ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲಮಂಗಳಾರತಿ ಎತ್ತಿರೆಲ್ಲಸಂಗಾತೀತ ಚಿದಾನಂದಾವಧೂತಾಂಗ ಶ್ರೀಬಗಳಾಮುಖಿ ದೇವಿಗೆ ಪ
ಕರದೊಳು ಚೂಡೆ ಕಂಕಣವಿಟ್ಟುಕೊರಳೊಳು ಸರಿಗೆಯ ಧರಿಸಿಶಿರದಿ ರತ್ನದ ಕಿರೀಟವಿಟ್ಟು ಸರ್ವಾಭರಣವಧರಿಸಿ ದುರುಳರ ದುಷ್ಟರ ಛೇಧಿಸಿ ಭ-ಕ್ತರ ಪಾಲಿಪ ಬಗಳಾಮುಖಿಗೆ 1
ನಿತ್ಯ ನಿರ್ಗುಣ ನಿರಾಮಯಗೆ ನಿಂದಕವಿದಾರಣೆಗೆಭಕ್ತ ವತ್ಸಲೆ ಭುವನೇಶ್ವರಿ ಮಾತೆಗೆಭಕ್ತಾಧಾರೆಗೆ ಪ್ರತ್ಯಗಾತ್ಮೆಗೆ ಪರಬ್ರಹ್ಮ ರೂಪಿಣಿಭಕ್ತ ಪ್ರಾಣಿಗೆ ಬಗಳಾಮುಖಿಗೆ 2
ಅದ್ವಯ ಆಗಮಗೋಚರಗೆ ಅಚಲಾನಂದಳಿಗೆ ಶುದ್ಧಸಂವಿಜ್ಯೋತಿರ್ಮಯಳಿಗೆಸರ್ವಸಾಕ್ಷಿಗೆ ಸದ್ಗುರು ಚಿದಾನಂದಾವಧೂತಗೆ ಸಿದ್ಧಪರ್ವತವಾಸಿ ಬಗಳಾಮುಖಿಗೆ 3