ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತಹುದೊ ನಿನ್ನಯ ಭಕುತಿ ಎನಗೆ - ಶ್ರೀ-ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ಪ ಸುಕೃತ ಫಲವು ಮೊದಲಿನಿತಿಲ್ಲಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ-ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು 1 ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳಓದಿದವನಲ್ಲ ನಿನ್ನಯ ಭಕುತಿಗಧಿಕವಾದ ಇನ್ನೊಂದೇನನುಸುರುವೆನು ನಾ ಮುನ್ನ ಸಂ-ಪಾದಿಸುವ ಭಕುತಿ ಇನ್ನೆಂತಿಹುದೊ ದೇವ 2 ಇಂದು ಪರಿಯಂತರವುಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನುಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಹುದೀಕಷ್ಟ ಶರೀರದೊಳು ತೊಳಲಲಾರೆನು ಹರಿಯೆ 3 ನರಜನ್ಮವೆಂಬ ಪಾತಕದ ಪಂಜರದೊಳಗೆಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿಎರವಿನ ಮಾತಾಪಿತರನುಜರೆಂಬಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು 4 ಇನಿತುಪರಿಯಲಿ ನಾನು ಹಲುಬಿದೊಡೆನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯುನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟಕನಕಾದ್ರಿಯೊಳು ನೆಲಸಿದಾದಿಕೇಶವರಾಯ 5
--------------
ಕನಕದಾಸ
ನೀನಿರುವುದನು ಕಾಣದವನು ಪ ಮಾನವ ನಾನು ಧ್ಯಾನವರಿಯದ ನರನು ನಾನಾಪರಾಧಗಳ ಮಾಡಿದವನು ಅ.ಪ ಬೆಣ್ಣೆ ಹಾಲಿನೊಳುಂಟು ಎಣ್ಣೆ ಎಳ್ಳಿನೊಳುಂಟು ಕಣ್ಣರಿಯದಗ್ನಿಯು ಶಮಿಯೊಳುಂಟು ಮಣ್ಣಿನಲಿ ಜಲವುಂಟು ಜಲದಿ ಲವಣಗಳುಂಟು ನೀನೆಲ್ಲರೊಳಗುಂಟು ಎಂದೆಂಬುದರಿಯದ 1 ವೇದಶಾಸ್ತ್ರಪುರಾಣ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಮಾಡಿದವನಲ್ಲ ಆದಿ ಕೇಶವಪಾದ ಪೂಜೆಗೈದವನಲ್ಲ ಆದರಿಸಿ ಕಾಯಯ್ಯ ನೀ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಾದದರ್ಶನವೀಯೈ ಜಾನಕೀನಾಥ ಪ ವೇದ ವೇದಾಂತಗಳ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಭೇದ ಎನಗಿಲ್ಲ ಅ.ಪ ಪಾತಕಂಗಳ ಗೈದು ಭೀತನಾಗಿಹೆನಯ್ಯ ನೀತಿನಿಯಮಗಳಿಂದ ದೂರ ನಾನು ಈತಿ ಬಾಧೆಗಳಿಂದ ನಾ ತಪಿಸುತಿಹೆನಯ್ಯ ಮಾತುಮಾತಿಗೆ ನಿನ್ನ ನಾಮ ಜಪವೀಯೆಂದು 1 ಕೆಸರೊಳಗೆ ಹಾಕುವೆಯೊ ಹೊಸ ಜನುಮವೀಯುವೆಯೊ ಬಿಸಜಾಕ್ಷ ನಿನ್ನ ಮನಬಂದಂತೆ ಮಾಡೊ ಉಸಿರಾಡುವನ್ನೆಗಂ ನಿನ್ನ ಭಜನೆಯ ಗೈಸಿ ರಸ ಕಸಗಳೊಂದೆನಿಸೊ ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಧ್ವ ಸರೋವರದ ಸ್ನಾನವ ಮಾಡಿರೊ ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ಪ ತ್ರೇತಾಯುಗದಲ್ಲಿ ವರುಣತೀರ್ಥ ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ- ನ್ನತ ಕಲಿಯುಗದಲ್ಲಿ ಮಹಾ ತೀರಿಥ 1 ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ- ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ ನಿರುತದಲ್ಲಿ ತೀವ್ರಗತಿ ಕೊಡುವಳೂ2 ಸಕಲ ವೇದಶಾಸ್ತ್ರ ಓದಿದವನಾದರೂ ಶಕುತಿವಂತನಾಗಿ ಇದ್ದನಾಗೆ ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು ಶಕಲ ಮತಿಯಲಿ ಮಹಾನರಕ ಭುಂಜಿಸುವಾ 3 ಮಜ್ಜನ ತಂದು ಕೊಡುವದು ನರಗೆ ಮಿಂದ ಫಲವೊ ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು 4 ಛೇದಿಸುವದಕೆ ಇದೇ ಸ್ನಾನವೆನ್ನಿ ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ5
--------------
ವಿಜಯದಾಸ
ಸೇರಿ ಬದುಕುವೆ ನಮ್ಮ ಸ್ವಾಮಿಯಂಘ್ರಿಯನುಭೂರಿ ದೋಷಗಳನ್ನು ಬಯಲ ಮಾಳ್ಪುದನು ಪನಿರ್ಗುಣದ ರೂಪವದು ನಿಲುಕದೆಂದಿಗೂ ಮನಕೆದುರ್ಗುಣದ ಪುಂಜಕ್ಕೆ ದೊರಕುವುದೆ ಹುಡುಕೆಅರ್ಗಳದ ವೃತ್ತಿಗಳಲಾಳಿ ಮುಳುಗಿರಲಿದಕೆಮುಗ್ಗಿ ಮೋಹಿಪ ನಾನು ಮಥಿಸಲಿನ್ನೇಕೆ 1ಸಗುಣಮೂರ್ತಿಯ ನೋಡೆ ಸ್ಥಿರದಿ ಬುದ್ಧಿಯು ನಿಲದುಅಗಣಿತದ ವಾಸನೆಯೊಳತಿಬದ್ಧವಡೆದುಬಿಗಿ ಭದ್ರವಾಗಿರಲು ಬಹು ಕರ್ಮವೆಳೆದೆಳೆದುಬಗೆಯದನು ನೆರೆ ನೋಡಿ ಬಿಟ್ಟದನು ಜರೆದು 2ಧ್ಯಾನಿಪರು ಧ್ಯಾನಿಸಲಿ ಧೈರ್ಯದಲಿ ಬ್ರಹ್ಮವನುಜ್ಞಾನಿಗಳು ತಿಳಿಯಲಾ ಗೂಢ ತತ್ವವನುಮಾನರಹಿತರು ಹರಿಗೆ ಮಾಡಲಾ ಕರ್ಮವನುನಾನೊಂದನೊಡಬಡೆನು ನೋಡಿ ಕಠಿಣವನು 3ವೇದಶಾಸ್ತ್ರಗಳೋದಿ ವಾದಿಸಲಿ ವಾದಿಗಳುಸಾಧಿಸಲಿ ಸ್ವರ್ಗವನು ಸಕಲ ಶ್ರೌತಿಗಳುಬೋಧಿಸಲಿ ಪರರಿಂಗೆ ಬಹುತತ್ವಭೇದಿಗಳುಮಾಧವನಿಗೆರಗುವದೆ ಮತವೆನಗೆ ಕೇಳು 4ಪಾದಪದ್ಮವನಂಬಿ ಪಡೆದರಮಿತರು ಗತಿಯ ಓದಿದವರೈದಿದರು ವಾಸನೆಯ ಬಗೆಯಕಾದು ರಕ್ಷಿಪುದಂಘ್ರಿ ಕೊಡುವುದಮಿತದ ಸಿರಿಯವಾದಿಸದೆ ನಂಬಿದೆನು ವಿಧಿಜನಕನಡಿಯ 5ಇದು ತಾನೆ ಲೋಕಗಳನೆಲ್ಲವಾಳುವ ದೊರೆಯುಇದು ತಾನೆ ಯೋಗಿಗಳಿಗಿದಿರಾದ ಬಗೆಯುಇದು ವಿಷಯದೊಳಗಿರುವರೆಬ್ಬಿಸುತ್ತಿಹ ಸುಧೆಯುಇದನೆ ನಾನಂಬಿದೆನು ಯಾಕೆ ಕರೆಕರೆಯು 6ತರುಬಿ ನಿಂದಿದೆ ಲೋಕ ತತ್ಪಾದಪದ್ಮವನುಹೊರೆಯುತಿಹುದಾ ಜನವ ಹೊಣೆಯಾಗಿ ತಾನು ತಿರುಪತೀಶ್ವರ ನನಗೆ ತೋರ್ದನೀ ಮತಿಯನ್ನುವರದೇಶ ನನಗೊಲಿದವೊಡೆಯ ವೆಂಕಟನು 7ಓಂ ತೀರ್ಥಪಾದಾಯ ನಮಃ
--------------
ತಿಮ್ಮಪ್ಪದಾಸರು
ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ ಮಾನವರೊಂದೊಂದೂಣೆಯ ನುಡಿವರು 1ಬಾಣವನೆಸೆದು ಬಿಲ್ಲನಡಗಿಸುವಂತೆಆ ನಿಂದಕರು ನಿಂದಿಶಾಣೆಗೆ ನಿಲುವರು 2ಮಾಧವನಾನೇನು ಓದಿದವನಲ್ಲ ಶ್ರೀಪಾದವೆ ಗತಿಯೆಂಬೆ ಬಾಧಿಸುತೈದಾರೆ 3ಅಪರಿಮಿತಪರಾಧಿ ಕಪಟಿ ನಾನಾಗಿಹೆಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿನಿನ್ನ ಭಕ್ತರ ಸಂಗ ಕೊಡು ಕಾಣೊ5
--------------
ಪ್ರಸನ್ನವೆಂಕಟದಾಸರು