ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ
ಮಾದ್ರಿಯುದ್ಭವಿಗೆ ನಮೋ ನಮೋ ಪ
ರುದ್ರರೂಪೆ ದಾರಿದ್ರ್ಯಮರ್ದನಿ
ರುದ್ರನರ್ಧಾಂಗಿಗೆ ನಮೋ ನಮೋ ಅ.ಪ
ನಿಗಮಾತೀತೆ ಮಹದಾಗಮನುತೆ ತ್ರೈ
ಜಗದ ಮಾತೆಗೆ ನಮೋ ನಮೋ
ಸುಗುಣಸಂತಜನರಘನಾಶಿನಿ ಸುಖ
ಸ್ವರ್ಗಾಧಿಕಾರಿಗೆ ನಮೋ ನಮೋ 1
ಮೃಡಮೃತ್ಯುಂಜನನೆಡದೊಡೆಯೊಳು
ಕಡುಸಡಗರವಾಸಿಗೆ ನಮೋ ನಮೋ
ದೃಢತರ ಭಕ್ತರ ದೃಢದ್ವಾಸಿನಿ ಜಗ
ದೊಡೆಯ ಮೃಡಾಣಿಗೆ ನಮೋ ನಮೋ 2
ಕಮಲೆ ಕಾತ್ಯಾಯಿನಿ ಉಮೆ ಶಿವೆ ಸಾವಿತ್ರಿ
ಕಮಲನೇತ್ರೆಗೆ ನಮೋ ನಮೋ
ಸುಮನ ಸೌಭಾಗ್ಯ ಶಮೆ ದಮೆ ದಯಾನ್ವಿತೆ
ವಿಮಲ ಚರಿತ್ರೆಗೆ ನಮೋ ನಮೋ 3
ಭಂಡದನುಜಕುಲ ರುಂಡ ಚೆಂಡಾಡಿದ
ಪುಂಡ ಉದ್ದಂಡೆಗೆ ನಮೋ ನಮೋ
ಖಂಡ ಕಿತ್ತು ಖಳರ್ಹಿಂಡು ಭೂತಕಿತ್ತ
ಚಂಡಿ ಚಾಮುಂಡಿಗೆ ನಮೋ ನಮೋ 4
ರಕ್ತಬೀಜರೆಂಬ ದೈತ್ಯರ ಮದ ಮುರಿ
ದೊತ್ತಿದ ವೀರೆಗೆ ನಮೋ ನಮೋ
ಮತ್ತೆ ಶುಂಭರ ಶಿರ ಮುತ್ತಿ ಕತ್ತಿರಿಸಿದ
ಶಕ್ತಿ ಶಾಂಭವಿಗೆ ನಮೋ ನಮೋ 5
ಓಂಕಾರರೂಪಿಣಿ ಹ್ರೀಂಕಾರಿ ಕಲ್ಯಾಣಿ
ಶಂಕರಿ ಶರ್ವಾಣಿಗೆ ನಮೋ ನಮೋ ಮ
ಹಂಕಾಳಿ ನತಸುಖಂಕರಿ ಪಾರ್ವತಿ
ಶಂಕರನರಸಿಗೆ ನಮೋ ನಮೋ 6
ಶೌರಿ ಔದರಿಯ ಶಾರದೆ ಶ್ರೀಕರಿ
ಶೂರ ಪರಾಂಬೆಗೆ ನಮೋ ನಮೋ
ಪಾರಾವಾರ ದಯೆಕಾರಿ ನಿರಾಮಯೆ
ಧೀರ ಚಿದ್ರೂಪೆಗೆ ನಮೋ ನಮೋ 7
ಉಗ್ರರೂಪಿ ಭವನಿಗ್ರಹ ದುಷ್ಟ ಸ
ಮಗ್ರ ಹರಿಣಿಗೆ ನಮೋ ನಮೋ
ಆಗ್ರಭಕ್ತರಿಷ್ಟ ಶೀಘ್ರ ಕೊಡುವ ಜೈ
ದುರ್ಗಾದೇವಿಗೆ ನಮೋ ನಮೋ 8
ಹೈಮಾವತಿಯೆ ನಿರ್ಮಾಯೆ ಮೂರುತಿ
ಕೋಮಲ ಹೃದಯೆಗೆ ನಮೋ ನಮೋ
ಭೀಮಪರಾಕ್ರಮಿ ರಾಮದಾಸಜನ
ಪ್ರೇಮಪೂರ್ಣಿಗೆ ನಮೋ ನಮೋ 9