ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಖಿಳ ಭವದುರಿತನೆ ಅಂಜನೆಯ ಸುತಗೆ ಆರೋಪಿಸಿದ ಬಳಿಕ ಪ ಪಾತಕವು ಬಿಡದೆಂದು ಪರಿಪರಿಯ ಚಿಂತಿಸುತ ಯಾತಕೆನ್ನಭಿಮಾನ ನಾಥನಿರಲು ಮಾತಪಿತರಲ್ಲಿ ನಿರ್ಮಿತಮಾಡಿ ನಿಲ್ಲಿಸಿದ ಆತನಾಜ್ಞೆಯಾದಂತೆ ಆಗುವುದಲ್ಲದೆ 1 ದುರಿತ ಘೋರಿಸುವೆನೆನುತಲಿ ಅಡ್ಡಬಂದಾಗ ಓಡಿಸುವೆನೆನುತ ಅಡ್ಡಬಂದಾಗಂತ್ಯ ಕಾಲದಲಿ ರಕ್ಷಿಸುವ ದೊಡ್ಡ ಕಂಗಳನೆಂಬ ಧೊರೆಯ ಹೊಂದಿದ ಮೇಲೆ 2 ಸೃಷ್ಟಿಯನು ಮಾಡಿದ ಇಷ್ಟ ದೇವತೆ ನಿಮ್ಮ ಬಿಟ್ಟವನೆ ಭ್ರಷ್ಟ ಚಿಂತೆಯು ಬೇಡವೋ ಕಷ್ಟಗಳ ಕಳೆವ ಕದರುಂಡಲಗಿ ಹನುಮಯ್ಯನ ನಿಷ್ಠೆಯಲಿ ಭಜಿಸಿ ನಿಶ್ಚಿಂತನಾಗಿರು ಮನವೆ 3
--------------
ಕದರುಂಡಲಗಿ ಹನುಮಯ್ಯ
ಎನ್ನ ಮನದ ಡೊಂಕ ತಿದ್ದಯ್ಯಾ ಗೋಪಾಲಕೃಷ್ಣ ಪ ಎನ್ನ ಮನದ ಡೊಂಕ ತಿದ್ದಿ ಮುನ್ನ ಮನ್ನಿಸದಿ[ರೆ]ತಿದ್ದಿಬನ್ನ ಪಡಲಾರೆ ಭವಾಬ್ಧಿಯನ್ನೆ ದಾಟಿಸೊ ಅಪಾರಮಹಿಮ ಅ.ಪ. ಉದಯವಾದರೆ ಊಟದ ಚಿಂತೆ ಉಂಡಮೇಲೆ ಭೋಗದ ಚಿಂತೆದರಮೇಲೆ ಹದಿನಾಲ್ಕು ಲೋಕಂಗಳನೆ ಆಳ್ವ ಚಿಂತೆ 1 ಸುಖವು ಬಂದರೆ ನಾನೆ ಸಮರ್ಥ ದುಃಖವು ಬಂದರೆ ಹರಿಯುಮಾಡ್ದರೊಕ್ಕ ಬಂದರೆ ನಾನೆ ಧನಿಕ ಸಿಕ್ಕಿಬಿದ್ದರೆ ಹರಿಯ ವ್ಯಾಪಾರ 2 ತಿಳಿದು ತಿಳಿದು ಪತಂಗದ್ಹುಳವು ಕಿಚ್ಚಿನಲ್ಲಿ ಬೀಳೋಹಾಂಗೆಕಾಲಕಳೆದೆ ಮೂಕನಂತೆ ಮುದ್ದು ಹಯವದನನೆ 3
--------------
ವಾದಿರಾಜ
ಧ್ಯಾನವನು ಮಾಡು ಬಿಂಬ ಮೂರುತಿಯಪ ಆನಂದದಲಿ ಕುಳಿತು ಅಂತರಂಗದಲಿ ಅ.ಪ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ1 ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ 2 ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು3 ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು 4 ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ 5 ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ ಕಮಲ ಮಧ್ಯ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ6 ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು 7 ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ 8 ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ9
--------------
ವಿಜಯದಾಸ
ಬಿಡು ಎನ್ನ ಶೆರಗನು ಬಾಲಕೃಷ್ಣಾಉಡುಗಿ ದೇವರ ಮನಿ ಬರುವೆ ಬೇಗ ಪ ಅಂಗಳ ಥಳಿ ಹಾಕಿ ರಂಗವಲ್ಲಿಯ ಹಾಕಿತಂಗಳ ಮೊಸರನ್ನಾ ಕಡೆಯಲ್ಹಾಕಿಬಂಗಾರದ ಬಟ್ಟಲೊಳು ರಂಗ ಬೆಣ್ಣೆಯನೀವೆಕಂಗಳನೆ ತೆಗಿ ಬೀರು ಮಂಗಳವಾ1 ಹಾಸಿಗೆ ಬಿಟ್ಟೇಳು ವಾಸುದೇವನೆ ನಿಮ್ಮಹಾಸಿನ ತೊಟ್ಟಿಲೊಳು ಮಲಗು ಕೂಸಾಏಸು ಹುಡುಗರೆಲ್ಲ ಸೋಸಿಲಿ ಕರೆವರುದೋಸೆ ಕೊಡುವೆ ತಿನ್ನೋ ಏಳು ಬೇಗ 2 ತರುವು ಕಟ್ಟಲಿ ಬೇಕು ಕರುವು ಕಾಯಲುಬೇಕುತೊರೆದು ಮಲಿಯನುಣ್ಣು ಏಳು ಬಾಲಜರದ ಕುಂಚಿಗೆ ಹೊದ್ದು ಹೊರಗೆ ಬಂದಿಹ ರಾಮಕರೆಯುತ್ತಲಿರುವನು ಕಣ್ಣೆತ್ತಿ ನೋಡು 3 ಕೋಳಿ ಕೂಗುತಲಿದೆ ಕಾಳು ಕಡಿವೆ ಹಾಕುಏಳು ಗಿಳಿಯು ನಿನ್ನ ಕೇಳುತಲಿವೆಪಾಲು ಸಕ್ಕರಿನಿತ್ತು ಸಾಲು ಕೋಕಿಲ ಹಿಂಡುಗಾನ ಮಾಡುತಲಿವೆ ಏಳು ಬೇಗ4 ಅಂದ ಮಾತನು ಕೇಳಿ ಆ ಕಂದ ಎತ್ತಿಕೋ ಎನ್ನಒಂದು ಬಟ್ಟಲದೊಳಗೆ ತಂದುಕೊಡು ಆಡುವೆಎಂದು ತಾಯಿ ಚಿನ್ನಾ ಹಿಂದೆ ಸೆರಗಪಿಡಿದು ಇಂದಿರೇಶ 5
--------------
ಇಂದಿರೇಶರು