ಗೋದೆ ಸಮಸ್ತಫಲದೆ ಸ್ನಾನ ಒದಗಿಮಾ-ದರೊಮ್ಮೆ ವೈಕುಂಠಪದವೀವೆ ಪ.
ಬ್ರಹ್ಮಾದಿ ಶಿಖರದಿಂ ಪುಟ್ಟಿ ನೀನು ಬಲುಬ್ರಹ್ಮ ಋಷಿಯಾದ ಗೌತಮ ಮುನಿಯಬ್ರಾಹ್ಮರಿಂದಲಿ ಬಂದ ಗೋಹತ್ಯ ಪರಿಹರಿಸಿಅಮ್ಮಮ್ಮ ಸಪ್ತಮುಖದಿಂದ ಸಾಗರವ ಬೆರೆದೆ 1
ಆದಿಯಲಿ ತ್ರಿಯಂಬಕನ ಜ[ಡೆ]ಯಲುದಿಸಿದೆ ನೀನುಮುದದಿಂದ ಪಶ್ಚಿಮಕಾಗಿ ನಡೆಯೆ ಕಂಡುಒದಗಿ ಗೌತಮನು ಕುಶದಿಂದ ತಿರುಗಿಸÀಲು ನೀಸದಮಲ ಕುಶಾವರ್ತಳೆಂದೆನಿಸಿಕೊಂಡೆ 2
ಔದುಂಬರ ವೃಕ್ಷಮೂಲದಿಂದುದ್ಭವಿಸಿಉದಧಿಯನು ಕೂಡಬೇಕೆಂದು ಬೇಗಮೇದಿನಿಯಿಳಿದು ತಿರುಗುತಲಿ ನೀ ಮುದದಿಂದಆದರದಿ ಪೂರ್ವಾಬ್ಧಿಯನು ಕೂಡಿದೆ 3
ಸಿಂಹರಾಸಿಯಲಿ ಸುರಗುರು ಬಂದುದು ಕೇಳಿಅಂವ್ಹ ರಾಸಿಗಳು ಸಂಹಾರಕಾಗಿಬಂಹ್ವಾಯಾಸದಿ ಬಂದು ನಿಮ್ಮನು ಕಂಡೆಅಂವ್ಹಂಗಳು ಪರಿಹರಿಸಿ ಮುಕುತಿಯ[ಕೊಡು]ದೇವಿ 4
ವಿನಯದಲಿ ಸ್ನಾನಪಾನವನು ಮಾಡುವರಿಗೆವನಜಾಕ್ಷ ಹಯವದನ ಹರಿಯವನಜನಾಭನ ಲೋಕಸಾಧನವಾದಘನ ಭಕುತಿಯನಿತ್ತು ರಕ್ಷಿಸುದೇವಿ 5