ವಿಜಯರಾಯರ ಚರಣ ನಿಜವಾಗಿ ನಂಬಲುಅಜನ ಪಿತನು ತಾನೆ ಒಲಿವಾ ಪ
ದ್ವಿಜಕೇತನ ಗುಣವ್ರಜವ ಕೊಂಡಾಡುವಾಸುಜನ ಮಂದಾರನೀತ - ಪ್ರಖ್ಯಾತ ಅ.ಪ.
ವಿ ಎಂದು ನುಡಿಯಲು ವಿಷಯ ಲಂಪಟ ದೂರಜ ಎಂದು ನುಡಿಯಲು ಜನನ ಹಾನಿಯ ಎಂದು ಕೊಂಡಾಡೆ ಯಮಭಟರು ಓಡುವರುರಾಯ ಎಂದೆನಲು ಹರಿಕಾವಾ - ವರವೀವಾ 1
ಇವರ ಸ್ಮರಣೆಯೆ ಸ್ನಾನ ಇವರ ಸ್ಮರಣೆಯೆ ಧ್ಯಾನಇವರ ಸ್ಮರಣೆಯೆ ಅಮೃತಪಾನಇವರ ಸ್ಮರಣೆಯ ಮಾಡೆ ಯುವತಿಗಕ್ಷಯವಿತ್ತತ್ರಿವಿಕ್ರಮನು ಮುಂದೆ ನಲಿವಾ - ಒಲಿವಾ 2
ವಾರಣಾಸಿಯ ಯಾತ್ರೆ ಮೂರು ಬಾರಿ ಮಾಡಿಮಾರಪಿತನೊಲುಮೆಯನು ಪಡೆದುಮೂರವತಾರದಾ ಮಧ್ವಮುನಿರಾಯರಾಚಾರು ಚರಣವನು ಭಜಿಪಾ - ಮುನಿಪಾ 3
ಪುರಂದರದಾಸರಾ ಪರಮಾನುಗ್ರಹ ಪಾತ್ರಗುರು ವಿಜಯರಾಯನೀತಾಸಿರಿ ವಿಜಯ ವಿಠಲನ್ನ ಶ್ರೀನಿವಾಸಾರ್ಯರುಹರಿಯಾಜ್ಞೆಯಿಂದ ಕೊಟ್ಟರೂ - ದಿಟ್ಟರೂ 4
ದಾನಧರ್ಮದಿ ಮಹಾ ಔದಾರ್ಯಗುಣದ ಶೌರ್ಯಶ್ರೀನಿವಾಸನ ಪ್ರೇಮಕುಮಾರಾಮಾನವೀ ಸೀಮೆ ಚೀಕನಪರಿ ನಿವಾಸ ಮೋ-ಹನ ವಿಠಲನ್ನ ನಿಜದಾಸಾ - ಉಲ್ಲಾಸಾ 5