ಜಯಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ
ಜಯಜಯವೆನ್ನಿರೊ ಧ್ರುವ
ಕಂಗಳದೆರಸಿ ಅಂತರಂಗದೋರಿದವಗೆ
ಮುಂಗಡÀಲೆ ಇದ್ದು ಸುಸಂಗದೋರಿದವಗೆ
ಹಿಂಗಿಸೆನ್ನ ಭವಭಯ ಭಂಗಮಾಡಿದವಗೆ
ಮಂಗಳಾತ್ಮಕನ ಸಂಗಸುಖ ಬೀರಿದವಗೆ 1
ಆರು ಅರಿಯದ ವಸ್ತು ಸಾರಿದೋರಿದವಗೆ
ಶಿರದಲಿ ಕರವಿಟ್ಟು ಕರುಣಿಸಿದವಗೆ
ಮೂರುಗುಣಕೆ ಮೀರಿದ ತಾರಕ ಗುರುವಿಗೆ
ಸಾರವಾಡದಲಿ ನಿಂದು ಪಾರದೋರಿದವಗೆ 2
ಸೋಹ್ಯ ಸೊನ್ನೆಯದೋರಿಸಿನ್ನು ಸಾಹ್ಯ ಮಾಡಿದವಗೆ
ಗುಹ್ಯ ಗುರುತ ತೋರಿದ ಗುರುಮೂರ್ತಿಗೆ
ಕೈಪಿಡಿದು ಮಹಿಪತಿಗೆ ದಯಮಾಡಿದವಗೆ 3