ರಾಮತಾರಕ ಮಂತ್ರ ಜಪಿಸಿ | ಸರ್ವಕಾಮಗಳ ಪಡೆದವನೆ ನಮಿಸಿ | ಬೇಡ್ವೆಕಾಮದುಷ್ಟಗಳ ಪರಿಹರಿಸಿ | ಹೃದ್‍ಧಾಮೆ ಹರಿ ತೋರೊ ಕರುಣಿಸೀ ಪ
ಗಜ ಅಜಿನ ಧರಿಸಿ | ಮತ್ತೆಕರ್ಪರವ ಕೈಯಲ್ಲಿ ಇರಿಸಿ | ನೀನುಅಪವಿತ್ರ ಅಶಿವ ನೆಂದೆನಿಸೀ | ವರಮಸಫಲ ಶಿವ ಅಮಂಗಳವ ಹರಿಸೀ 1
ಪರಮ ಸದ್ಭಾಗವತ ಮೂರ್ತೇ | ಲಕ್ಷ್ಮೀನರಹರಿಯ ಆಣತಿಯ ಪೊತ್ತೇ | ವಿಷಯನಿರತರನು ಹರಿವಿಮುಖ ಶಕ್ತೆ | ಕಾಯೊಹರ ಸದಾಶಿವ ಭಾವ ಮೂರ್ತೇ 2
ತಪದಿಂದ ಹರಿಯೊಲಿಸೆ ನೀನು | ಹತ್ತುಕಲ್ಪ ಲವಣಾಂಭುದಿಯಲಿನ್ನು | ಗೈದೆತಪ ಉಗ್ರದಲಿ ಪೇಳ್ವುದೇನು | ನೀನು`ತಪ` ನೆಂದು ಕರೆಸಿದೆಯೊ ಇನ್ನು 3
ಶುಕಿಯಾಗಿ ಬಂದ ಅಪ್ಸರೆಯ | ಕೂಡ್ಡಅಕಳಂಕ ವ್ಯಾಸಾತ್ಮ ಧೊರೆಯ | ಮಗನುಶುಕನಾದೆ ಶಿವನೆ ಇದು ಖರೆಯ | ನುತಿಪೆಪ್ರಕಟ ಭಾಗವತಕ್ಕೆ ಧೊರೆಯ 4
ಮಾರುತನು ನಿನ್ನೊಳಗೆ ನೆಲಿಸಿ | ಗೋಪ್ಯದೂರೆಂಬ ನಾಮವನೆ ಧರಿಸಿ | ಇರಲುದೂರ್ವಾಸನೆಂಬ ಕರೆಸಿ | ಮೆರೆವಭೂ ಭೃತರ ಮಾನವನೆ ಕೆಡಿಸಿ 5
ಪತಿ ಸಂಗ ರಹಿತೆ | ಎನಿಸೆಭಾರತಿಯ ದೇಹದಲಿ ಜಾತೆ | ಇರಲುಪ್ರಾರಬ್ಧ ಭೋಗಿಸುವ ಮಾತೆ | ಎನಿಸಿವೀರ ಅಶ್ವತ್ಥಾಮ ಕೃಪೆ ಜಾತೆ 6
ಧಾಮ ಈಶಾನ್ಯದಲಿ ಇದ್ದು | ನಿನ್ನವಾಮದಲಿ ವಾಸುದೇವಿದ್ದು | ನೀನುವಾಮದೇವನ ಪೆಸರು ಪೊದ್ದು | ಧರಿಪೆಸ್ವಾಮಿ ಪೂಜಕನೆಂಬ ಮದ್ದು 7
ಕಾಲಾತ್ಮ ನಿನ್ನೊಳಗೆ ನೆಲಸಿ | ಪ್ರಳಯಕಾಲದಲಿ ಜಗವ ಸಂಹರಿಸಿ | ನಿನ್ನಕಾಲಾಖ್ಯ ನೆಂತೆಂದು ಕರೆಸಿ | ಮೆರೆವಲೀಲಾತ್ಮ ನರಹರಿಯು ಎನಿಸಿ 8
ಶಫರ ಹರಿದ್ವೇಷಿಗಳು ಎನಿಪ | ದೈತ್ಯತ್ರಿಪುರಸ್ಧರನು ಸಂಹರಿಪಾ | ಶಿವನೆವಪು ಧರಿಸಿ ಅಘೋರ ನೆನಿಪಾ | ಗೈದಅಪವರ್ಗದನ ಸೇ5ರೂಪ 9
ಹೃದ್ಯ ಹರಿಸೇವೆಂi5Àು ಗೈವಾ | ಮನದಿಬದ್ಧ ದ್ವೇಷಿಗಳೆಂದು ಕರೆವಾ | ದೈತ್ಯಕ್ರುದ್ಧರ ತಪಕೆ ಸದ್ಯ ವರವಾ | ಇತ್ತುಸಧ್ಯೋಜಾತನೆನಿಸಿ ಮೆರೆವ 10
ಹರಿಯಂಗ ಸೌಂದರ್ಯ ನೋಡಿ | ನೋಡಿಪರಮಾನಂದವನೆ ಗೂಡೀ | ಇಂಥಹರಿಪದ ದೊರಕೆ ಚಿಂತೆ ಗೂಡಿ | ಅತ್ತೆಹರುಷದಿ ಊರು ಸುತ ಪಾಡಿ 11
ಊರು ನಾಮಕ ರುದ್ರನಿಂದ | ಜಾತಕಾರಣ ಔರ್ವಭಿಧದಿಂದ | ಕರೆಸಿಉರ್ವರಿತ ರೋದನದಲಿಂದ | ಮೆರೆದೆಮಾರಾರಿ ಔರ್ವಭಿಧದಿಂದ 12
ವಿಷಯದಲಿ ಆಸಕ್ತರಾದ | ಮುಕ್ತಿವಿಷಯಕೆ ಬಹುಯೋಗ್ಯರಾದ | ಜನರವಿಷಯಾನುಕಂಪಿತನು ಆವ | ರುದ್ರಹಸನಾಗಿ ರೋದಿಸಿದಗಾಢ 13
ಕಮಲಾಕ್ಷಿ ದಕ್ಷಸುತೆ ತನ್ನ | ದೇಹವಿಮಲಯೋಗಾಗ್ನಿಯಲಿ ಭಗ್ನ | ಮಾಡಿಹಿಮದಾದ್ರಿ ಯೊಳಗೆ ಉತ್ಪನ್ನ | ವಾಗೆವಿಮಲ ಶಿವಗೊಂಡ ವ್ರತ ಕಠಿಣ 14
ಆದ್ಯಕಾಲದಲಿಂದ ಊಧ್ರ್ವ | ರೇತಬುದ್ಧಿಮಾಡುತ ತಪವು ಶುದ್ಧ | ಗೈದುಸಿದ್ಧನಾಗಿರುತಿರಲು ರುದ್ರ | ಕೇಳಿಊಧ್ರ್ವ ನೆಂಬಭಿಧಾನ ಪೊದ್ದ 15
ಕಾಮಹರ ತಪದಿಂದಲೆದ್ದು | ಬಹಳಪ್ರೇಮದಲಿ ಅದ್ರಿಸುತೆ ಮುದ್ದು | ಮಾಡಿಕಾಮಲಂಪಟನೆಂಬ ಸದ್ದು | ಗಳಿಸಿನಾಮ ಲಂಪಟ ನೆಂದು ಪೊದ್ದು 16
ಹರಪೊತ್ತ ಹನ್ನೆರಡು ನಾಮ | ದಿಂದಹರಿಮುಖ್ಯನಿಹನೆಂಬ ನೇಮ | ತಿಳಿದುಹರನ ಪೂಜಿಸೆ ಈವ ಕಾಮ | ನೆಂದುಗುರು ಗೋವಿಂದ ವಿಠ್ಠಲನ ನೇಮ17