ನಿನ್ನ ನಾಮವೆ ಘನವಆಗಿದೆ
ನೆನೆವರಕಾವ ಕರುಣಿಯೆಂದು ಪ
ಪಾದ ಯುಗವನಾ ಕಾಣಬಲ್ಲನೆ
ಕೇಳಿ ಗರುಢಾ ರೂಢ
ನಾಗಿ ಬಂದು ಗಜವ ಕಾಯ್ದವನೆಂದು 1
ಸಂಗದಿಂದಲಿ ಯಿರುತಿರಲು
ಬಂದು ಯಮನ ದೂತರೆಳೆಯೆ ಭಯದಿ ತನ್ನ
ನಂದನ ಕರೆದರೊಂದು ನಾಮವೆ ಕಾದುದೆಂದು 2
ದುರುಳ ಕಶ್ಯಪುಸುತನ ಭಾಧಿಸೆ ಮೊರೆಯಿಡಲದನುಕೇಳಿ
ಭರದಿ ಕಂಬದಿ ಬಂದು ನರಹರಿಯಾಗಿ ನಿಂದು
ಕರದೊಳವನ ಕೊಂದು ತರಳನ ಕಾಯ್ದೆಯೆಂದು 3
ಅಂಬುಧಿಶಯನ ನಿನ್ನ ರುಕ್ಮಾಂಗದ
ಮೃತ್ಯವೆಂಬುದೆಲ್ಲವಗೆದ್ದು
ಕುಂಭಿನಿಯೊಳು ಪೆಸರೊಡೆದರೆಂಬುದ ಕೇಳಿ 4
ಓಲಗದೊಳು ಶಾಲೆಯ ಸುಲಿಯೆ ದ್ರುಪದ
ಭೀಮನಕೋಣೆ ಲಕ್ಷ್ಮೀ
ಲೋಲ ಸೀರೆಯ ಸೆರಗ ಬೆಳೆಸಿದ ನಾಮವೆಂದು 5