ಹಾನಿಯಾದ ಮೇಲೆ ಏನು ಬೆಂಬಲವಾದರಿನ್ನೇನಿನ್ನೇನು
ಮಾನಹೋದ ಮೇಲೆ ದಿನವೆಷ್ಟು ಬಾಳಿದರಿನ್ನೇನಿನ್ನೇನು ಪ
ಆಪತ್ತಿಗಿಲ್ಲದ ಆಪ್ತರೆಷ್ಟಿದ್ದರು ಇನ್ನೇನಿನ್ನೇನು
ತಾ ಪರರಾಳದವಗ್ಹಣವು ಎಷ್ಟಿರ್ದರಿನ್ನೇನಿನ್ನೇನು
ಕೋಪಿಷ್ಠನಾದವ ತಪವೆಷ್ಟು ಗೈಯಲು ಇನ್ನೇನಿನ್ನೇನು
ಪಾಪಕ್ಕಂಜದನೀಗಧಿಕಾರರ್ವಿರಿನ್ನೇನಿನ್ನೇನು 1
ವನಿತೆಯ ಸೇರದ ಗಂಡ ಮನೆಯೊಳಿರ್ದರಿನ್ನೇನಿನ್ನೇನು
ಒಣಗಲು ಪೈರಿಗೆ ಬಾರದ ಮಳೆ ತಾನಿನ್ನೇನಿನ್ನೇನು
ಬನ್ನಬಡುವರ ಕÀಂಡು ಗಹಗಹಿಸಿ ನಕ್ಕರಿನ್ನೇನಿನ್ನೇನು
ಮನ್ನಣಿಲ್ಲದ ಸಭೆ ಮಾನ್ಯರು ಪೊಕ್ಕರಿನ್ನೇನಿನ್ನೇನು 2
ಅವಮಾನ ಸಮಯಕ್ಕೆ ಒದಗದ ಗೆಳತನವಿನ್ನೇನಿನ್ನೇನು
ಧವ ಸತ್ತ ಯುವತಿಯ ಕುರುಳು ಮಾರಿದರಿನ್ನೇನಿನ್ನೇನು
ದಯದಾಕ್ಷಿಣ್ಯಲ್ಲದ ಅರಸನಾಳಿಕಿದ್ದರಿನ್ನೇನಿನ್ನೇನು
ದಿವಮಣಿ ತನ್ನಯ ಕಿರಣಂಗಳ್ತೋರದಿರಲಿನ್ನೇನಿನ್ನೇನು 3
ಸತಿ ರೂಪಸ್ಥಳಾದರಿನ್ನೇನಿನ್ನೇನು
ರೋಗ ಕಳೆಯದ ವೈದ್ಯರಾನಂಗರಿದ್ದರಿನ್ನೇನಿನ್ನೇನು
ಆಗಿಬಾರದವರ ಬಾಗಿಲ ಕಾಯ್ದರಿನ್ನೇನಿನ್ನೇನು
ಭೋಗಿವಿಷಕೆ ಗರುಡಮಂತ್ರನುವಾಗಲು ಇನ್ನೇನಿನ್ನೇನು 4
ಪ್ರೇಮದವರೆ ತನ್ನೊಳ್ ತಾಮಸರಾದಿರಿನ್ನೇನಿನ್ನೇನು
ನೇಮಿಸಿದ್ಯೆಲ್ಲವು ಇದಿರಾಗಿ ಕೂತಮೇಲಿನ್ನೇನಿನ್ನೇನು
ಕಾಮಧೇನುವೆ ಮನದಿ ಕಾಮಿತವೀಯದಿರೆ ಇನ್ನೇನಿನ್ನೇನು
ಸ್ವಾಮಿ ಶ್ರೀರಾಮನ ಪ್ರೇಮ ಪಡೆಯದ ನರ ಇನ್ನೇನಿನ್ನೇನು 5