ಆವ ಜನುಮ ಸಖನೇ ನಮ್ಮಯ್ಯಾ ಪ
ಅವಿದ್ಯ ಬಲಿಯೊಳು ಸಿಲುಕಿ ಬಳಲುವನ |
ಸುವಿದ್ಯ ನೋಟದ ಕರುಣವ ಬೀರಿದನಾ1
ಏನರಿಯದಲಿರೆ ವಿಷಯ ಮದಾಂಧದಿ |
ಜ್ಞಾನಾಂಜನವ ಮಾಡಿ ಕಂಗಳದೆರಿಸಿದನಾ 2
ಹೃದಯ ಭೂಮಿಗೆ ಹರಿ ನಾಮಬೀಜವ ಬಿತ್ತಿ |
ಸದಮಲ ಭಕುತಿಯ ಬೆಳೆಗಳ ನುಣಿಸಿದನಾ 3
ಕೇಳದ ನುಡಿಗಳ ಹೇಳುತ ಕಿವಿಯೊಳು |
ಕಾಲ ಕಾಲಕ ಎನ್ನ ಹಿತವನೆ ಯೋಜಿಪನಾ4
ತಂದೆ ಮಹಿಪತಿ ಕಂದನೆನಿಸಿತ್ತ ನಾ |
ಪರ ಭಾಗ್ಯವ ನೀಡಿದನಾ5