(ಉ) ರುದ್ರದೇವರು
ನಮೋ ಪಾರ್ವತೀಪತಿ ನುತಜನಪರ ನಮೋ ವಿರೂಪಾಕ್ಷ ಪ
ರಮಾರಮಣನಲ್ಲಮಲ ಭಕುತಿ ಕೊಡು ನಮೋ ವಿಶಾಲಾಕ್ಷ ಅ.ಪ
ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷಫಾಲನೇತ್ರ ಕಪಾಲ ರುಂಡಮಣಿ ಮಾಲಾಧೃತ ವಕ್ಷಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ 1
ವಾಸವನುತ ಹರಿದಾಸ ಈಶ ಕೈಲಾಸವಾಸ ದೇವದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವಭಾಸಿಸುತಿಹುದಶೇಷ ಜೀವರಿಗೆ ಈಶನೆಂಬ ಭಾವಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ 2
ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೊ ಸರ್ವತ್ರಹತ್ತಿರ ಕರೆದು ಅಪತ್ಯನಂದದಿ ಪೊರೆಯುತ್ತಿರೊ ತ್ರಿನೇತ್ರತೆತ್ತಿಗನಂತೆÉ ಕಾಯುತ್ತಿಹ ಬಾಣನ ಸತ್ಯದಿ ಸುಚರಿತ್ರಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತೃ ಕೃಪಾಪಾತ್ರ3