ಪಾಲಿಸೇ ಪದ್ಮಾಲಯೇ ಪಾಲಿಸೆ ಪ.
ಪಾಲಿಸು ನಿನ್ನನೆ ಓಲೈಸಿತಿರುವೀ
ಬಾಲೆಯರಭಿಮತ ಪಾಲಿಸುತೊಲವಿಂಅ.ಪ.
ಅಂಬುಜನಾಭನ ರಾಣಿ ನಿನ್ನ ನಂಬಿದೆ ಪಲ್ಲವರಾಣಿ ಚನ್ನೆ
ಕಂಬುಕಂಧರೆ ಫಣಿವೇಣಿ ಎನ್ನ ಬೆಂಬಿಡದಿರು ಕಲ್ಯಾಣಿ ಜನನೀ
ಜಂಭಾರಿ ಪೂಜಿತೆ ಶಂಬರಾರಿಯಮಾತೆ
ಶಂಭುವಂದಿತ ಪಾದಾಂಬುಜಕ್ಕೆರಗುವೆ 1
ಘನ ಸತ್ಯವ್ರತ ಪಿಡಿದರಿಯೆ ತಾಯೇ
ಮತ್ತೇಭಗಾಮಿನಿ ಮರೆಹೊಕ್ಕೆ ನಿನ್ನನೇ
ನಿತ್ಯಸತ್ಯದಿ ನಿನ್ನ ಭಜಿಸುವೆ ಜನನೀ 2
ಘೋರ ಋಣದ ಭಾದೆ ಕಳೆದು ಎನ್ನ
ಪಾರುಗಾಣಿಸು ಮೋದವಡೆದು ಮುನ್ನ
ದುರಿತವಿದೆನ್ನನು ಬಿಡದು ತಾಯೆ ವರಶೇಷಗಿರಿ
ದೊರೆಯರಸಿ ನಿನ್ನಡಿತಾವರೆಗೆನ್ನನಾರಡಿಯೆನಿಸೆಂದು ಬೇಡುವೆ3