ಲಕ್ಷ್ಮೀ ನಾರಾಯಣ ವಿಠಲ | ಪೊರೆಯ ಬೇಕಿವಳಾ ಪ
ವಾಹನ ದೇವ | ಲಕ್ಷುಮಿಯ ರಮಣಾ ಅ.ಪ.
ಸೃಷ್ಟಿ ಸ್ಥಿತಿ ಸಂಹಾರ | ಅಷ್ಟಕ್ಕು ಕಾರಣನೆಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೇ |ಶಿಷ್ಟ ಸದಾಚಾರ | ನಿಷ್ಠೆಯಲಿ ಗೈಯ್ಯುವಳುಶಿಷ್ಟೇಷ್ಟ ಹರಿಯೆ ಸದ | ಭೀಷ್ಟಗಳಗರೆಯೋ 1
ವಿೂಸಲೆಂದೆನಿಸಿರುವ | ದಾಸತ್ವದಾಕಾಂಕ್ಷೆಸಾಸಿರಕ್ಕೋರ್ವರಿಗೆ | ಲೇಸು ಪುಟ್ಟವುದೋಈ ಸಮಯದಲ್ಲೀಕೆ | ಆಶಿಸುತ್ತಿಹಳಯ್ಯಕೇಶವನೆ ಒಲಿದಿವಳ | ದಾಸ್ಯ ಸ್ವೀಕರಿಸೋ 2
ಶುದ್ಧ ತರತಮ ಜ್ಞಾನ | ಮಧ್ವೇಶನಲಿ ಭಕುತಿಇದ್ವದಕೆ ತೃಪ್ತಿಯಿಂ | ಬದ್ಧ ವೈರಾಗ್ಯಾಸಿದ್ಧಿಸುತ ಸಾಧನದಿ | ಬದ್ಧ ಕಂಕಣಳೆನಿಸೊಅದ್ವಿತೀಯನೆ ಹರಿಯೆ | ಮಧ್ವಾಂತರಾತ್ಮಾ 3
ಮುಪ್ಪುರದ ವೈರಿನುತ | ಸರ್ಪಶಯನನೆ ದೇವಾಸ್ವಪ್ನ ಸೂಚನೆಯಂತೆ | ಗೋಪ್ಯದಂಕಿತವಾಸುಪ್ತೀಶ ಇತ್ತಿಹೆನೊ | ಒಪ್ಪಿ ಕೈಪಿಡಿ ಇವಳಗುಪ್ತ ಮಹಿಮನೆ ದೇವ | ಆಪ್ರಕಟ ಹರಿಯೇ 4
ಶರ್ವಾದಿ ದಿವಿಜೇಡ್ಯ ಶಾರ್ವರೀಕರ ಪಾಲದುರ್ವಾದಿ ತಿಮಿರಕ್ಕೆ ಮಾರ್ತಾಂಡ ರೂಪೀದರ್ವಿ ಜೀವಿಯ ಕಾವ | ನಿರ್ವಹಣೆ ನಿನ್ನದೋಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5