ಮೋತಂಪಲ್ಲಿ ಪ್ರಾಣದೇವರ ಸ್ತೋತ್ರ
ಏನು ಕರುಣವೊ ನಿನಗೆ ಮೋತಪಲ್ಲಿಶಾ ||ದೀನ ದ್ವಿಜಗೊಲಿದು ಬಂದಿಲ್ಲಿ ನಿಂತೇ ಪ
ವಿಪ್ರವರ ತಪಗೈಯ್ಯೆ | ನೀನೊಲಿದು ಅವನಿಗೆಕ್ಷಿಪ್ರದಿಂ ಕಿಂಪುರುಷ | ಖಂಡದಿಂಧ್ಹೊರಟೂ |ಅಪ್ರತಕ್ರ್ಯೊರು ಸ | ದ್ಗುಣ ಪೂರ್ಣ ಹರಿದೂತಸುಪ್ರಸನ್ನನು ಆಗಿ ಬಂದಿಲ್ಲಿ ನಿಂತೇ 1
ಸುಜನ ಜನರಂದೂ 2
ಪಾದ | ಪದ್ಮಯುಗವಾ ||ದ್ವಿಜಗುರೂ ಪ್ರಾಣಪತಿ | ತೈಜಸನು ತಾನಾಗಿ |ಭಜಕರಿಗೆ ಪೇಳಿದನು | ಸ್ವಪ್ನ ಸೂಚಿಸುತಾ 3
ಭಿನ್ನವಾಗಿದ್ದಂಥ | ಅಂಗಗಳ ಜೋಡಿಸುತನನ್ನೆಯಿಂ ತೈಲವನು | ಪೂಸೆನ್ನುತಾ |ತನ್ನ ಸದನದ ಕದವ | ನಾಲ್ವತ್ತು ಮತ್ತೊಂದುದಿನ್ನ ತೆಗೆಯದೆ ಲವಣ | ವ್ರತ ಮಾಳ್ಪುದೆಂದಾ 4
ಸದನ | ಕದ ತೆಗೆಯುತಿರಲೂ |ನೇಮ ಮೀರಿದ ಫಲವು | ತೋರುವನೊ ಎಂಬಂತೆಕೀಮು ರಕ್ತವ ಸ್ರವಿಸೆ | ವಕ್ಷದಲಿ ಕಂಗಳಲೀ 5
ತಪ್ಪು ತಪ್ಪೆಂದವನು | ದವಡೆಯನೆ ತಟ್ಟುತ್ತಅರ್ಪಿಸಲು ತನುಮನವ | ಭಕುತಿಯಿಂದಾ |ವಪ್ಪಿಕೊಳ್ಳುತ ಹನುಮ | ಸ್ವಪ್ನದಲಿ ಪೇಳಿದನುಅರ್ಪಿಸುವುದಲ್ಲಿಲಿ | ಶಾಲಿಗ್ರಾಮಗಳಾ6
ಹರಿಮಹಿಮೆ ಕೊಂಡಾಡಿ | ಬರದಂತೆ ತಾವ್ ಮಾಡಿನರಸಿಂಹ ವಸುದೇವ | ಸುತ ಶಾಲಿಗ್ರಾಮಗಳಾ |ಸ್ಥಿರಪಡಿಸಲಲ್ಲಿಲಿ | ಕರುಣದಿಂದಲಿ ದಿವ್ಯವರ ರೂಪದಿಂ ನಿಂತೆ | ಗುರು ಮಾರುತೀಶಾ 7
ಮಾಸ | ಎಂಟೈದನೇ ದಿನದಿನೆಂಟರೆಲ್ಲರು ಸೇರಿ | ಬಹು ಉತ್ಸವಗಳಾ |ಭಂಟರಾಮರ ನಿನಗೆ ಉಂಟು ಮಾಡಲು ಭಕ್ತಕಂಟಂಕಗಳ ನೀಗಿ | ವಾಂಛಿತವ ನೀನೇ 8
ಗುರುಗೋವಿಂದ ವಿಠಲ | ಪರಮ ಸೇವಕ ಹನುಮಪರಿ ಪರೀಯಲಿ ನಿನ್ನ | ಚರಣ ಯುಗ್ಮಗಳಾ |ಪರಮ ಭಕ್ತಿಲಿ ಸೇವೆ | ನೆರೆ ಮಾಳ್ಪ ಸುಖವಿತ್ತುಪರಮ ಪುರುಷನ ಕಾಂಬ | ವರ ಮಾರ್ಗ ತೋರೋ 9