಬುಜ ಭವನುತ ಅಂಬುಧಿಜಾನನ |
ಅಂಬುಜ ಸುಚಕೋರಾಂಬುಜ ಚರಣ |
ಅಂಬುಧಿವಾಸ ವಿಶ್ವಂಭರ ಮಹಿಪತಿ- |
ನಂಬಿದ್ದವರಿಗಿಂಬಾಗಿಹೆ ಕೃಷ್ಣಾ 3