ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವನಾರೆ ಮನಸೂರೆಗೈದೋಡುವಾ ನವನೀತ ಮೆಲುವಾತ ಪರಿದೋಡುವಾ ಪ ಸವಿನೋಟ ರಸದೂಟವನೆ ಬೀರುವ ಸುವಿಲಾಸ ಪರಿಹಾಸಗಳ ತೋರುವ ಅ.ಪ ಓರೆನೋಟವ ತೋರುತ ನಲಿವ ಕ್ಷೀರವ ಕುಡಿವ ಬೆರಳಲಿ ಕರೆವ ಕೊರಳಿನ ಹಾರವ ಎಡಬಲಕೆಳೆವ ಕೊರಳನು ಕೊಂಕಿಸಿ ಪರಿಪರಿ ಕುಣಿವ 1 ನೀರಜನೇತ್ರನು ನೀರದ ಗಾತ್ರನು ನಾರಿಯತನುವನು ಬರಸೆಳೆಯುವನು ಚೋರನು ಭವಭಯಹಾರನು ಧೀರನು ಶ್ರೀರಮೆಯರಸನು ಮಾಂಗಿರಿವರನು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿ ನಿನ್ನ ದಾಸರ ಸೇವೆಯ ಕರುಣಿಸೆನಗೆ ಸುರಪತಿಯ ನಾನೊಲ್ಲೆನೈ ಪ ಸ್ಮರನ ಹಾವಳಿ ಬಿಡಿಸಿ ಗುರುಭಕ್ತಿಯನು ಕೊಟ್ಟು ನಿರುತವು ನಿನ್ನ ನಾ ಸ್ಮರಿಸುವಂದದಿ ಮಾಡು ಅ.ಪ ಎಷ್ಟು ಸ್ಥಿರ ಮಾಡಿದಾಗ್ಯು ಎನ್ನ ಮನ ಬಟ್ಟ ಕುಚೆಯರ ಬಲೆಗೆ ಸಿಲುಕುತಲಿ ಬಿಟ್ಟು ನಿನ್ನಯ ಧ್ಯಾನ ಕೆಟ್ಟುಪೋಗುತಲಿದೆ ದಿಟ್ಟ ನಿನ್ನ ಮಗನ ಬಲುಹಿನ್ನೆಷ್ಟೆಂದು ಪೇಳಲೊ 1 ಕುಸುಮಗಂಧಿಯರ ಓರೆನೋಟವೆಂಬ ಮಸೆದ ಕಣೆಯ ತಾನು ಪೂಡುತಲಿ ಎಸೆ ಮೋಹತಿಗೆ ನಾ ಸೈರಿಸಲಾರೆನೋ ಬಿಸಜನಾಭನೆ ನಿನ್ನ ಸುತಗೆ ಪೇಳೋ ಬುದ್ಧಿ 2 ಅಂಗನೆಯರ ಸವಿ ನುಡಿಗಳಿಗೆ ನಾ ಮರುಗಿ ಭೃಂಗದಂತವರ ಬಲೆಗೆ ಬೀಳದಂತೆ ಸಂಗ ಸುಜನರಲ್ಲಿ ಇತ್ತು ಕಾಯೊ ದೇವ ಅಂಗಜಪಿತ ಶ್ರೀ ರಂಗೇಶವಿಠಲನೇ 3
--------------
ರಂಗೇಶವಿಠಲದಾಸರು