ಶ್ರೀಸತ್ಯವ್ರತರು
ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ
ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ.
ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ 1
ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ2
ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ 3
ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ 4
ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ 5