ಲಾಲಿ ನಿತ್ಯಾನಂದ ಲಾವಣ್ಯ ಕಂದ
ಲಾಲಿ ಭೃತ್ಯಾರ್ತಿ ವಾರಣನೆ ಗೋವಿಂದ
ಲಾಲಿ ಜೀಯಾ ಪ್ರತ್ಯಗಾತ್ಮ ಮುಕುಂದ
ಲಾಲಿ ರಮಾಧೃತ ಚರಣಾರವಿಂದ ಲಾಲಿ ಪ.
ಆದಿ ಮಧ್ಯಾಂತ ವಿದೂರನಾಗಿಹನ
ವೇದಾಂತ ವೇದ್ಯ ವೈಭವ ಪಕ್ಷಿಗಮನ
ತಾಪ ಕಳಿವವನ
ಮೋದದಿ ಪಾಡಿ ತೂಗುವೆನು ಮಾಧವನ 1
ಈರಾರು ದಿಗ್ಗಜವೆಂಟು ಕಾಲುಗಳು
ಪಾರಾವಾರಗಳೆಂಬ ಪೊಳೆವ ಪೊಟ್ಟಿಗಳು
ಧಾರಾರೂಪ ಭಾಗೀರಥಿ ಸರಪಣಿ
ಸೇರಿಸಿ ಡೋಲ ಶೃಂಗಾರ ಗೈಯುವೆನು 2
ನಿರ್ಮಲವಾದೇಳು ಹಲಿಗೆಗಳಿರುವ
ಭರ್ಮಗಿರಿಯೆ ಸಿಂಹಾಸನವನಿಟ್ಟಿರುವ
ಧರ್ಮಾರ್ಥ ಕಾಮ ಮೋಕ್ಷಗಳೆಂಬ ಫಲವ
ಮರ್ಮವನರಿತು ಕಟ್ಟುವೆ ಒಳ್ಳೆಯ ರಥವ 3
ಸೂರ್ಯ ಚಂದ್ರಮರೆಂಬ ಧಾರಾದೀಪಗಳು
ತಾರಕಿಗಳು ಸುತ್ತಲಿರುವ ಚಿನ್ಹೆಗಳು
ಭವ ಜಯ ಜಯವೆಂಬ ಭರವು
ನೀರಜಾಲಯೆ ಕೂಡಿ ಪಾಡುವ ಸ್ವರವು 4
ಕೋಟಿ ಭಾಸ್ಕರ ರಾಭ ಕೋಟೀರ ಕುಂಡಲ
ಪಾಟಲಾಧರ ಮುಕುರರಾಭ ಕಪೋಲ
ನಳಿನ ಪತ್ರ ನೇತ್ರ ಜ-
ಚಾಪ ಧಾಟಿ ಭ್ರೂಯುಗಳ 5
ಪೂರ್ಣ ಮಾಲಾನಂತ ಪೌರ್ಣಮಿಯ ವಿಧು
ವರ್ಣ ಮುಖಾಬ್ಜಸುಪರ್ಣವರೋಹ
ಕರ್ಣ ಹೀನ ಕಶಿಪೂ ಪರಿಶಯನ ದು-
ಗ್ಧಾರ್ಣವ ಮಂದಿರ ಸ್ವರ್ಣ ನಿಭಾಂಗ 6
ಕಂಬು ಸುಗ್ರೀವ ವಿಲಂಬಿತ ವನಮಾಲ
ಅಂಬುಜ ಚಕ್ರ ಗದಾಕರ ಹಸ್ತ
ಕೌಸ್ತುಭ ಜಗ-
ನಾಭ 7
ವಿತತ ರೇಖಾತ್ರಯಯುತಮೃದುದರ ಮಧ್ಯ
ಗತ ಕಿಂಕಿಣೀ ಜಾಲ ಕಾಂಚಿ ಕಲಾಪ
ಪೀವರೋರು ಸಂ-
ಮೂರ್ತಿ 8
ಸಿಂಜನ ಜೀರ ರಂಜಿತ ಚರಣ
ಕಂಜಾಂಕುಶಕೇತು ರೇಖಾಲಂಕರಣ
ಮಂಜುಳ ಮೃದು ಪಾದತಳ ಮುಕ್ತಾಭರಣ
ಸಂಜೀವನ ರಾಜ ಸಂಪ್ರೀತಿ ಕರಣ 9
ಔತ್ತಾನಪಾದಿಯನಾಧಾರಗೊಂಡು
ನಿತ್ಯ ತೂಗಾಡುವ ತೊಟ್ಟಿಲ ಕಂಡು
ಹಿಂಡು ಬಹು ತೋಷಗೊಂಡು
ಸತ್ಯಭಾಮೆಯ ಕಾಂತನಾಡುವ ಚೆಂಡು 10
ಪತಿತ ಪಾವನ ಪರಮಾನಂದ ರೂಪ
ಸತತ ತಾನೆ ಪರಿಹರಿಸುವ ತಾಪ
ವಿತತ ಮಹಿಮ ವೆಂಕಟಾಚಲ ಭೂ
ಗತಿಯಾಗಿ ತೋರುವ ತನ್ನ ಪ್ರತಾಪ 11