ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಿಲ್ಲದ ಮೇಲೆರಡುಂಟೇ ಭಕ್ತಿ ಒಂದಲ್ಲದೆ ಹರಿಯೊಲವುಟೇ ಪ ರುಚಿ ಔಷಧಿಯುಂಟೇ ನೊಂದಲ್ಲದೆ ರಂಗಾ ಎಂಬುವುದುಂಟೇ ಅ.ಪ ಗಿಡಮರವಾಗದೆ ಕೃಮಿಯಾಗುವೆನೇ ಅಡವಿಯೊಳಿರದೆ ಗೋವಾಗುವೆನೇ ಪಡೆಯದೆ ಪುಣ್ಯವ ನರನಾಗುವೆನೇ ಮೃಡನ ಪೂಜಿಸದೇ ದ್ವಿಜನಾಗುವೆನೇ 1 ಸುಗುಣವಿರದೆ ಮಾತಿನಿದಾಗುವುದೇ ಸೊಗಮಿಲ್ಲದೆ ಬಾಯಿ ನಗೆದೋರುವುದೇ ಸುಗುಣವಿಲ್ಲದೆ ನಿರ್ಗುಣಬಹುದೇ ಮುಗಿಲಿಲ್ಲದೆ ಮಳೆ ಧರೆಗೆ ಬೀಳುವುದೇ 2 ತಂಗಿದ್ದಲ್ಲದೆ ಭಾವ ಎಂಬೋದುಂಟೋ ಹಂಗಿ[ಗ]ಲ್ಲದೆ ಮರೆ ಹಿತಕುಂಟೋ ತಂಗಿನೋಡಲು ಭಾವ ಮರೆಯಹುದುಂಟೋ ಮಾಂಗಿರಿರಂಗ ನೀನೆನ್ನಯ ನಂಟೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕದರ ಮಂಡಲಗಿಯ ಕರುಣಿ ಹನುಮರಾಯ |ಸದುಗುಣವಂತನೆ ಹಣುವಂತನೆ ಪ ಅಂಜನೆಯ ವರಸೂನು ಆಶ್ರಿತ ಕಾಮಧೇನುಮಂಜುಳ ಗಾನ ಗೀತ ಪರಮ ವಿಖ್ಯಾತ ಸಂಜೀವನವ ತಂದ ವ್ಯೋಮ ಮಾರ್ಗದಿ ಬಂದಅಂಜದ ಗುಣವಂತನೆ ಹಣುವಂತನೆ1 ಅಮಿತ ಜಾಮಾತ ಮುಖ್ಯ ಪ್ರಾಣನಾಥ ವಿಶಾಲ ಗುಣವಂತನೆ ಹಣುವಂತನೆ 2 ಕ್ಷೋಣಿಯೊಳು ಕನಕದಾಸನ ನೆರಳು ಅನಕ ಏನು ಬಲಿಸಿದೆಯೊ ಔಷಧಿಯ ಕುಣುಕ ನೀನಿದ್ದರೆ ಕನಕ ಪ್ರಾಣ ತೆರಳುವ ತನಕ ಶ್ರೀನಿಧೇ ಆದಿಕೇಶವ ಎನ್ನ ಜನಕ3
--------------
ಕನಕದಾಸ
ಗಾನ ಹರಿನಾಮ ಕೀರ್ತನೆಯ ಗಾನ ಪರಮಾದರವಿದ್ದರೆ ಗಾನ ಪ ಗಾನದಿಂದ ಹರಿಯುವ ಬಾಷ್ಪಾಂಜಲಿ ಭಾನುವಂಶ ಶೇಖರಿನಿಗುಪಾಯನ ಅ.ಪ ಗಾನರಸದ ಮಜ್ಜನದಿಂದಲಿ ಮನ ಕಾಣಲು ಶಮದಮ ಸುಖಗಳನು ಕೂರ್ಮ ಮೊದಲಾದ ರಮೇಶನ ನಾನಾ ಲೀಲೆಗಳನ್ನು ಪೊಗಳುವುದೇ 1 ನಾರಿಯ ಸೌಂದರ್ಯಕೆ ಮಾಂಗಲ್ಯವು ಕಾರಣವಾಗುವ ತೆರದಲ್ಲಿ ಹೇರಳ ಗಾಂಭೀರ್ಯವ ರಸಪುಂಜಕೆ ಬೀರುವ ಶೌರಿಯ ಮಧುರನಾಮಗಳೆ2 ಆದಿವ್ಯಾಧಿ ಜನನಾದಿ ವಿರೋಧದ ಬಾಧೆಯ ಕಳೆಯುವ ಔಷಧಿಯು ಮಾಧವ ಮಧುಸೂಧನ ಶ್ರೀಧರಪರ ಬೋಧ ಪ್ರಸನ್ನನ ಮಧುರ ನಾಮಗಳೇ 3
--------------
ವಿದ್ಯಾಪ್ರಸನ್ನತೀರ್ಥರು
ಪುರುಷ ಪ್ರಕೃತಿಯಲ್ಲಿಹನು ಎಂತೆನೆಇರುವನೀ ತೆರದಿ ಉಭಯದಲಿ ಪುರುಷ ಪ ತಿಲದೊಳಗೆ ತೈಲ ಕಾಷ್ಟದೊಳಗೆ ಅಗ್ನಿಫಲದಲಿ ರುಚಿಯು ಇದ್ದಂತೆ ಪುರುಷ1 ಸ್ತನದೊಳಗೆ ಕ್ಷೀರ ಕ್ಷೀರದೊಳಗೆ ಘೃತಘನ ಭೇರಿಯಲಿ ನಾದ ಇದ್ದಂತೆ ಪುರುಷ2 ಮಣಿಗಣದಲಿಸೂತ್ರ ಮಾಲಿಕೆಯಲಿ ತಂತುಘನವಾದ ಘಟದಲ್ಲಿ ಬಯಲಂತೆ ಪುರುಷ 3 ಘನದಲ್ಲಿ ಉದಕ ಗಗನದಲಿ ಮಿಂಚುಅನಿತು ಔಷಧಿಯಲ್ಲಿ ರಸದಂತೆ ಪುರುಷ4 ತೈಲಬಿಂದುವು ಉದಕದಲ್ಲಿ ವ್ಯಾಪಿಸಿದಂತೆಲೋಲ ಚಿದಾನಂದ ತಾನಿಹ ಪುರುಷ 5
--------------
ಚಿದಾನಂದ ಅವಧೂತರು