ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರೂ ದಾಸರಹರೇ ಪ ಪುಲ್ಲನಾಭನ ದಯವಿಲ್ಲದೆ ಅ.ಪ. ಜ್ಞಾನವಿಲ್ಲ ಭಕುತಿಯಿಲ್ಲ ಧ್ಯಾನ ವೈರಾಗ್ಯ ಮೊದಲೆ ಇಲ್ಲ ಹೀನ ಕರ್ಮಗಳನು ಮಾಡಿ ಶ್ರೀನಿವಾಸನ ಮರೆತವರು 1 ಪರವಧುವಿನ ರೂಪ ಮನದಿ ಸ್ಮರಣೆ ಮಾಡುತ ಬಾಯಿಯೊಳು ಹರಿಯ ಧ್ಯಾನ ಮಾಡುತಿರುವ ಪರಮ ನೀಚರಾದ ಜನರು 2 ಪಟ್ಟೆನಾಮ ಹಚ್ಚಿ ಕಾವಿ ಬಟ್ಟೆಯನ್ನು ಹೊದ್ದುಕೊಂಡು ಅಟ್ಟಹಾಸ ತೋರಿಕೊಳುತ ಗುಟ್ಟು ತಿಳಿಯದಿರುವ ಜನರು 3 ದೊಡ್ಡ ತಂಬೂರಿಯ ಪಿಡಿದು ಅಡ್ಡ ಉದ್ದ ರಾಗ ಪಾಡಿ ದುಡ್ಡುಕಾಸಿಗಾಗಿ ಭ್ರಮಿಸಿ ಹೆಡ್ಡರಾಗಿ ತಿರುಗುವವರು 4 ನೋವು ಬಾರದಂತೆ ಸದಾ ಓವಿಕೊಂಡು ಬರುತಲಿರುವ ದೇವ ರಂಗೇಶವಿಠಲನ ಸೇವೆಯನ್ನು ಮಾಡದಿರುವ 5
--------------
ರಂಗೇಶವಿಠಲದಾಸರು