ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಚಂದಿರವದನೆ ಮಂದಗಮನೆ ಕಂದರ್ಪ ಕೋಟಿ ಲಾವಣ್ಯೆ ಪ ಮಂದನಾಗಿ ಭವಸಿಂಧುವಿಲಿ ಪೊಂದಿದೆ ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ. ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ ಹೊಗಳುವ ಮತಿ ನೀಡೆ ಕಲ್ಯಾಣಿ ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ 1 ಸರಸಿಜೋದ್ಭವ ಮಾತೆ ವಿಖ್ಯಾತೆ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ 2 ಹರಿಗುಣ ಮಣಿಯೆಣಿಸುವ ಧೀರೆ ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ ಅರಿದೂರ ವಿಜಯ ರಾಮಚಂದಿರವಿಠಲನ ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ 3
--------------
ವಿಜಯ ರಾಮಚಂದ್ರವಿಠಲ
ಭೀಮ ಲಾಲಿ ಭಾರತ ಕುಲಾಂಬುಧಿ ಸೋಮ ಗುಣನೆ ಲಾಲಿ ಪ ಲಾಲಿ ಯಾದವ ಪದಾಂಭೋಜ ಮಧುಕರನೆಲಾಲಿ ಮುನಿವರತನಯ ಸುತನ ಗೆಲಿದವನೆಲಾಲಿ ಕರೆವೆನು ಬಾರೋ ಮಧ್ವ ಮುನಿವರನೆ ಲಾಲಿ ಅ.ಪ. ಲಾಲಿ ಕಾಲ್ಗಡಲರುಳಿ ಕುಣಿತ ನಿಜಚರಣಾಲಾಲಿ ಮಧ್ಯದೊಳುಟ್ಟ ಕನಕಮಯ ವಸನಾಲಾಲಿ ಕೊರಳೊಳಗಿಟ್ಟ ಹಾರಗಳ ಸದನಾಲಾಲಿ ಕಿವಿಯೊಳು ಹೇಮಕುಂಡಲಾಭರಣಾ ಲಾಲಿ 1 ಲಾಲಿ ಕರಯುಗ ಶೋಭಿತ ಕಂಕಣಾಭರಣಾಲಾಲಿ ಲೋಕವ ಮೋಹಿಸುವ ಮಂದಹಾಸನಾಲಾಲಿ ತರುಣಿರೂಪ ಶೃಂಗಾರ ಸದನಾಲಾಲಿ ತಾಂಬೂಲರಸಭಾಸ ನಿಜವದನಾ ಲಾಲಿ 2 ಲಾಲಿ ನರ್ತನಾ ಕೃತಾಲಯ ಚರಣಗಮನಾಲಾಲಿ ನಿಜ ಕಾಮಿನಿ ಸಂಕಟ ಹರಣಾಲಾಲಿ ಕೀಚಕಲಾಲಿ ಇಂದಿರೇಶ ಮಾಧವನ ತೋರಿದನ ಲಾಲಿ 3
--------------
ಇಂದಿರೇಶರು