ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ಮಂಗಳಜಯ ಮಂಗಳ ಸುಂದರಿ ಶಾಂಭವಿಗೆ ಪ ಕಮಲ ಮುಖಿಯಳೆಹೊಳೆವ ಮುತ್ತಿನ ವಾಲೆಯಳೇನಳಿನ ಮುಖಿಯರ ನಡುವೆ ಕುಳಿತುಥಳ ಥಳ ಹೊಳೆಯುವಳೇಒಳಹೊರಗೆ ತನ್ನ ಪ್ರಭೆಯನು ತೋರಿನೋಡಿ ಓಲಾಡಿ ತಾ ನಗುವವಳೇ 1 ಪಂಚರತ್ನದಾ ಪದಕವನಿಟ್ಟು ಪದ್ಮಾಸನದಲ್ಲಿ ಕುಳಿತಿಹಳೇಮಿಂಚುವ ಮೂಗುತಿ ಮೂಗಲಿ ಹೊಳೆಯುತಮಿಗಿಲಾದಾಭರಣವ ಧರಿಸಿಹಳೇಅಂಚು ರಂಗಿನ ಸೀರೆಯನುಟ್ಟುಅನಂತ ರೂಪವ ತೋರಿಹಳೇಅಂಚೆ ನಡೆಯಲಿ ನಡೆಯುತ ನಲಿಯುತಸದಾ ಮತ್ತಳಾಗಿರುವವಳೇ2 ರತ್ನದ ಉಡಿದಾರ ಚಿನ್ನದ ಚಿಂತಾಕಹೊನ್ನಿನ ಡಾಬನು ತೊಟ್ಟಿಹಳೇಎಡೆ ಎಡೆಗೆ ತಾ ಧರಿಸಿಹಳೇಸಣ್ಣ ಬಣ್ಣದ ಕುಪ್ಪಸ ತೊಟ್ಟುಮುಗುಳ್ನಗೆ ಬೀರುತ ಕುಳಿತಿಹಳೇಧನುರ್ಬಾಣ ಪಾಶವ ಕೈಯಲಿ ಅಂಕುಶಆಯುಧ ಪಿಡಿದಿಹಳೇ 3 ದುಂಡು ಕೈಯವಳೇ ಸುಂದರ ಕಾಯಳೇಚಂಡ ಮುಂಡ ಸಂಹಾರಕಳೇಮಾಂಡಲಿಕಳೇ ಮಹದ್ಭೂತಳೇಮಹಾಯೋಗಿ ವಿಲಾಸಳೇದಂಡಿ ಕಿರೀಟಳೇ ದಂಡೆಯ ಮುಡಿದಿಹಗೊಂಡೆಯಂದೊಲಿದಾ ಜಡೆಯವಳೇಹಿಂಡು ಹಿಂಡಾದ ದೈತ್ಯರನೆಲ್ಲರ ಖಂಡಿಸಿದೇವಿ ತಾ ಕೊಂದಿಹಳೇ 4 ಆದಿರಹಿತಳೇ ಅಧ್ವಯ ರೂಪಳೇಅನಂತ ಕೋಟಿ ಪ್ರಭಾರೂಪಳೆಶುದ್ಧ ಬುದ್ಧಳೇ ನಿತ್ಯಮುಕ್ತಳೇಚಿದಾನಂದ ರೂಪಳೇಸದ್ಯೋಜಾತಳೇ ಸರ್ವಾತೀತಳೆಸಿದ್ಧ ಪರ್ವತ ಬಗಳೇಶುದ್ಧಾದ್ವೈತಳೆ ಸುಷುಮ್ನನಾಳಳೆಸೂಕ್ಷ್ಮವೆನಿಸುವಳೇ 5
--------------
ಚಿದಾನಂದ ಅವಧೂತರು
ಯೋಗಿಯ ಭಾವವು ಆರಿಗು ತಿಳಿಯದುಯೋಗಿಯೆಂದೆನಿಪುದು ಸುಖವೋ ದುಃಖವೋಪನಾದವ ಸಾಧಿಸಿ ನಾದವ ಭೇದಿಸಿನಾದಾನಂದದಲಿ ಮುಳುಗಿರ್ದುನಾದಾಮೃತವನು ಸವಿಸವಿದುಂಬುವನಾದ ಮೂರುತಿಯವ ನರನೋ ಹರನೋ1ಅಂತರ್ಲಕ್ಷ್ಯ ಬಹಿರ್ಲಕ್ಷ್ಯವನೊಂದನು ತರಿಸಿದೆ ಸಮನಿಸುತಿರ್ದುಸಂತತ ಪೂರ್ಣಾನಂದದಿ ಮುಳುಗಿ ನಿ-ರಂತರ ಸುಖಿಪುದು ಉರಿಯೋ ಸಿರಿಯೋ2ಬಯಲಾಟವ ನೋಡಿ ಬಯಲೆಲ್ಲವ ಮಾಡಿಬಯಲ ಬಗೆಗೆ ತಾ ಓಲಾಡಿಬಯಲಿಗೆ ಬಯಲು ಬಯಲಾಗಿರುತಿಹಬಯಲಾನಂದವು ಭಯವೋ ಜಯವೋ3ಮೂರವಸ್ಥೆಯ ಮೂವರಿಗೊಪ್ಪಿಸಿಬೇರೆ ಸಾಕ್ಷ್ಯಗೆ ತಾನಿರುತಿದ್ದುತೋರುವುದೆಲ್ಲ ತನ್ನತನವೆಂದರಿತುಶೂರನಾಗಿರುವುದು ಗೆಲುವೋ ಒಲವೋ4ಗುರುಕೀಲನೆ ನೋಡಿ ಗುರುವೆಲ್ಲವ ಮಾಡಿಗುರುಲೀಲೆ ಯಂತಿರುತಿದ್ದುಗುರುಚಿದಾನಂದ ಮೂರುತಿಯ ಕೂಡಿರುತಿಹಗುರುತರ ತಾನದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು