ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿದೆ ಏನೇ ಕೊಳಲ ದನಿಯ ಬಾಳಿಗೆ ಅಮೃತವ ಬೀರುವ ಸವಿಯ ಪ ಬೃಂದಾವನದಲಿ ನಂದಯಶೋದ ಕಂದನು ಮುರಳಿಯನೂದುತಿರೆ ಸುಂದರಿಯರು ಆನಂದದಿ ನರ್ತಿಸಿ ಇಂದಿರೆಯರಸನ ಹೊಗಳುವರು 1 ಕಿರುಗೆಜ್ಜೆಯ ದನಿ ಕಿಣಿಕಿಣಿಸುತಿರೆ ಕರದ ಕಂಕಣಬಳೆ ಗಣಗಣರೆನಲು ಚರಣದ ಕಡಗ ಝಣ್ ಝಣಿ ಝಣಿರೆನುತಿರೆ ಪರಮ ಸಂತೋಷದಲಿ ಹರಿಯರುಳುತಿರೆ 2 ಮರುಗ ಮಲ್ಲಿಗೆ ಪಾದರಿ ಸುಮ ಪರಿಮಳ ಭರಿತ ತಂಬೆಲರು ಪರಿಚರಿಸುತಿರೆ ಪರಮಾನಂದವೆ ಪುರುಷನಾಗಿರುವ ಮಾಂ ಗಿರಿಪತಿಯೊಲವನು ಪಡೆಯುವ ಗೆಳತಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್