ಸಂಕೀರ್ಣ
ಇದೇ ವೀಳ್ಯ ಅಡಕ್ಯೆಂಬುದು ನೋಡಿ
ಹದನಿಸಿ ನಾಲ್ಕುಗುಣ ಚೂರ್ಣಮಾಡಿ ಧ್ರುವ
ಅಡಕೆಂಬದನುಮಾನಪೂಟ
ಒಡೆದ ಹೋಳು ಮಾಡಿ ಚೊಕಷ್ಟ
ಮಡಿಚಿಮ್ಮನೆಂಬುದು ವೀಳ್ಯ ನೀಟ
ತೊಡೆದು ಅಹಂ ಸುಣ್ಣ ಖಾರಟಾ 1
ಗುರುವರ್ಮ ಕಾಚೆಂಬುದು ಪೂರ್ಣ
ಸುರಮುನಿ ಜನರ ನಿಧಾನ
ತೋರುತಿಹ್ಯದೊಂದೆ ನಿಜ ಖೂನ
ಕರಗಿಹೋಯಿತು ಮೂರೊಂದು ವರ್ಣ 2
ವೀಳ್ಯ ಮಾಡಲು ಮರ್ದನ
ಕಳದ್ಹೋಯಿತು ಅದರವಗುಣ
ಕಳೆ ಹೆಚ್ಚಿತು ರಂಗ ಸಗುಣ
ಥಳಿಥಳಿಸುವ ಜ್ಞಾನ ಸುಬಣ್ಣ 3
ನುಂಗಿ ತಾಂಬೂಲ ರಸ ಹಲವಂಗ
ಹಿಂಗಿ ಹೋಯಿತು ಭವಭಯಭಂಗ
ಕಂಗಳದ್ಯರಿಯತು ಅಂತರಂಗ
ರಂಗದೋರಿತ್ಯನ್ನೊಳು ಸತ್ಸಂಗ 4
ವೀಳ್ಯ ಅಡಕಿ ಮಹಿಪತಿಗೆ ನೋಡಿ
ತಿಳದವರಿದೆ ನಿಜಪೂರ್ಣ ಮಾಡಿ
ಕಳೆದು ಕಲ್ಪನಿ ಕೊನೆ ಆಗ್ಯೀಡ್ಯಾಡಿ
ಇಳಿಯೊಳಗಿದೆ ಸವಿ ಸುಖಗೂಡಿ 5