ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನೆ ತಾನಾದನಮ್ಮಾ ಎನ್ನೊಳು ಘನಬ್ರಹ್ಮ ಧ್ರುವ ಕಣ್ಣಿಲೆ ನೋಡಲಿಕ್ಕೆ ಕಣ್ಣಿನೊಳಾದನಮ್ಮ ಕಣ್ಣಿಗೆ ಕಣ್ಣಾಗಿ ಪೂರ್ಣ ಕಾಣಿಸಿದಾನಂದೋಬ್ರಹ್ಮ ಅಣುರೇಣುದೊಳು ವ್ಯಾಪಿಸಿ ಜನ ಮನ ದೊಳು ತುಂಬಿಹ ತನುಮನದೊಳು ತಾನೆತಾನಮ್ಮ 1 ಎತ್ತ ನೋಡಿದತ್ತ ಸುತ್ತ ಸೂಸುವನಮ್ಮ ನೆತ್ತಿ ಒಳಗೆ ಪೂರ್ಣ ಮೊತ್ತವಾದ ಪರಬ್ರಹ್ಮ ಅನುದಿನ ಸಂತತ ಸದ್ಗುರು ಪೂರ್ಣ ಅಂತರಾತ್ಮದೊಳಗಿಹನಮ್ಮ 2 ನಾನು ನಾನೆಂಬುದಿದು ಇಲ್ಲದಂತಾಯಿತು ನಮ್ಮ ತಾನೆ ತಾನಾದ ನಿಜ ಓಮಿತ್ಯೇಕಾಕ್ಷರ ಬ್ರಹ್ಮ ಚೆನ್ನಾಗಿ ಮಹಿಪತಿಗೆ ಸನ್ಮತಸುಖದೋರಿತುಉನ್ಮನವಾಗ್ಯೆನ್ನೊಳಗೆ ಘನಸುಖ ಹೊಳೆಯಿತು ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾದದ ಮನಿಯು ತಿಳಿಯದೆ ಬಾರದು ಸಾಧಿಸಿ ಸದ್ಗತಿ ಸುಖ ಭೇದಿಸಿ ತಿಳಿದರೆ ಬೋಧದಿ ಮನವು ಎದುರಿಡುವದು ಧ್ರುವ ತನುವಿನೊಳಿಹ ಪ್ರಣಮವು ಮುನಿಜನಗಳಿಗಿದೆ ಸಾಧನ ಮುಖ್ಯವು ಸ್ವಾನಂದದ ಸುಖಧನವು ಏನ ಬಲ್ಲವು ಖೂನದ ಮಾತು ಹೀನ ಮರುಳ ಜನವು ತಾನೆ ತಾನಾಗಿಹುದು ಓಮಿತ್ಯೇಕಾಕ್ಷರದ ಘನವು 1 ಬಲು ತಾಳ ಭೇರಿ ಮೃದಂಗ ಬ್ರಹ್ಮಾನಂದದ ಸುಖದೋರುವದು ಮೇದಿನಿಯೊಳು ಸತ್ಸಂಗ ಒಮ್ಮನನಾದರೆ ಸಾಧಿಸಿಬಹುದು ಸುಮ್ಮನೆ ಪ್ರಾಣಲಿಂಗ ಕೇಳುವದಂತರಂಗ 2 ಅನುದಿನ ಧಿಮ ಧಿಮಾಟ ಹಾದಿ ತೋರಿಕೊಟ್ಟಿತು ಅಧ್ಯಾತ್ಮದ ಸದ್ಗುರುವಿನ ದಯನೋಟ ಸುಪಥ ನೀಟ ಮಣಿಮುಕುಟ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು