ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೆಲ್ವೇರಾರತಿಯ ತಂದೆತ್ತಿರೆ ಪ ಹುಟ್ಟಿದಳಾ ಕ್ಷೀರಸಾಗರದಲಿ ಸ- ಮಸ್ತ ಜನರಿಗೆ ಸುಖವ ನೀಡುತ ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ 1 ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ- ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ ತಿದ್ದಿ ಬೈತಲು ಜಡೆಬಂಗಾರ ರಾಗಟೆ ಪದ್ಮನಾಭನ ರಾಣಿ ಮಾಲಕ್ಷ್ಮಿಗೆ 2 ವಾಲೆ ಸರಪಳಿ ಚಳತುಂಬು ಚಿನ್ನದ ಸರಿಗೆ ಮೋಹನ್ನಮಾಲೆ ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ 3 ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ ನಳಿತೋಳಿನಲಿ ನಾಗಮುರಿಗೆ ವಂಕಿ ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು ಕಳೆಯ ಸುರಿವ ಚೆಲ್ವೆ ಮಾಲಕ್ಷ್ಮಿಗೆ 4 ಗರುಡವಾಹನನ್ಹೆಗಲಿಳಿದು ಶ್ರೀನಾಥನ ಹರಡಿ ಕಂಕಣ ಕರವ್ಹಿಡಿದುಕೊಂಡು ಮುಡಿದ ಮಲ್ಲಿಗೆ ಪಾರಿಜಾತಗಳುದುರುತ ನಡೆದು ಬರುವೊ ಮುದ್ದು ಮಾಲಕ್ಷ್ಮಿಗೆ 5 ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ ಆದರದಿಂದೆನ್ನ ಮನೆಗೆ ಬಂದು ಶ್ರೀಧರ ಭೀಮೇಶಕೃಷ್ಣನೆದೆಯ ಮ್ಯಾಲ್ವಿ- ನೋದದಿ ಕುಳಿತಿದ್ದ ಮಾಲಕ್ಷ್ಮಿಗೆ 6
--------------
ಹರಪನಹಳ್ಳಿಭೀಮವ್ವ
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಅ.ಪ. ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ 1 ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ ಶತಪತ್ರವು ಹೃದ್ಗತವಾಗಲಿ ಉ- ನ್ನತ ಮಹಿಮನೆ ಕೀರುತಿವಂತನೆ ಅ- ಪ್ರತಿಭಾರತಮಲ್ಲ ಮೂರವತಾರಗೆ ಅತಿಪ್ರಿಯನೆನಿಪ ಮೂರತಿ ಚತುರದೇವ 2 ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ ಚ್ಯುತಿ ದೂರ ಶೌರೀ ಕಾಳಿಂಗ- ದುರಿತ ಮಾತಂಗ-ಮರಿಗೆ ಸಿಂಗ ತುತಿಪೆ ಕರುಣಾಂತರಂಗ ಕ್ಷಿತಿಯೊಳಗಹಿ ಪರ್ವತನಿವಾಸನೆ ಖರೆಗೊಳಿಸುವ ದುರ್ಮತಿಯನು ತೊಲಗಿಸಿ ತ್ವತು ಪಾದದಲಿಡು ಮತಿಯಲ್ಲದೆ ತಿರು - ಪತಿ ವಿಜಯವಿಠ್ಠಲ ಇತರವನರಿಯೆ 3
--------------
ವಿಜಯದಾಸ
ಸುಜನ ಜನ ವತ್ಸಲನ ಸೋಮ ಸೂರ್ಯರ ನಯನ ಸುಗುಣಿ ಗುಣ ಗಂಭೀರನ |ಭುಜಗ ಭೂಷಣ ಕಂಕಣನ ಭುವನ ರಕ್ಷಕನ ಭುಜ ಚತುಷ್ಕಾಯುಧಗಳಿಂದೆಸೆವ ಶುಭ್ರ ರದನ ವಿಜಯ ಮೂರುತಿ ವಿಘ್ನವಿಪಿನ ದಾಹಕನ ವಿಘ್ನೇಶ್ವರಗೆ ಸಹಸ್ರನಮನ 1 ನೀನೆ ಶಾಶ್ವತ ರೂಪ ನಿನ್ನ ಕೀರ್ತಿ ಪ್ರತಾಪ ಖೂನ ಕಂಡುಉಸುರೆನೆಂದರೆ ಶ್ರುತಿಗಳಾಲಾಪ ಮೌನಗೊಂಡವು ಮಿಕ್ಕ ಶೇಷಾದಿಕರ ಸ್ಫೂರ್ತಿ ನಿಂತು ಹೋಗಿರಲು ಗಣಪ | ........................... ನಗೇಶನ ಮಾರ್ಗದ ಕೀಲ ಕೃಪೆ ಮಾಡಿ ತೋರಿದರು ಶ್ರೀನಾಥ ಶ್ರೀಹರಿಯ ಚಾರಿತ್ರ್ಯ ಪೇಳಿಸಲಿಕೆ ಆಧಾರ ನೀನೇ ಸತ್ಯ 2 ಇಂತು ವಿಘ್ನೇಶ್ವರನ ಬಲಗೊಂಡ ಬಳಿಕ ಸಮನಂತರದೊಳಾ ಶಾರದಾಂಬಿಕೆ ಶ್ರೀಪಾದ ಅಂತರಂಗದ ಪೀಠದಾಸನಕೆ ಕರಕೊಳಲು ಬಂದೊದಗು ಜಿವ್ಹಾಗ್ರದಿ | ನಿಂತು ನಡಿಸುವ ನಿನ್ನ ಶಕ್ತಿ..................................... ವಂತೆ ವಿಶ್ರಾಂತೆ ಪಾವನ ಮೂರ್ತೆ ಪ್ರಖ್ಯಾತೆ ವರದಾತೆ ಲೋಕ ಮಾತೆ 3 ಸುಜನ ಭುಜಗ ತ್ರಿಜಗ ಜೀವರ ಜನನಿ ತ್ರಿತಾಪ ಸಂಹಾರಿಣಿ ತ್ರಿದೇಹ ಸಂಚಾರಿಣಿ | ದ್ವಿಜತುರಂಗ ಗಮನಿ ದಿವ್ಯಾಂಬರಾಭರಣಿ ರಜ .........................ಗಜಗಮನಿ ಗಂಧರ್ವಗಾನ ಲೋಲಿನಿ ವಾಣೀ ರತ್ನ ಕೃತಾಂಗಿ ಅನುಕೂಲಿನಿ 4 ಹಸ್ತಿ ಕೃಮಿ ಕೀಟ ಭೃತ್ವಲಯದೊಳಗುಳ್ಳ ...................................... ಕೇವಲ ಪರಬ್ರಹ್ಮ ಸ್ಫುರಣಸ್ಫೂರ್ತಿಯು ತೋರದಾರಿಂದ ಗುರುವಿನ್ಹೊರತು 5 ಜಲಧಿ ಎಂದು ಮೊರೆ ಹೊಕ್ಕೆ ನಿನ್ನ ಶ್ರೀ ಚರಣ .......... ಮಾಡಿ ರಚಿಸುವ 6
--------------
ಭೀಮಾಶಂಕರ