ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉ. ತತ್ವ ವಿವೇಚನೆ ಹರಿಯಾದರೇನು ತಾ ಹರನಾದರೇನು ಮೂರ್ತಿ ದೊರಕಿ ಫಲವೇನು ಪ ಪಿತನೊಳಗೆ ಸೇರದಿಹ ಸುತನಿಂದ ಫಲವೇನು ಸತಿ ಇದ್ದರೇನು ಮತಿಹೀನ ಗುರು ತಾನು ಜೊತೆಯಾಗಿ ಇದ್ದರೇನು ಮತ ಮೀರಿ ನಡೆವಾತ ಯತಿಯಾದರೇನು 1 ಸಾಯವಿಲ್ಲದ ನ್ಯಾಯ ಸತ್ಯವಾದರೆ ಏನು ಬಾಯಸವಿಯಿಲ್ಲದ ರಸಾಯನದಲೇನು ಕಾಯ ಕುಂದಿದ ಮೇಲೆ ಜೀವದಾಶೆಯದೇನು ಮಾಯವಾದಿಯ ಮಾತು ಮತ್ತೆ ದೃಢವೇನು 2 ಋಣವ ಮಾಡಿದ ತಾತ ಗುಣವಂತನಾದರೇನು ಭಣಿತೆ ತಪ್ಪಿದ ತಾಯಿ ರಕ್ಷಿಣಿಯು ಆದರೇನು ಎಣಿಕೆ ಬಾರದ ಮನುಜ ಕರಣಿಕನಾದರೇನು ಫಣಿರಾಜನೊತ್ತಿನೊಳು ಹಣವಿದ್ದರೇನು 3 ವಿಪ್ರ ವೇದ ಓದಿದರೇನು ಮಾದಿಗನು ತಾ ಮಡಿಯನುಟ್ಟರೇನು ಬೂದಿಮುಚ್ಚಿದೆ ಕೆಂಡವಾದ ಸೋದರವೇನು ಸಾಧಿಸುವ ಊರೊಳಗೆ ಆದ ಫಲವೇನು 4 ಹರಿಯನರ್ಚಿಸದಿರ್ದ ಕರವಿರ್ದು ಫಲವೇನು ಹರಿಯ ಸ್ಮರಣೆಯ ಮಾಡದರಿಯದವನೇನು ಸಿರಿಯು ನಿಲ್ಲದ ಗೃಹದ ಪರಿಯ ಸೌಖ್ಯವದೇನು ಮರೆಯಾದ ಮನುಜನೊಳು ವ್ಯವಹಾರವೇನು 5 ವಾರಿಯಿಲ್ಲದ ಊರ ಸೇರಿರ್ದು ಫಲವೇನು ಚೋರನೊಡನೇ ದಾರಿ ನಡೆವುದೇನು ಬೇರು ಇಲ್ಲದ ವೃಕ್ಷ ಏರಿ ನೋಡುವುದೇನು ಮಾರಿ ಮನೆಯೊಳಗಿರಲು ಸಾಕಾರವೇನು 6 ಲಕ್ಷಣದ ಮೂರ್ತಿಯಿರಲಕ್ಷಯವ ತೋರುವುದು ಪಕ್ಷಿವಾಹನ ಲಕ್ಷ್ಮ್ಯಪೇಕ್ಷೆಯಾಗಿಹರು ಲಕ್ಷಣವಿರಹಿತ ನರ ಪ್ರದಕ್ಷಿಣದಿ ಬಳಲಿದರು ಭಿಕ್ಷುಕನೇ ಸರಿಯಾತನೀಕ್ಷಿಸರು ಜನರು 7 ಬುದ್ದಿವಂತರ ಕೈಯ ಶುದ್ಧವಾದೆರಕದಲಿ ತಿದ್ದಿರ್ದ ಮೂರ್ತಿಯನು ಕದ್ದುಕೊಂಡು ಹೊದ್ದಿ ಬಲವಂತನೊಳು ಬದ್ದವಾಗಿರುತಿರ್ದು ಎದ್ದು ಹೋಗದ ಸ್ಥಳದಿ ಮುದ್ದನಾಗಿಹುದು 8 ಕಾಮಿತಾರ್ಥನೀವ ಸೀಮೆಯಲಿ ಕೌರವನು ರಾಮರಾಜ್ಯದಿ ಬೇಡಿಕೊಳಲು ಕೊಡುತಿಹನು ಪ್ರೇಮದೊಳು ವರಾಹತಿಮ್ಮಪ್ಪ ಮನದಣಿಯೆ ಸೌಮನಸ್ಯವೀವ ಬರಿದೆ ಬಳಲದಿರು 9
--------------
ವರಹತಿಮ್ಮಪ್ಪ
ಏನಾದರೇನು ಮೋಕ್ಷವಿಲ್ಲ ಜ್ಞಾನವಿಲ್ಲದೆ ಪÀ ವೇದ ಓದಿದರೇನು ಶಾಸ್ತ್ರ ನೋಡಿದರೇನು | ಕಾದಿ ಕಾದಾಡಿ ಗೆದ್ದರೇನು | ಜ್ಞಾನವಿಲ್ಲದೆ 1 ಕಾನನ ಸೇರಿದರೇನು | ಕಾಶಿ ಪೀತಾಂಬರ ಉಟ್ಟರೇನು, ಜ್ಞಾನವಿಲ್ಲದೆ 2 ಜಪತಪ ಮಾಡಲೇನು, ಜಾಣತನ ಮೆರೆದರೇನು | ವಿಜಯವಿಠಲನ ಸಾರಿದರೇನು, ಜ್ಞಾನವಿಲ್ಲದೆ 3
--------------
ವಿಜಯದಾಸ
ಬರಿದೆ ದಣಿಯಬೇಡಿ | ಬಯಲ ಸಾಧನ ಕೂಡಿ | ನೆರೆ ಮಾಡಿ ಸಾಧು ಸಂತರಾ | ದಯವಂತರಾ ಪ ಏನು ಓದಿದರೇನು | ಏನು ಕೇಳಿದರೇನು | ಜ್ಞಾನಿಗಳೊಡನಾಡದೇ | ಅನುಭವವಾಗುದೇ 1 ಬುಡದಲಿ ಫಲವಿದೆ | ತುದಿಮರನೇರುವರೇ | ಬಿಡು ಬಿಡು ನಾನಾ ಸಾಯಸಾ | ಭ್ರಾಂತಿ ವೇಷಾ 2 ಗುರು ಮಹಿಪತಿ ನುಡಿ | ಸಾರಿದ ನಂದ ನೋಡಿ | ಮರೆಯದೆ ಮಾಡಿ ಸಾಧನಾ | ಹರುಷ ನಿಧಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ ತನುವನಾಗಿದ್ದವಗೆಲ್ಲಿಹುದು ಙÁ್ಞನ ಧ್ರುವ ನಿಗಮ ಓದಿದರೇನು ಅಗಮ ಹೇಳಿದರೇನು ಬಗೆ ಬಗೆ ವೇಷ ಜಗದೊಳುದೋರಿದರೇನು 1 ಮಠವು ಮಾಡಿದರೇನು ಅಡವಿ ಸಾರಿದರೇನು ಸಠೆ ಮಾಡಿ ಸಂಸಾರ ಹಟವಿಡಿದರೇನು 2 ನಿಗದಿ ಹಾಕಿದರೇನು ಗಗನಕ್ಹಾರಿದರೇನು ಮಿಗಿಲಾಗಿದೋರಿ ಬಗವಿಯ ಪೊದ್ದರೇನು 3 ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು ದೇಹ ದಂಡಿಸಿ ಹರವ ತೊರೆದರೇನು 4 ಮನಕೆ ಮೀರಿಹ್ಯ ಸ್ಥಾನ ಘನಸುಖದಧಿಷ್ಠಾನ ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ನೂ ದಯ ಬಾರದೇ-ದಾಸನ ಮೇಲೆ-ಇನ್ನೂ ದಯ ಬಾರದೇ ಪಮುನ್ನ ಮಾಡಿದ ದುಷ್ಕರ್ಮಗಳೆಲ್ಲವಮನ್ನಿಸಿ ಕಳೆವುದು ಇಂದಿರೆಯ ರಮಣಾ ಅ.ಪನಾನಾ ಜನ್ಮಗಳಲಿ ನಾನಾ ಜಾತಿಗಳಲಿನಾನಾ ಯೋನಿಗಳಲಿ ಜನಸಿ ಜನಿಸಿ ದೇವಾ ||ನಾನು ನನ್ನದು ಎಂದು ನರಕದೊಳಗೆ ಬಿದ್ದುನೀನೆ ಗತಿಯೆಂದು ಸ್ಮರಣೆ ಮಾಡಿದ ಮೇಲೆ 1ಕಾಮಾದಿ ಷಡುವರ್ಗ ಗಾಢಾಂಧಕಾರದಿಪಾಮರನಾಗಿ ಇದ್ದಂಥ ಪಾತಕನ ||ರಮಾಮನೋಹರಹರಿನೀನೇ ಗತಿಯೆಂದುನಾಮಾಮೃತವನು ಪಾನ ಮಾಡಿದ ಮೇಲೆ 2ಏನ ಓದಿದರೇನು ಏನ ಕೇಳಿದರೇನುಈ ನಾಮ ಸ್ಮರಣೆಗೆ ಸರಿಬಾರದು ||ಙ್ಞÕನಹೀನನ ಮೇಲೆ ದಯವಿಟ್ಟು ಪಾಲಿಸುದೀನ ದಯಾಕರಪುರಂದರವಿಠಲನೆ3
--------------
ಪುರಂದರದಾಸರು
ಏನೇನ ಮಾಡಿದರೇನು ಫಲವಯ್ಯಭಾನುಕೋಟಿತೇಜಶ್ರೀನಿವಾಸನ ಭಜಿಸದೆಪ.ಹಲವು ಓದಿದರೇನು ಹಲವು ಕೇಳಿದರೇನುಜಲದೊಳ ಮುಳುಗಿ ಕುಳಿತಿದ್ದರೇನುಛಲದಿಂದ ಮುಸುಕಿಟ್ಟು ಬೆರಳನೆಣಿಸಿದರೇನುಚೆಲುವ ದೇವನೊಳು ಎರತವಿಲ್ಲದಾತನ 1ಅನ್ನ ಜರೆದು ಅರಣ್ಯ ಚರಿಸದರೇನುಉನ್ನತ ವ್ರತಗಳಾಚಾರಿಸಿದರೇನುಚೆನ್ನಗಾತಿಯ ಸಂಗ ಬಿಟ್ಟು ಇದ್ದರೇನುಗಾನ ಲೋಲುನಲಿ ಎರಕವಿಲ್ಲದನಕ 2ಬತ್ತಲೆ ತಿರುಗಿ ಅವಧೂತನೆನಿಸಿದರೇನುತತ್ವ ವಾಕ್ಯಂಗಳ ಪೇಳಿದರೇನುಚಿತ್ತಜನಯ್ಯ ಶ್ರೀ ಪುರಂದರವಿಠಲನಚಿತ್ತದೊಳಿರಿಸಿ ಒಲಿಸಿಕೊಳ್ಳದನಕ 3
--------------
ಪುರಂದರದಾಸರು